Rhea Chakraborty: ಸುಶಾಂತ್​ ಸಿಂಗ್ ರಜಪೂತ್​ ಪುಣ್ಯಸ್ಮರಣೆ: ಅಗಲಿದ ಪ್ರಿಯಕರನ ನೆನಪಿನಲ್ಲಿ ಅಪರೂಪದ ವಿಡಿಯೋ ಹಂಚಿಕೊಂಡ ರಿಯಾ ಚಕ್ರವರ್ತಿ

Sushant Singh Rajput Death Anniversary: ಸುಶಾಂತ್​ ಸಿಂಗ್ ರಜಪೂತ್​​ ಅವರ ಸಾವಿನ ನಂತರ ರಿಯಾ ಚಕ್ರವರ್ತಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಅವರು ಜೈಲಿಗೂ ಹೋಗಿಬಂದರು. ಇಷ್ಟೆಲ್ಲ ಆದರೂ ಸಹ ಸುಶಾಂತ್​ ಬಗ್ಗೆ ರಿಯಾಗೆ ಇದ್ದ ಭಾವನೆ ಬದಲಾಗಿಲ್ಲ.

Rhea Chakraborty: ಸುಶಾಂತ್​ ಸಿಂಗ್ ರಜಪೂತ್​ ಪುಣ್ಯಸ್ಮರಣೆ: ಅಗಲಿದ ಪ್ರಿಯಕರನ ನೆನಪಿನಲ್ಲಿ ಅಪರೂಪದ ವಿಡಿಯೋ ಹಂಚಿಕೊಂಡ ರಿಯಾ ಚಕ್ರವರ್ತಿ
ಸುಶಾಂತ್​ ಸಿಂಗ್ ರಜಪೂತ್​, ರಿಯಾ ಚಕ್ರವರ್ತಿ
Follow us
ಮದನ್​ ಕುಮಾರ್​
|

Updated on: Jun 14, 2023 | 3:05 PM

ನಟಿ ರಿಯಾ ಚಕ್ರವರ್ತಿ (Rhea Chakraborty) ಅವರ ಹೆಸರು ಸಿಕ್ಕಾಪಟ್ಟೆ ಪ್ರಚಾರಕ್ಕೆ ಬಂದಿದ್ದೇ ಸುಶಾಂತ್​ ಸಿಂಗ್​ ರಜಪೂತ್​ ನಿಧನದ ನಂತರ. 2020ರ ಜೂನ್​ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ ದೇಹ ಪತ್ತೆ ಆಗಿತ್ತು. ಆ ಘಟನೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ ರಿಯಾ ಚಕ್ರವರ್ತಿ ಜೊತೆ ಅವರು ಬ್ರೇಕಪ್​ ಮಾಡಿಕೊಂಡಿದ್ದರು. ಬಹುಕಾಲದಿಂದ ಪ್ರೀತಿಸುತ್ತಿದ್ದ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಮತ್ತು ರಿಯಾ ಚಕ್ರವರ್ತಿ ಏಕಾಏಕಿ ಬ್ರೇಕಪ್​ ಮಾಡಿಕೊಳ್ಳಲು ಕಾರಣ ಏನು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಸುಶಾಂತ್​ ಸಾವಿಗೂ (Sushant Singh Rajput Death) ಬ್ರೇಕಪ್​ಗೂ ಏನಾದರೂ ಲಿಂಕ್​ ಇದೆಯೇ ಎಂದು ತಿಳಿಯಲು ತನಿಖೆ ಕೂಡ ನಡೆದಿದೆ. ಅದರ ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ. ಆದರೆ ರಿಯಾ ಚಕ್ರವರ್ತಿ ಜೊತೆ ಸುಶಾಂತ್​ ಅವರು ಖುಷಿಯಾಗಿ ಇದ್ದರು ಎಂಬುದಕ್ಕೆ ಹಲವು ಫೋಟೋ ಮತ್ತು ವಿಡಿಯೋಗಳು ಸಾಕ್ಷಿ ಆಗಿವೆ. ಆ ಪೈಕಿ ಒಂದು ಅಪರೂಪದ ವಿಡಿಯೋವನ್ನು ರಿಯಾ ಚಕ್ರವರ್ತಿ ಈಗ ಶೇರ್​ ಮಾಡಿಕೊಂಡಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಅವರ ನಿಧನರಾಗಿ ಇಂದಿಗೆ (ಜೂನ್​ 14) ಮೂರು ವರ್ಷ ಕಳೆದಿದೆ. ಕುಟುಂಬದವರು, ಅಭಿಮಾನಿಗಳು ಹಾಗೂ ಆಪ್ತರು ಅವರನ್ನು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್​ನಲ್ಲಿ ಮಿಂಚಿ ಮೆರೆಯಬೇಕಿದ್ದ ಸುಶಾಂತ್​ ಅವರು ಸಾವಿನ ಮನೆಗೆ ತೆರಳಿದ್ದು ಯಾಕೆ ಎಂಬುದು ಸದ್ಯಕ್ಕಂತೂ ನಿಗೂಢ. ಈಗ ಅವರನ್ನು ನೆನಪಿಸಿಕೊಳ್ಳುವ ಸಲುವಾಗಿ ರಿಯಾ ಚಕ್ರವರ್ತಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಅಪರೂಪದ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರಿಬ್ಬರು ತುಂಬ ಖುಷಿಯಿಂದ ಕಾಲ ಕಳೆಯುತ್ತಿದ್ದ ಕ್ಷಣಗಳು ಸೆರೆಯಾಗಿವೆ. ಇದನ್ನು ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Rhea Chakraborty: ಸುಶಾಂತ್​ ಸಿಂಗ್​ ರಜಪೂತ್​ಗೆ ಡ್ರಗ್ಸ್​ ನೀಡಿದ್ದೇ ರಿಯಾ ಚಕ್ರವರ್ತಿ: ಎನ್​ಸಿಬಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಸುಶಾಂತ್​ ಸಿಂಗ್ ರಜಪೂತ್​ ಅವರ ಸಾವಿನ ನಂತರ ರಿಯಾ ಚಕ್ರವರ್ತಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಒಂದು ಕಡೆ ಪ್ರಿಯಕರನ ನಿಧನದ ನೋವು, ಇನ್ನೊಂದು ಕಡೆ ತನಿಖೆಯ ತಲೆಬಿಸಿ. ಮತ್ತೊಂದು ಕಡೆ ಸಮಾಜದ ನಿಂದನೆ. ಸುಶಾಂತ್​ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ದೂರು ಕೂಡ ದಾಖಲಾಯಿತು. ಸುಶಾಂತ್​ಗೆ ರಿಯಾ ಅವರೇ ಡ್ರಗ್ಸ್​ ನೀಡುತ್ತಿದ್ದರು ಎಂದು ಕೂಡ ಹೇಳಲಾಯಿತು. ಇಂಥ ಹಲವು ಆರೋಪಗಳನ್ನು ಎದುರಿಸಿದ ಅವರು ಜೈಲಿಗೂ ಹೋಗಿಬಂದರು. ಇಷ್ಟೆಲ್ಲ ಆದರೂ ಸಹ ಸುಶಾಂತ್​ ಬಗ್ಗೆ ರಿಯಾ ಚಕ್ರವರ್ತಿಗೆ ಇದ್ದ ಭಾವನೆ ಬದಲಾಗಿಲ್ಲ. ಹಾಗಾಗಿ ಅವರು ಮಾಜಿ ಪ್ರಿಯಕರನ ನೆನಪಿಗಾಗಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನು, ಸುಶಾಂತ್​ ಸಿಂಗ್​ ರಜಪೂತ್​ ಅವರ ಫ್ಯಾಮಿಲಿಯವರು ಕೂಡ ನಟನ ಪುಣ್ಯ ಸ್ಮರಣೆ ಪ್ರಯುಕ್ತ ಸೋಶಿಯಲ್​ ಮೀಡಿಯಾದಲ್ಲಿ ನಮನ ಸಲ್ಲಿಸಿದ್ದಾರೆ. ಹಳೇ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ‘ಪ್ಲೀಸ್​ ಸುಶಾಂತ್​.. ವಾಪಸ್​ ಬನ್ನಿ’ ಎಂದು ಅಭಿಮಾನಿಗಳು ಎಮೋಷನಲ್​ ಆಗಿ ಕಮೆಂಟ್​ ಮಾಡಿದ್ದಾರೆ. ಸುಶಾಂತ್​ ನಟಿಸಿದ್ದ ಸಿನಿಮಾಗಳನ್ನು ಮತ್ತೆ ವೀಕ್ಷಿಸುವ ಮೂಲಕವೂ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅವರ ಹಳೆಯ ಸಂದರ್ಶನದ ತುಣುಕುಗಳು, ವಿಡಿಯೋಗಳು ವೈರಲ್​ ಆಗಿವೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್