KP Chowdary: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ. ಚೌದರಿ ಬಂಧನ; 90 ಪಾಕೆಟ್​ ಮಾದಕ ವಸ್ತು ವಶ

Tollywood Drug Case: ಪೊಲೀಸರು ಕೆ.ಪಿ. ಚೌದರಿ ಅವರ ಮನೆ ಮೇಲೆ ದಾಳಿ ಮಾಡಿದಾಗ 90 ಪ್ಯಾಕೆಟ್​ ಕೊಕೇನ್​ ಪತ್ತೆ ಆಗಿದೆ. ಗೋವಾದಿಂದ ಅವರು 100 ಪಾಕೆಟ್​ಗಳಲ್ಲಿ ಮಾದಕ ವಸ್ತು ಖರೀದಿಸಿ ತಂದಿದ್ದರು ಎನ್ನಲಾಗಿದೆ.

KP Chowdary: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ. ಚೌದರಿ ಬಂಧನ; 90 ಪಾಕೆಟ್​ ಮಾದಕ ವಸ್ತು ವಶ
ಕೆ.ಪಿ. ಚೌದರಿ
Follow us
|

Updated on:Jun 14, 2023 | 5:23 PM

ರಜನಿಕಾಂತ್​ ನಟನೆಯ ‘ಕಬಾಲಿ’ ಸಿನಿಮಾದ ತೆಲುಗು ವರ್ಷನ್​​ಗೆ ಬಂಡವಾಳ ಹೂಡಿದ್ದ ನಿರ್ಮಾಪಕ (Kabali Movie Producer) ಕೆ.ಪಿ. ಚೌದರಿ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್​ (Drugs) ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅವರ ಬಂಧನವಾಗಿದೆ. ಹೈದರಾಬಾದ್​ ಪೊಲೀಸರು ಕೆ.ಪಿ. ಚೌದರಿ (KP Chowdary) ಅವರನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ ಎಂದು ವರದಿ ಆಗಿದೆ. ಹೈದರಾಬಾದ್​ನ ಕಿಸ್ಮತ್​ಪುರದಲ್ಲಿರುವ ತಮ್ಮ ಮನೆಯಿಂದ ಹೊರಟ ಕೆ.ಪಿ. ಚೌದರಿ ಅವರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಾರಿ ನಿರ್ದೇಶನಾಲಯ ಹಾಗೂ ಇನ್ನಿತರ ತನಿಖಾ ಸಂಸ್ಥೆಗಳು ಕೂಡ ತನಿಖೆ ನಡೆಸಲಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.

ಪೊಲೀಸರು ಕೆ.ಪಿ. ಚೌದರಿ ಅವರ ಮನೆ ಮೇಲೆ ದಾಳಿ ಮಾಡಿದಾಗ 90 ಪ್ಯಾಕೆಟ್​ ಕೊಕೇನ್​ ಪತ್ತೆ ಆಗಿದೆ. ಗೋವಾದಿಂದ ಅವರು 100 ಪ್ಯಾಕೆಟ್​ಗಳಲ್ಲಿ ಮಾದಕ ವಸ್ತು ಖರೀದಿಸಿ ತಂದಿದ್ದರು ಎನ್ನಲಾಗಿದೆ. ಆದರೆ ಪೊಲೀಸರಿಗೆ ಸಿಕ್ಕಿರುವುದು 90 ಪ್ಯಾಕೆಟ್​ಗಳು ಮಾತ್ರ. ಇದು 82.75 ಗ್ರಾಂ ಇದೆ ಎಂದು ವರದಿ ಆಗಿದೆ. ಕೆ.ಪಿ. ಚೌದರಿ ಅವರು ತಮ್ಮ ಗಿರಾಕಿಗಳಿಗೆ ಡ್ರಗ್ಸ್​ ಮಾರಾಟ ಮಾಡಲು ಹೊರಟಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತೆಲುಗು ಚಿತ್ರರಂಗದ ಡ್ರಗ್ಸ್​ ಕೇಸ್​ಗೆ ಸಿಕ್ತು ಟ್ವಿಸ್ಟ್​; ಸ್ಟಾರ್ ನಟ-ನಟಿಯರಿಗೆ ಮತ್ತೆ ಸಂಕಷ್ಟ ಶುರು

ಕೆ.ಪಿ. ಚೌದರಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ. ‘ಕಬಾಲಿ’ ಸಿನಿಮಾದ ತೆಲುಗು ವರ್ಷನ್​​ಗೆ ಅವರು ಬಂಡವಾಳ ಹೂಡಿದ್ದರು. ‘ಸರ್ದಾರ್​ ಗಬ್ಬರ್​ ಸಿಂಗ್​’ ಹಾಗೂ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’ ಸಿನಿಮಾಗಳನ್ನು ಅವರು ವಿತರಣೆ ಮಾಡಿದ್ದರು. ಆದರೆ ಈ ವ್ಯವಹಾರದಿಂದ ಅವರಿಗೆ ಹೆಚ್ಚು ಲಾಭ ಆಗಲಿಲ್ಲ. ಅವರು ಗೋವಾದಲ್ಲಿ ತಮ್ಮದೇ ಕ್ಲಬ್​ ಹೊಂದಿದ್ದಾರೆ ಎನ್ನಲಾಗಿದೆ. ಅನೇಕ ಸೆಲೆಬ್ರಿಟಿಗಳು ಅಲ್ಲಿಗೆ ಆಗಾಗ ಭೇಟಿ ನೀಡುತ್ತಾರೆ ಎಂಬ ಸುದ್ದಿ ಇದೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​

ತೆಲುಗು ಚಿತ್ರರಂಗಕ್ಕೆ ಡ್ರಗ್ಸ್​ ಕಳಂಕ ಅಂಟಿದ್ದು ಇದೇ ಮೊದಲೇನಲ್ಲ. 2017ರಲ್ಲಿ ಟಾಲಿವುಡ್​​ನಲ್ಲಿ ಡ್ರಗ್ಸ್​ ಜಾಲ ಪತ್ತೆ ಆಗಿತ್ತು. ಆಗ 30 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಜಾಲದಲ್ಲಿ ಭಾಗಿ ಆಗಿರಬಹುದು ಎಂಬ ಗುಮಾನಿ ಮೇಲೆ ತನಿಖೆ ನಡೆಯಿತು. 2021ರಲ್ಲಿ ಡ್ರಗ್ಸ್​ ಕೇಸ್​ ಮತ್ತು ಅಕ್ರಮ ಹಣ ವರ್ಗಾವಣೆ ಕೇಸ್​ಗೆ ಸಂಬಂಧಿಸಿದಂತೆ ರಾಣಾ ದಗ್ಗುಬಾಟಿ, ರಕುಲ್​ ಪ್ರೀತ್​ ಸಿಂಗ್​, ರವಿತೇಜ ಸೇರಿದಂತೆ 12 ಫೇಮಸ್​ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಆ ಪ್ರಕರಣದ ಅಂತಿಮ ವರದಿ ಏನಾಯಿತು ಎಂಬುದು ತಿಳಿದುಬರಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:16 pm, Wed, 14 June 23