ಐಷಾರಾಮಿ ಕಾರಿನಲ್ಲಿ ಡ್ರಗ್ಸ್ ಮಾರಾಟ; ಬಟ್ಟೆ ವ್ಯಾಪಾರಿ ಪುತ್ರನನ್ನ ಅರೆಸ್ಟ್ ಮಾಡಿದ ಪೊಲೀಸರು
ಖಾಸಗಿ ಕಂಪನಿಯ ವೆಸ್ಟ್ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲೂಕಿನ ಮಾದ ಪಟ್ಟಣದಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಡ್ರಗ್ (Drugs) ಕೇಸ್ನಲ್ಲಿ ಬಟ್ಟೆ ವ್ಯಾಪಾರಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಫಜಲ್ ಬಂಧಿತ ಆರೋಪಿ. ಐಷಾರಾಮಿ ಕಾರ್ನಲ್ಲಿ ಡ್ರಗ್ ಸಮೇತ ಸಿಕ್ಕಿಬಿದಿದ್ದಾನೆ. ಬಾಪೂಜಿನಗರ ನಿವಾಸಿಯಾಗಿರುವ ಬಂಧಿತನ ತಂದೆ ಬಟ್ಟೆ ವ್ಯಾಪಾರಿಯಾಗಿದ್ದು, ಮಗ ಫೈಜಲ್ ಅಹ್ಮದ್ನಿಂದ ಡ್ರಗ್ ಮಾರಟ ಆರೋಪ ಮಾಡಲಾಗಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದು, ಡ್ರಗ್ ಸಮೇತ ಫೈಜಲ್ ಸಿಕ್ಕಿ ಬಿದಿದ್ದಾನೆ. ಕೆಂಗೇರಿಯ ಲಕ್ಷ್ಮಿದೇವಿ ಟೆಂಪಲ್ ಬಳಿ ಫಾರ್ಚುನರ್ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ 5 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ನಲ್ಲಿ ಮಾರಾಟ ಮಾಡುತ್ತಿದ್ದ. ಡ್ರಗ್ ಪೆಡ್ಲಿಂಗ್ಗೆ ಅಪ್ಪನ ಫಾರ್ಚುನರ್ ಕಾರಿನಲ್ಲೇ ಮಾರಾಟ ಮಾಡಿದ್ದ. ಖಚಿತ ಮಾಹಿತಿ ಹಿನ್ನಲೆ ದಾಳಿ ನಡೆಸಿ ಮಾದಕ ವಸ್ತು ವಶ ಪಡಿಸಿಕೊಳ್ಳಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿ ವೆಸ್ಟ್ಗೆ ಹೊತ್ತಿಕೊಂಡ ಬೆಂಕಿ:
ಆನೇಕಲ್: ಖಾಸಗಿ ಕಂಪನಿಯ ವೆಸ್ಟ್ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲೂಕಿನ ಮಾದ ಪಟ್ಟಣದಲ್ಲಿ ಘಟನೆ ನಡೆದಿದೆ. ಕಂಪನಿಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಜನನಿಬಿಡ ಪ್ರದೇಶದಲ್ಲಿ ಕಂಪನಿಯ ನಿರ್ಲಕ್ಷವಹಿಸಲಾಗಿದೆ. ಸುತ್ತಮುತ್ತ ದಟ್ಟ ಬೆಂಕಿ ಆವರಿಸುತ್ತಿದ್ದು, ಕಂಪನಿಯ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿವೆ. ಬಿಸಿಲ ಬೇಗೆಗೆ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಹೆಚ್ಚಾಗುತ್ತಿದೆ. ಸ್ಟರ್ಲಿಂಗ್ ಎನ್ವಿರೋವೈಜರ್ಸ್ & ಇಂಕ್ವಿಪ್ಮೆಂಟ್ ಕಾರ್ಖಾನೆ ಇದಾಗಿದ್ದು, ಸಾರ್ವಜನಿಕ ಸ್ಥಳದಲ್ಲೇ ವೇಸ್ಟೇಜ್ ಬಿಸಾಡಲಾಗಿದೆ. ಕಂಪನಿಯಲ್ಲಿ ಸಾಕಷ್ಟು ಜನ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಈಜುತ್ತಿರುವಾಗ ಮುಳುಗು ವ್ಯಕ್ತಿ ಸಾವು:
ಶಿರಸಿಯ ಮುರೇಗಾರ ಫಾಲ್ಸ್ನಲ್ಲಿ ಮುಳುಗಿ ವ್ಯಕ್ತಿಯೊರ್ವ ಸಾವನ್ನಪ್ಪಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮುರೆಗಾರ ಪಾಲ್ಸ್ನಲ್ಲಿ ಈಜುತ್ತಿರುವಾಗ ಮುಳುಗಿ ಸಾವನ್ನಪ್ಪಿದ್ದಾರೆ. ತುಮಕೂರು ಮೂಲದ ವ್ಯಕ್ತಿ ನವೀನ ಕುಮಾರ್ (೩೫) ಮೃತ ದುರ್ದೈವಿ. ಆರ್.ಎಸ್.ಎಸ್ ಪ್ರಮುಖನಾಗಿ ಗುರುತಿಸಿಕೊಂಡಿದ್ದ ನವೀನ ಕುಮಾರ, ಸುಮಾರು ಐವತ್ತು ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದ. ತುಮಕೂರು ನಗರದ ಸಂಘದ ಜವಾಬ್ಧಾರಿ ನವೀನ ಕುಮಾರ ವಹಿಸಿಕೊಂಡಿದ್ದ. ಶಿರಸಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ:
ತಮಗಿಂತ ಎತ್ತರ ಇರುವ ಹೆಂಡ್ತಿ ಜತೆ ಹೈಟ್ ಮ್ಯಾಚ್ ಮಾಡಲು ಕಷ್ಟಪಟ್ಟ ಹಿಮೇಶ್; ಸಿಕ್ಕಾಪಟ್ಟೆ ಟ್ರೋಲ್