ಮಂಗಳೂರು ಮಳಲಿ ಮಸೀದಿ ಕೇಸ್ಗೆ ವಕ್ಫ್ ಬೋರ್ಡ್ ಎಂಟ್ರಿ ಆಗುತ್ತೆ: ಜಿಲ್ಲಾ ಸಮಿತಿ ಅಧ್ಯಕ್ಷ ಸ್ಪಷ್ಟನೆ
ಮಂಗಳೂರಿನಲ್ಲಿ ವಕ್ಫ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿಎ ನಾಸೀರ್ ಲಕ್ಕಿಸ್ಟಾರ್ ಟಿವಿ9 ಜೊತೆ ಮಾತನಾಡಿದ್ದು, ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ವಕ್ಫ್ ಬೋರ್ಡ್ ಸಹ ಎಂಟ್ರಿ ಆಗುತ್ತೆ. ಇನ್ನು ಸಂಪೂರ್ಣ ಪ್ರಕರಣ ವಕ್ಫ್ ಬೋರ್ಡ್ ಹಾಗೂ ಮಸೀದಿ ಕಮಿಟಿ ಮೂಲಕ ನಡೆಯಲಿದೆ ಎಂದು ಹೇಳಿದ್ದಾರೆ. ಹೈಕೋರ್ಟ್ನಲ್ಲಿ ಯಾವುದೇ ವಿಜಯದ ತೀರ್ಪು ಬಂದಿಲ್ಲ. ಈ ತೀರ್ಪು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡಲಾಗಿದೆ ಎಂದು ಹೇಳಿದರು.
ಮಂಗಳೂರು, ಫೆಬ್ರುವರಿ 3: ಮಳಲಿ ಮಸೀದಿ (Malali Masjid) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ವಕ್ಫ್ ಬೋರ್ಡ್ ಸಹ ಎಂಟ್ರಿ ಆಗುತ್ತೆ. ಇನ್ನು ಸಂಪೂರ್ಣ ಪ್ರಕರಣ ವಕ್ಫ್ ಬೋರ್ಡ್ ಹಾಗೂ ಮಸೀದಿ ಕಮಿಟಿ ಮೂಲಕ ನಡೆಯಲಿದೆ ಎಂದು ವಕ್ಫ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿಎ ನಾಸೀರ್ ಲಕ್ಕಿಸ್ಟಾರ್ ಟಿವಿ9 ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆಲ ಮಾಧ್ಯಮದಲ್ಲಿ ಬರುತ್ತಿರುವ ಹಾಗೆ ಕೋರ್ಟ್ನಲ್ಲಿ ಟ್ರಯಲ್ ನಡೆದೇ ಇಲ್ಲ. ಹೈಕೋರ್ಟ್ನಲ್ಲಿ ಜನವರಿ 31 ರಂದು ಕೆಳ ನ್ಯಾಯಾಲಯದಲ್ಲಿ ಇದು ವಕ್ಫ್ ಆಸ್ತಿ ಹೌದಾ ಅಲ್ವಾ ಎಂದು ತನಿಖೆ ಮಾಡಿ ಎಂದು ಆದೇಶ ನೀಡಲಾಗಿದೆ. ಅದರಂತೆ ಇನ್ನು 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಹೈಕೋರ್ಟ್ನಲ್ಲಿ ಯಾವುದೇ ವಿಜಯದ ತೀರ್ಪು ಬಂದಿಲ್ಲ. ಈ ತೀರ್ಪು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡಲಾಗಿದೆ ಎಂದು ಹೇಳಿದರು.
ಮಸೀದಿಯಲ್ಲಿ ದೇವಾಲಯದ ಮಾದರಿ ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗಂಜಿಮಠ ಬಳಿಯಿರುವ ಮಳಲಿ ಗ್ರಾಮದಲ್ಲಿರುವ ಅಸ್ಸಾಯ್ಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ನವೀಕರಿಸಲಾಗಿದೆ. ಆ ವೇಳೆ ಇದು ಹಿಂದು ದೇವಾಲಯದ ಮಾದರಿಯಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಏಪ್ರಿಲ್ 21 ರಂದು ವಿಶ್ವ ಹಿಂದು ಪರಿಷತ್ ಅಲ್ಲಿಗೆ ಭೇಟಿ ನೀಡಿದಾಗ ಮಸೀದಿಯ, ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು.
ಇದನ್ನೂ ಓದಿ: ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ: ಹಿಂದೂ ಪರ ಸಂಘಟನೆಯಿಂದ ಗಣಹೋಮ
ವಿಚಾರ ಜಿಲ್ಲಾಡಳಿತಕ್ಕೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳದಲ್ಲಿ ಅಂದಿನಿಂದ ಒಂದು ಕೆ.ಎಸ್.ಆರ್.ಪಿ ತುಕಡಿಯನ್ನು ನಿಯೋಜಿ ಭದ್ರತೆ ನೀಡಲಾಗುತ್ತಿದೆ. ಈ ನಡುವೆ ಪುರಾತತ್ವ ಇಲಾಖೆ ಈ ಸ್ಥಳದ ಇತಿಹಾಸ ಹುಡುಕಲು ಆರಂಭಿಸಿತ್ತು. ಇತ್ತ ವಿಶ್ವ ಹಿಂದು ಪರಿಷತ್ ನ್ಯಾಯಾಲಯದ ಮೊರೆ ಹೋಗಿ ಈ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು.
ಅದಾದ ಬಳಿಕ ವಿಶ್ವ ಹಿಂದು ಪರಿಷತ್ ಅಲ್ಲಿ ಅಷ್ಟಮಂಗಲ ಪ್ರಶ್ನೆ ಮಾಡಿಸುವ ನಿರ್ಧಾರ ಮಾಡಿತ್ತು. ಈ ಬಗ್ಗೆ ಇಂದು ಮಳಲಿಯಲ್ಲಿ ಒಂದು ಸಭೆ ಮಾಡಲಾಯ್ತು. ಸಭೆಯಲ್ಲಿ ಅಷ್ಟಮಂಗಳ ಪ್ರಶ್ನೆಗೂ ಮುನ್ನ ತಾಂಬೂಲ ಪ್ರಶ್ನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಮಂಗಳೂರು ಮಳಲಿ ಮಸೀದಿ ವಿವಾದ: ವಿಎಚ್‌ಪಿ ಅರ್ಜಿ ವಿಚಾರಣೆಗೆ ಅಂಗೀಕಾರ, ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ
ಮಸೀದಿ ಜಾಗದಲ್ಲಿ ಶಿವ ದೇವಾಲಯ ಇದ್ದ ಬಗ್ಗೆ ಹಿಂದೂ ಸಂಘಟನೆಗಳು ವಾದ ಮಾಡಲಾಗಿತ್ತು. ತಂಬೂಲ ಪ್ರಶ್ನೆಯಲ್ಲಿ ಹಿಂದು ದೇವಲಾಯ ಎಂದು ಕಂಡು ಬಂದರೆ ಅದಕ್ಕೆ ಒಂದು ಸಮಿತಿ ಮಾಡಲಾಗುತ್ತದೆ. ಅಷ್ಟಮಂಗಳ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ವಿಎಚ್‌ಪಿ ಯೋಜನೆ ಮಾಡಿತ್ತು. ಇನ್ನು ಮಸೀದಿ ಆಡಳಿತ ಮಂಡಳಿ ಮತ್ತು ಸ್ಥಳೀಯ ಮುಸ್ಲಿಮರು ಯಾವುದೇ ರೀತಿ ಪ್ರತಿಕ್ರಿಯೆ ನೀಡಲು ಮುಂದಾಗಿರಲಿಲ್ಲ. ಈ ಬಗ್ಗೆ ಕಾನೂನು ಮೊರೆ ಹೋಗಿ ನಮ್ಮ ಮಸೀದಿ ಉಳಿಸಿಕೊಳ್ಳುತ್ತೇವೆ ಅಂತಾ ಅವರು ಮೌನಕ್ಕೆ ಶರಣಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.