ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಂಗಳೂರು ಮಹಾನಗರ ಪಾಲಿಕೆ: 1,375 ಕೋಟಿ ಸಾಲವಾಗಿದ್ದರೂ ಇನ್ನೂ ಮುಗಿಯದ ಒಳಚರಂಡಿ ಕಾಮಗಾರಿ!

ಮಂಗಳೂರು ಮಹಾನಗರ ಪಾಲಿಕೆ ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಒಳಚರಂಡಿ ಯೋಜನೆಗೆಂದು 20 ವರ್ಷಗಳ ಹಿಂದೆ ಪಡೆದಿದ್ದ ಸಾಲ ಈಗ ಬಡ್ಡಿ ಸೇರಿ ಸಾವಿರಾರು ಕೋಟಿಗಳಿಗೆ ಹೋಗಿ ತಲುಪಿದೆ. ಸಾಲ ಪಡೆದಿದ್ದ ಹಣದ ಪೈಕಿ ಒಂದೇ ಒಂದು ಕಂತನ್ನೂ ಪಾಲಿಕೆ ಮರುಪಾವತಿ ಮಾಡಿಲ್ಲ ಎನ್ನಲಾಗಿದ್ದು, ಮತ್ತೊಂದೆಡೆ ಒಳಚರಂಡಿ ಕಾಮಗಾರಿಯೂ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಂಗಳೂರು ಮಹಾನಗರ ಪಾಲಿಕೆ: 1,375 ಕೋಟಿ ಸಾಲವಾಗಿದ್ದರೂ ಇನ್ನೂ ಮುಗಿಯದ ಒಳಚರಂಡಿ ಕಾಮಗಾರಿ!
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಂಗಳೂರು ಮಹಾನಗರ ಪಾಲಿಕೆ
Image Credit source: Tv9 Kannada
Edited By:

Updated on: Oct 06, 2026 | 11:35 AM

ಮಂಗಳೂರು, ಅಕ್ಟೋಬರ್​​ 06: ಕರ್ನಾಟಕ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಸುದ್ದಿ ರಾಜ್ಯದಲ್ಲಿ ಹಲ್​​ಚಲ್​​ ಸೃಷ್ಟಿಸಿರುವ ನಡುವೆಯೇ ಮಂಗಳೂರು ಮಹಾನಗರ ಪಾಲಿಕೆ ಕೂಡ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಸ್ಫೋಟಕ ವಿಚಾರವೀಗ ಬಹಿರಂಗಗೊಂಡಿದೆ. ಪಾಲಿಕೆಯ ಸಾಲ ಬಡ್ಡಿ ಸಹಿತ 1,375 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು, ಈ ಸಾಲಕ್ಕೆ ರಾಜ್ಯ ಸರ್ಕಾರವೇ ಜಾಮೀನು ನೀಡಿದೆ. 20 ವರ್ಷಗಳ ಹಿಂದಿನ  ಸಾಲಕ್ಕೆ ಪಾಲಿಕೆ 1 ಸಾವಿರ ಕೋಟಿ ಬಡ್ಡಿ ಪಾವತಿಸಬೇಕಿದ್ದು, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​​ಗೆ ಹಣ ತೀರಿಸಲಾಗದೇ ಪಾಲಿಕೆಯೀಗ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

20 ವರ್ಷಗಳು ಕಳೆದರೂ ಮುಗಿಯದ ಒಳಚರಂಡಿ ಕಾಮಗಾರಿ!

Mangaluru Corporation Debt: ಮಂಗಳೂರು ಪಾಲಿಕೆ ಸಾಲ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ |#TV9D

2006ರಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆ ಸಂಬಂಧ ಕುಂಡ್ಸೆಂಪ್ ಮೂಲಕ ಕಾಮಗಾರಿ ಆರಂಭಿಸಲಾಗಿತ್ತು. ಈ ಯೋಜನೆಗೆ ಎಡಿಬಿಯಿಂದ 380 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. 2006ರ ಬಳಿಕ ಈವರೆಗೆ ಒಂದೇ ಒಂದು ಸಾಲದ ಕಂತು ಪಾವತಿಸಿಲ್ಲ. 2026ರಲ್ಲಿ 380 ಕೋಟಿ ಸಾಲದ ಮರು ಪಾವತಿ ಅವಧಿ ಮುಕ್ತಾಯವಾಗಿದ್ದು, ಸದ್ಯ 380 ಕೋಟಿ ಸಾಲಕ್ಕೆ ಬರೋಬ್ಬರಿ 998 ಕೋಟಿಯಷ್ಟು ಬಡ್ಡಿ ಕಟ್ಟಬೇಕಿದೆ. ಆ ಮೂಲಕ 20 ವರ್ಷಗಳಲ್ಲಿ 1375 ಕೋಟಿಗೆ ಪಾಲಿಕೆ ಸಾಲದ ಹೊರೆ ಏರಿಕೆಯಾಗಿದೆ. 24ಕ್ಕೂ ಹೆಚ್ಚು ಡಿಮ್ಯಾಂಡ್ ನೋಟಿಸ್ ಕೊಟ್ಟರೂ ಪಾಲಿಕೆ ಡೋಂಟ್​ಕೇರ್ ಎಂದಿದ್ದು, 2006ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂಬುದಿಲ್ಲಿ ಮತ್ತೊಂದು ಮಹತ್ವದ ವಿಚಾರವಾಗಿದೆ.

ಇದನ್ನೂ ಓದಿ: 500 ರೂ.ಗೆ ನವದುರ್ಗಿಯರ ದರ್ಶನ: ಮಂಗಳೂರು ದಸರಾ ಪ್ರವಾಸಕ್ಕೆ ಮತ್ತೊಂದು ಹೊಸ KSRTC ವಿಶೇಷ ಪ್ಯಾಕೇಜ್

‘ಮಂಗಳೂರನ್ನೇ ಮಾರಿದರೂ ಸಾಲ ತೀರಲ್ಲ’

Mangaluru Corporation Debt: ಸಾಲದ ಸುಳಿಯಲ್ಲಿರುವ ಪಾಲಿಕೆ ಬಗ್ಗೆ Vedavyas kamat ಏನಂದ್ರು |#TV9D

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್​​, ಮಂಗಳೂರು ಮಹಾನಗರ ಪಾಲಿಕೆಯ ಸಾಲ 1,375 ಕೋಟಿ ರೂಪಾಯಿ ಮಾತ್ರವಲ್ಲ. 20 ವರ್ಷಗಳ ಸಾಲಗಳ ಎಲ್ಲ ದಾಖಲೆ ತೆಗೆದರೆ ಇನ್ನಷ್ಟು ಶಾಕ್​​ ಆಗಲಿದೆ. ಅದೆಲ್ಲವನ್ನು ತೀರಿಸೋಕೆ ಮಂಗಳೂರೇ ಸಾಕಾಗಲ್ಲ. ಸರ್ಕಾರ ಅನುದಾನ ನೀಡದ ಕಾರಣ ಇಂತಹ ಸಮಸ್ಯೆ ಬಂದಿದೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಸಚಿವ ಯತೀಂದ್ರ ಸಿದ್ದರಾಮಯ್ಯ ಮೊನ್ನೆ ಬಂದು ಪಾಲಿಕೆ ರಿವ್ಯೂ ಮೀಟಿಂಗ್ ಮಾಡಿದರಾದರೂ, ಆಗ ಈ ಬಗ್ಗೆ ಚಕಾರ ಎತ್ತಿಲ್ಲ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 11:33 am, Tue, 6 October 26

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us