ಮಂಗಳೂರು: ಅಪ್ರಾಪ್ತೆ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ, ವಿಡಿಯೋ ವೈರಲ್ ಮಾಡಿದವರೂ ಖಾಕಿ ಬಲೆಗೆ!

ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರವೆಸಗಿರುವಂತಹ ಘಟನೆ ಜೂನ್​ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರದ ವಿಡಿಯೋ ಮಾಡಿ ವೈರಲ್​ ಮಾಡಲಾಗಿತ್ತು. ಬಜ್ಪೆ ಪೊಲೀಸ್ ಠಾಣೆಗೆ ಸಂತ್ರಸ್ತ ಬಾಲಕಿ ದೂರು ನೀಡಿದ್ದಳು. ಅತ್ಯಾಚಾರವೆಸಗಿದ ಮತ್ತು ವಿಡಿಯೋ ವೈರಲ್​ ಮಾಡಿದ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಅಪ್ರಾಪ್ತೆ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ, ವಿಡಿಯೋ ವೈರಲ್ ಮಾಡಿದವರೂ ಖಾಕಿ ಬಲೆಗೆ!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Sep 03, 2025 | 3:57 PM

ಮಂಗಳೂರು, ಸೆಪ್ಟೆಂಬರ್​ 03: ಅಪ್ರಾಪ್ತ ಬಾಲಕಿ (girl) ಮೇಲೆ ಯುವಕರಿಬ್ಬರಿಂದ ಸಾಮೂಹಿಕ ಅತ್ಯಾಚಾರವೆಸಗಿದ್ದ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರು (Mangaluru) ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂನ್​​ನಲ್ಲಿ ದುಷ್ಕೃತ್ಯ ನಡೆದಿದೆ. ಬಜ್ಪೆ ಪೊಲೀಸ್ ಠಾಣೆಗೆ ಸಂತ್ರಸ್ತ ಬಾಲಕಿ ದೂರು ನೀಡಿದ್ದಳು. ಅತ್ಯಾಚಾರವೆಸಗಿದ ಮತ್ತು ವಿಡಿಯೋ ವೈರಲ್​ ಮಾಡಿದ್ದ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದ್ದೇನು?

ಓರ್ವ ಆರೋಪಿ ಇನ್​ಸ್ಟಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಒಬ್ಬನಿಂದ ಅತ್ಯಾಚಾರವೆಸಗಿದ್ದು, ಮತ್ತೋರ್ವ ಆರೋಪಿ ವಿಡಿಯೋ ಮಾಡಿದ್ದ. ನಂತರ ಅತ್ಯಾಚಾರದ ವಿಡಿಯೋವನ್ನು ದುಷ್ಕರ್ಮಿಗಳು ಸ್ನೇಹಿತರಿಗೆ ಕಳುಹಿಸಿದ್ದರು. ಆರೋಪಿಯ ಸ್ನೇಹಿತರು ಅತ್ಯಾಚಾರ ವಿಡಿಯೋವನ್ನು ವೈರಲ್ ಮಾಡಿದ್ದರು. ಸದ್ಯ ಗ್ಯಾಂಗ್​ರೇಪ್ ಸಂಬಂಧ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.

ಅಪ್ರಾಪ್ತ ಬಾಲಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಅಪ್ರಾಪ್ತನೊಬ್ಬ ಅತ್ಯಾಚಾರ ಎಸಗಿದ ಪರಿಣಾಮ ಅಪ್ರಾಪ್ತೆಯೋರ್ವಳು ಎರಡು ತಿಂಗಳ ಗರ್ಭಿಣಿಯಾಗಿರುವಂತಹ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಯ ತಂದೆ ಸದ್ಯ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ
26 ರ ವಿಧವೆ ಜೊತೆ 52 ರ ಇಬ್ಬರು ಹೆಂಡಿರ ಗಂಡನ ಲಿವ್ ಇನ್! ನಡೆಯಿತು ದುರಂತ
ಬೆಂಗಳೂರಿನ ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ
ಶಿವಮೊಗ್ಗ: 9ನೇ ಕ್ಲಾಸ್ ವಿದ್ಯಾರ್ಥಿನಿಗೆ ಹೆರಿಗೆ! ಫೋಕ್ಸೋ ಕೇಸ್ ದಾಖಲು
ಟೀನೇಜ್ ಪ್ರೆಗ್ನೆನ್ಸಿ ಭಾರೀ ಹೆಚ್ಚಳ: ಬೆಚ್ಚಿಬೀಳಿಸುವಂತಿದೆ ಅಂಕಿಅಂಶ

ಇದನ್ನೂ ಓದಿ: ಬೆಂಗಳೂರಿನ ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ; ಹಲ್ಲೆ ಮಾಡಿ ದುಡ್ಡಿನೊಂದಿಗೆ ಆರೋಪಿ ಪರಾರಿ

ಈ ಹಿಂದೆ ಮೊರಾರ್ಜಿ ಶಾಲೆಯಲ್ಲಿ ಬಾಲಕಿ 7ನೇ ತರಗತಿಯಲ್ಲಿದ್ದಾಗ ಬಾಲಕ 8ನೇ ತರಗತಿ ಓದುತ್ತಿದ್ದನಂತೆ, ಆಗಲೇ ಇವರಿಬ್ಬರ ಮಧ್ಯೆ ಪರಿಚಯವಾಗಿತ್ತಂತೆ. ಸದ್ಯ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆಂದು ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: 26 ರ ವಿಧವೆ ಜೊತೆ 52 ವರ್ಷದ ಇಬ್ಬರು ಹೆಂಡಿರ ಗಂಡನ ಲಿವಿಂಗ್ ಟುಗೆದರ್! ಯುವತಿ ದೂರವಾಗ್ತಾಳೆಂದು ಬೆಂಕಿ ಹಚ್ಚಿ ಕೊಲೆ

ಇನ್ನು ಸದ್ಯ ಅಪ್ರಾಪ್ತಳಿಗೆ 16 ವರ್ಷವಿದ್ದು, ಆರೋಪಿತನಿಗೆ 17 ವರ್ಷ ವಯಸ್ಸಾಗಿದೆ. ಈ ಹಿಂದೆ ಶಾಲೆಯಲ್ಲಿರುವಾಗಲೇ ಇವರಿಬ್ಬರ ಪರಿಚಯವಾಗಿತ್ತು. ಹೀಗಾಗಿ ಮಗಳನ್ನ ಪುಸಲಾಯಿಸಿ ಆರೋಪಿ ಅತ್ಯಾಚಾರ ಮಾಡಿದ್ದಾನೆಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.