90 ಲಕ್ಷ ಮೌಲ್ಯದ ಅಂಬರ್ ಗ್ರಿಸ್ ವಶಕ್ಕೆ ಪಡೆದು ಮೂವರನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸ್

ಆರೋಪಿಗಳು ಪಣಂಬೂರು ಬೀಚ್ ಬಳಿ ಅರಣ್ಯ ಮತ್ತು ಪರಿಸರ ಕಾನೂನಿನಡಿಯಲ್ಲಿ ನಿಷೇಧಿತ ವಸ್ತುವಾದ ಅಂಬರ್ ಗ್ರಿಸ್ (ಅಪಾಯಕಾರಿ ವೀರ್ಯ ತಿಮಿಂಗಿಲದ ವಾಂತಿ / ಮಲ ವಸ್ತು) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

90 ಲಕ್ಷ ಮೌಲ್ಯದ ಅಂಬರ್ ಗ್ರಿಸ್ ವಶಕ್ಕೆ ಪಡೆದು ಮೂವರನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸ್
ಅಂಬರ್ ಗ್ರಿಸ್
Edited By:

Updated on: Sep 12, 2023 | 8:59 AM

ಮಂಗಳೂರು,ಸೆ.12: ಅಂಬರ್ ಗ್ರೀಸ್ ಅನ್ನು(Ambergris)  ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರು ಬೀಚ್ ಬಳಿ ಸೆ.11ರಂದು ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ 900 ಗ್ರಾಂ ಅಂಬರ್ ಗ್ರಿಸ್ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರ ಅಪರಾಧ ವಿಭಾಗದ ಪೊಲೀಸರು ಸೋಮವಾರ ಪಣಂಬೂರು ಬೀಚ್ ಬಳಿ ದಾಳಿ ನಡೆಸಿದರು. ಈ ವೇಳೆ ಮೂವರನ್ನು ಬಂಧಿಸಿ, ಅಂಬರ್ ಗ್ರಿಸ್ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ಉಡುಪಿಯ ಸಾಲಿಗ್ರಾಮ ಗ್ರಾಮದ ಜಯಕರ (39), ಶಿವಮೊಗ್ಗದ ಸಾಗರ ಮೂಲದ ಆದಿತ್ಯ (25) ಮತ್ತು ಹಾವೇರಿ ಜಿಲ್ಲೆ ಶಿಗ್ಗಾಂವ ಮೂಲದ ಲೋಹಿತ್ ಕುಮಾರ್ ಗುರಪ್ಪನವರ್ (39) ಬಂಧಿತ ಆರೋಪಿಗಳು.

ಪೊಲೀಸರ ಪ್ರಕಾರ, ಆರೋಪಿಗಳು ಪಣಂಬೂರು ಬೀಚ್ ಬಳಿ ಅರಣ್ಯ ಮತ್ತು ಪರಿಸರ ಕಾನೂನಿನಡಿಯಲ್ಲಿ ನಿಷೇಧಿತ ವಸ್ತುವಾದ ಅಂಬರ್ ಗ್ರಿಸ್ (ಅಪಾಯಕಾರಿ ವೀರ್ಯ ತಿಮಿಂಗಿಲದ ವಾಂತಿ / ಮಲ ವಸ್ತು) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಬಳಿಯಿದ್ದ 90 ಲಕ್ಷ ಮೌಲ್ಯದ 900 ಗ್ರಾಂ ಅಂಬರ್ ಗ್ರಿಸ್ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಐಪಿಎಸ್ ಮತ್ತು ಡಿಸಿಪಿ ಅಪರಾಧ ಮತ್ತು ಸಂಚಾರ ಡಿಸಿಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:  ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಅಸಹಜ ಸಾವು, ನಿಫಾ ವೈರಸ್ ಆತಂಕ

ಏನಿದು ಅಂಬರ್ ಗ್ರಿಸ್

ಸಾಮಾನ್ಯವಾಗಿ ತಿಮಿಂಗಲ ವಾಂತಿಗೆ ಅಂಬರ್ ಗ್ರಿಸ್ ಎನ್ನತ್ತಾರೆ. ಇದಕ್ಕೆ ದೇಶದಲ್ಲಿ ಭಾರೀ ಬೇಡಿಕೆ, ಬೆಲೆ ಇದೆ. 1 ಕೆ.ಜಿ. ತಿಮಿಂಗಿಲ ವಾಂತಿಗೆ ಒಂದು ಕೋಟಿ ರೂ.ಗಿಂತ ಅಧಿಕ ಬೆಲೆ ಇದೆ. ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ. ಬದಲಿಗೆ ತಿಮಿಂಗಿಲದ ಹೊಟ್ಟೆಯಲ್ಲಿ ಸೃಷ್ಟಿಯಾಗಿ ಗುದದ್ವಾರದಿಂದ ಹೊರಬರುವ ಮೇಣದಂತಹ ವಸ್ತು.

ಸ್ಪರ್ಮ್ ವೇಲ್‌’ ಎಂಬ ತಿಮಿಂಗಿಲ ತಳಿಯೊಂದರಿಂದ ಅಂಬರ್ ಗ್ರಿಸ್ ಹೊರ ಬರುತ್ತದೆ. ಈ ಸ್ಪರ್ಮ್ ವೇಲ್‌ಗಳು 49ರಿಂದ 59 ಅಡಿ ಉದ್ದ ಇರುತ್ತವೆ. 35ರಿಂದ 45 ಟನ್‌ ಭಾರದ ದೈತ್ಯ ಪ್ರಾಣಿಗಳು. ಸ್ಪರ್ಮ್ ವೇಲ್‌ ತಲೆಯಲ್ಲಿ ಎಣ್ಣೆಯಂತಹ ದ್ರವ ಇರುತ್ತದೆ. ಪುರಾತನ ನಾಗರಿಕತೆಯ ಕಾಲದಲ್ಲಿ ದೀಪಗಳನ್ನು ಬೆಳಗಲು ಈ ಸ್ಪರ್ಮ್ ವೇಲ್‌ಗಳನ್ನು ಕೊಂದು ಅದರ ಎಣ್ಣೆ ಸಂಗ್ರಹಿಸುವ ಪದ್ಧತಿ ಇತ್ತು.

ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ