Mangaluru: ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ಪ್ರಕರಣ; 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

| Updated By: ganapathi bhat

Updated on: Jul 28, 2021 | 11:22 PM

ಸುಮಾರು ನಾಲ್ಕು ವರ್ಷಗಳ ಹಿಂದೆ, ಅಂದರೆ 2017 ರ ಏಪ್ರಿಲ್ 30 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಪಟ್ರಮೆ ಎಂಬಲ್ಲಿ ಘಟನೆ ನಡೆದಿತ್ತು. ಸುರೇಶ್ ನಾಯ್ಕ ಎಂಬ ಯುವಕ ಕೊಲೆಯಾಗಿದ್ದ ದುರ್ದೈವಿ.

Mangaluru: ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ಪ್ರಕರಣ; 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಸಾಂದರ್ಭಿಕ ಚಿತ್ರ
Follow us on

ಮಂಗಳೂರು: ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 6 ಅಪರಾಧಿಗಳಿಗೆ ದಕ್ಷಿಣ ಕನ್ನಡ ಸೆಷನ್ಸ್​ ನ್ಯಾಯಾಲಯ ಇಂದು (ಜುಲೈ 28) ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ, 2017 ಏಪ್ರಿಲ್ 30 ರಂದು ನಡೆದಿದ್ದ ಘಟನೆಗೆ ಕೋರ್ಟ್​ನಿಂದ ಮಹತ್ವದ ಆದೇಶ ಲಭಿಸಿದೆ.

ಸುಮಾರು ನಾಲ್ಕು ವರ್ಷಗಳ ಹಿಂದೆ, ಅಂದರೆ 2017 ರ ಏಪ್ರಿಲ್ 30 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಪಟ್ರಮೆ ಎಂಬಲ್ಲಿ ಘಟನೆ ನಡೆದಿತ್ತು. ಸುರೇಶ್ ನಾಯ್ಕ ಎಂಬ ಯುವಕ ಕೊಲೆಯಾಗಿದ್ದ ದುರ್ದೈವಿ.

ಅಷ್ಟಕ್ಕೂ ಆತನ ಕೊಲೆಗೆ ಕಾರಣ ಆತ ನಿಶ್ಚಿತಾರ್ಥ ಆಗಬೇಕಿದ್ದ ಹುಡುಗಿಯ ಜೊತೆ ಮತ್ತೊಬ್ಬನಿಗೆ ಇದ್ದ ಏಕಮುಖ ಪ್ರೀತಿ. ಸುರೇಶ್ ನಾಯ್ಕ ನಿಶ್ಚಿತಾರ್ಥವಾಗಬೇಕಿದ್ದ ಯುವತಿಯನ್ನು ಆನಂದ ನಾಯ್ಕ ಎಂಬಾತ ಏಕಮುಖವಾಗಿ ಪ್ರೀತಿಸುತ್ತಿದ್ದ. ಇದೇ ಕಾರಣದಿಂದ ಗೆಳೆಯರೂ ಸೇರಿಕೊಂಡು ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ನಡೆಸಲಾಗಿದೆ.

ಆರೋಪಿ ಐದು ಜನ ಸ್ನೇಹಿತರ ಜೊತೆ ಸೇರಿ ಕೊಲೆ ಕೃತ್ಯ ಎಸಗಿದ್ದ. ವಿನಯ್, ಪ್ರವೀಣ್ ನಾಯ್ಕ, ಲೋಕೇಶ, ಪ್ರಕಾಶ್, ನಾಗರಾಜ ಮೂಲ್ಯ ಪ್ರಕರಣದ ಇತರ ಆರೋಪಿಗಳಾಗಿದ್ದರು. ಸುರೇಶ್ ನಾಯ್ಕನ ಅಪಹರಿಸಿ ಕೊಲೆಗೈದು ಬೆಂಕಿಯಲ್ಲಿ ಸುಟ್ಟಿದ್ದರು. ಈ ಸಂಬಂಧ ಅಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕೇಸ್​ಗೆ ಸಂಬಂಧಿಸಿ ದಕ್ಷಿಣ ಕನ್ನಡ ಸೆಷನ್ಸ್​ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ. 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಬಂಧನ

Viral Video: ಆ್ಯಂಬುಲೆನ್ಸ್​ಗೆ ದಾರಿ ಬಿಡದೇ ಸತಾಯಿಸಿದ ಕಾರು ಚಾಲಕನನ್ನು ಬಂಧಿಸಿದ ಮಂಗಳೂರು ಪೊಲೀಸರು

(Mangaluru Court sentences Lifetime Imprisonment in Patrame Murder case)