ಮಂಗಳೂರು: ಬುರ್ಖಾ ಧರಿಸಿ ಕಾಲೇಜಿನಲ್ಲಿ ಐಟಂ ಸಾಂಗ್​ಗೆ ಸ್ಟೆಪ್, ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು

ಬುರ್ಖಾ ಧರಿಸಿ ಕಾಲೇಜಿನಲ್ಲಿ ಐಟಂ ಸಾಂಗ್​ಗೆ ಡಾನ್ಸ್ ಮಾಡಿರುವುದು ಮುಸ್ಲಿಂ ಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ, ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಅಮಾನತ್ತು ಮಾಡಿದೆ.

ಮಂಗಳೂರು: ಬುರ್ಖಾ ಧರಿಸಿ ಕಾಲೇಜಿನಲ್ಲಿ ಐಟಂ ಸಾಂಗ್​ಗೆ ಸ್ಟೆಪ್, ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು
ಬುರ್ಖಾ ಧರಿಸಿ ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋ ವೈರಲ್
Follow us
TV9 Web
| Updated By: Rakesh Nayak Manchi

Updated on: Dec 09, 2022 | 12:46 PM

ಮಂಗಳೂರು: ಬುರ್ಖಾ ಧರಿಸಿ ಐಟಂ ಸಾಂಗ್​ಗೆ ಡಾನ್ಸ್ ಮಾಡಿದ ವಿದ್ಯಾರ್ಥಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ (Students dance video viral) ಆಗುತ್ತಿದ್ದಂತೆ ಮುಸ್ಲಿಂ ಸಮುದಾಯ (Muslim Community)ದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ವಾಮಂಜೂರಿನ ಸೇಂಟ್​ ಜೋಸೆಫ್ ಇಂಜಿನಿಯರಿಂಗ್​ ಕಾಲೇಜು ಆಡಳಿತ ಮಂಡಳಿ, ವಿಚಾರಣೆ ಬಾಕಿಯಿರಿಸಿ ನೃತ್ಯ ಮಾಡಿದ ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಅನಾಮತ್ತು (Students suspend) ಮಾಡಿ ಕೋಮು ಸೌಹಾರ್ದತೆಗೆ ದಕ್ಕೆ ತರುವ ಯಾವುದೇ ಕಾರ್ಯಕ್ರಮಗಳನ್ನು ಕಾಲೇಜು ಪ್ರೋತ್ಸಾಹಿಸುವುದಿಲ್ಲ, ಕ್ಯಾಂಪಸ್​ನಲ್ಲಿರುವ ಪ್ರತಿಯೊಬ್ಬರಿಗೂ ಈ ಕಠಿಣ ಮಾರ್ಗಸೂಚಿ ಬಗ್ಗೆ ಮಾಹಿತಿ ಇದೆ ಎಂದು ಸ್ಪಷ್ಟನೆ ನೀಡಿದರು.

ಬುರ್ಖಾ ಧರಿಸಿ ಐಟಂ ಸಾಂಗ್​ಗೆ ಮುಸ್ಲಿಂ ವಿದ್ಯಾರ್ಥಿಗಳು ಸ್ಟೆಪ್ ಹಾಕಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ ವಾಮಂಜೂರಿನ ಸೇಂಟ್​ ಜೋಸೆಫ್ ಇಂಜಿನಿಯರಿಂಗ್​ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಸುಧೀರ್, ಇದು ಅನುಮತಿ ಪಡೆದು ನಡೆಸಿದ ಕಾರ್ಯಕ್ರಮವಲ್ಲ. ಅನುಮತಿ ಪಡೆಯದೆ ಐಟಂ ಸಾಂಗ್​ಗೆ ಡ್ಯಾನ್ಸ್​ ಮಾಡಿದ್ದಾರೆ. ಈ ನೃತ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಅಮಾನತ್ತು ಮಾಡಲಾಗಿದೆ. ವಿಚಾರಣೆ ಬಾಕಿಯಿರಿಸಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಕೋಮು ಸೌಹಾರ್ದತೆಗೆ ದಕ್ಕೆ ತರುವ ಯಾವುದೇ ಕಾರ್ಯಕ್ರಮಗಳನ್ನು ಕಾಲೇಜು ಪ್ರೋತ್ಸಾಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Viral News: ಇಲ್ಲಿ ಸಾಕು ಪ್ರಾಣಿಗಳಿಗೂ ಸ್ಮಶಾನ, ಮಾಲಿನ್ಯ ನಿಯಂತ್ರಣಕ್ಕೆ ಹೊಸ ಪ್ಲಾನ್

ನೃತ್ಯ​​ ಮಾಡಿದ ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಅಮಾನತುಗೊಳಿಸಲಾಗಿದೆ. ಸಮುದಾಯಗಳು ಮತ್ತು ಎಲ್ಲರ ನಡುವಿನ ಸಾಮರಸ್ಯವನ್ನು ಹಾಳುಮಾಡುವಂತಹ ಯಾವುದೇ ಚಟುವಟಿಕೆಗಳನ್ನು ಕಾಲೇಜು ಬೆಂಬಲಿಸುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಪ್ರಭಾರ ಪ್ರಾಂಶುಪಾಲ ಡಾ.ಸುಧೀರ್ ಹೇಳಿದರು.

ಇದನ್ನೂ ಓದಿ: Haveri: ಅಧಿಕೃತ ಬಿಡುಗಡೆಗೆ ಮುನ್ನವೇ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ವೈರಲ್

ನಿನ್ನೆ ಇದೇ ಜಿಲ್ಲೆಯಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತು. ಇಡೀ ದೇಶದಲ್ಲೇ ಹವಾ ಎಬ್ಬಿಸಿದ ತುಳು ನಾಡ ದೈವಾರಾಧನೆ ಪರಿಚಯಿಸಿದ ಕನ್ನಡದ ಕಾಂತಾರ (Kantara) ಸಿನಿಮಾ ನೋಡಲು ಥಿಯೇಟರ್​ಗೆ ಬಂದಿದ್ದ ಮುಸ್ಲಿಂ ಜೋಡಿ ಮೇಲೆ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಸುಳ್ಯದ ಖಾಸಗಿ ಕಾಲೇಜಿನ ಕೇರಳದ ಮೂಲದ ವಿದ್ಯಾರ್ಥಿ ಜೋಡಿ ಕಾಲೇಜು ತಪ್ಪಿಸಿ ಸಿನಿಮಾ ವೀಕ್ಷಣೆಗೆ ಬಂದಿದ್ದ ವೇಳೆ ಯುವಕ ಮತ್ತು ಯುವತಿಯನ್ನು ಗುಂಪೊಂದು ತರಾಟೆಗೆ ತೆಗೆದುಕೊಂಡಿತ್ತು. ಮುಸ್ಲಿಂ ಯುವಕ ಮತ್ತು ಹಿಜಾಬ್ ಹಾಕಿದ್ದ ಯುವತಿ ಸಂತೋಷ್ ಚಿತ್ರಮಂದಿರಕ್ಕೆ ಕಾಂತಾರ ಸಿನಿಮಾ ವೀಕ್ಷಣೆಗೆ ಬಂದಿದ್ದರು.

ಈ ವೇಳೆ ಯುವಕ ಪಾರ್ಕಿಂಗ್​ನಲ್ಲಿ ಬೈಕ್ ನಿಲ್ಲಿಸಿದ್ದ ವೇಳೆ ಸ್ಥಳೀಯ ‌ಕೆಲ ಮುಸ್ಲಿಂ ಯುವಕರು ತಲಾಟೆ ಶುರು ಮಾಡಿದ್ದರು. ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಯುವಕರು ಎಚ್ಚರಿಸಿದ ಬಳಿಕ ವಿದ್ಯಾರ್ಥಿಗಳು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ. ವೈರಲ್ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ