AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ; ನಿಷೇಧಿತ MDMA ಡ್ರಗ್ಸ್ ಮಾರಾಟ ಮಾಡ್ತಿದ್ದ ವ್ಯಕ್ತಿ ಸೆರೆ

ಮಂಗಳೂರು ನಗರದ ಉಳ್ಳಾಲ ಒಂಬತ್ತು ಕೆರೆ ಪರಿಸರದಲ್ಲಿ ಮಾರಾಟಕ್ಕೆ ಯತ್ನಿಸಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ಆರೋಪಿ ಸಮೇತ 2 ಲಕ್ಷ 25 ಸಾವಿರ ಮೌಲ್ಯದ 25 ಗ್ರಾಂ MDMA ಅನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ; ನಿಷೇಧಿತ MDMA ಡ್ರಗ್ಸ್ ಮಾರಾಟ ಮಾಡ್ತಿದ್ದ ವ್ಯಕ್ತಿ ಸೆರೆ
ಬಂಧಿತ ಆರೋಪಿ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Sep 12, 2023 | 9:38 PM

Share

ದಕ್ಷಿಣ ಕನ್ನಡ, ಸೆ.12: ರಾಜ್ಯದ್ಯಾಂತ ಮಾದಕ ವಸ್ತು ನಿಷೇಧಕ್ಕೆ ಪೊಲೀಸ್​ ಇಲಾಖೆ ಟೊಂಕ ಕಟ್ಟಿ ನಿಂತಂತೆ ಕಾಣುತ್ತಿದೆ. ಹೌದು, ಇತ್ತೀಚೆಗಷ್ಟೇ ಮಂಗಳೂರಿನಲ್ಲಿ (Mangalore) ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಸಿಸಿಬಿ ಪೊಲೀಸರ (CCB Police) ಬಲೆಗೆ ನಿಷೇಧಿತ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಉಳ್ಳಾಲ ತಾಲೂಕಿನ ಒಂಬತ್ತು ಕೆರೆ ಮನೆ ನಿವಾಸಿ ಅಬ್ದುಲ್ ಸವಾಜ್(30) ಬಂಧಿತ ಆರೋಪಿ.ಇತ ಮಂಗಳೂರು ನಗರದ ಉಳ್ಳಾಲ ಒಂಬತ್ತು ಕೆರೆ ಪರಿಸರದಲ್ಲಿ ಮಾರಾಟಕ್ಕೆ ಯತ್ನಿಸಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ಆರೋಪಿ ಸಮೇತ 2 ಲಕ್ಷ 25 ಸಾವಿರ ಮೌಲ್ಯದ 25 ಗ್ರಾಂ MDMA ಅನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಕೃತ್ಯಕ್ಕೆ ಬಳಸಿದ ಸ್ಕೂಟರ್, ನಗದು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕವನ್ನು ಜಫ್ತಿ ಮಾಡಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟಂಬರ್ 02 ರಂದು ನಿಷೇಧಿತ MDMA ಮಾರಾಟ ಜಾಲದ ಪ್ರಮುಖ ಡ್ರಗ್ ಪೆಡ್ಲರ್​ನ್ನು ಬೆಂಗಳೂರಿನ ಯಲಹಂಕದ ಚೊಕ್ಕನ ಹಳ್ಳಿಯಲ್ಲಿ ಸೆರೆ ಹಿಡಿಯಲಾಗಿತ್ತು. ನೈಜೀರಿಯಾ ಮೂಲದ ಅಡೆವೊಲೆ ಅಡೆಟುಡು ಆನು(33) ಬಂಧಿತ ಮಹಿಳೆ. ಇನ್ನು ಇತ್ತಿಚೇಗಷ್ಟೇ ಮಂಗಳೂರು ಸಿಸಿಬಿ ಪೊಲೀಸರು ಲಕ್ಷಾಂತರ ಮೌಲ್ಯದ MDMA ಮಾರಾಟ ಜಾಲ ಭೇದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೆ ಈ ಮಹಿಳೆಯೇ ಡ್ರಗ್ಸ್​ ಮಾರಾಟ ಮಾಡಿದ್ದಳು ಎನ್ನುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:KP Chowdary: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ. ಚೌದರಿ ಬಂಧನ; 90 ಪಾಕೆಟ್​ ಮಾದಕ ವಸ್ತು ವಶ

ಅಂತರ್ ರಾಜ್ಯ ಗಾಂಜಾ ಮಾರಾಟಗಾರನ ಬಂಧನ

ಆನೇಕಲ್: ಅಂತರ್ ರಾಜ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅತ್ತಿಬೆಲೆ ಪೋಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಗೆಸ್ಟ್ ಲೈನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ, ಬಿಹಾರ ಮೂಲದ ಪಿಂಟು ಯಾದವ್​ನನ್ನು ಬಂಧಿಸಲಾಗಿದೆ. ಆರೋಪಿಯಿಂದ ಐದು ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದು, ಜೈಲಿಗೆ ಕಳುಹಿಸಲಾಗಿದೆ. ಇನ್ನು ಇತ ಬಿಹಾರದಿಂದ ರೈಲಿನ ಮೂಲಕ ಗಾಂಜಾ ತಂದು, ಮಾರಾಟ ಮಾಡುತ್ತಿದ್ದ ಎಂದು ಬೆಳಕಿಗೆ ಬಂದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ