ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆಯ ಬಂಧನ

ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಮಂಗಳೂರು ಹೊರವಲಯದ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ 25 ವರ್ಷದ ಅನರುಲ್ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ. ಮೂರು ವರ್ಷಗಳ ಹಿಂದೆ ಲಾಲ್‌ಗೋಲ್ ಗಡಿ ದಾಟಿ ಭಾರತದೊಳಗೆ ಬಂದಿದ್ದನು. ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆಯ ಬಂಧನ
ಸಾಂದರ್ಭಿಕ ಚಿತ್ರ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on:Jan 10, 2025 | 8:34 AM

ಮಂಗಳೂರು, ಜನವರಿ 10: ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು (Mangaluru Police) ಕಾರ್ಯಾಚರಣೆ ನಡೆಸಿ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ (Bangladesh) ಪ್ರಜೆಯನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್​ (25)ನನ್ನು ಬಂಧಿಸಲಾಗಿದೆ.

ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್​​​ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದನು. ಬಳಿಕ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಿಂದ ಉಡುಪಿಗೆ ಬಂದಿದ್ದನು. ಇಲ್ಲಿಂದ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್​​ನಲ್ಲಿ ಅನರುಲ್​ ಶೇಖ್​​​ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.

ಅನರುಲ್​ ಶೇಖ್ ಬಗ್ಗೆ ಖಚಿತ ಮಾಹಿತಿ ಪಡೆದ ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನರುಲ್ ಶೇಖ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಂಗಳೂರಿಗೆ ಬರುತ್ತಿದ್ದ ಹೈಡ್ರೋವೀಡ್ ಗಾಂಜಾ ವಶ, ಆರೋಪಿ ಅರೆಸ್ಟ್​

ಮಂಗಳೂರು: ಮಂಗಳೂರು ಹಾಗೂ ಕೇರಳಕ್ಕೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಝಿಕ್ಕೋಡ್​ನ ಶಮೀರ್ ಪಿ.ಕೆ (42) ಬಂಧಿತ ಆರೋಪಿ. ಆರೋಪಿ ಬಳಿ ಇದ್ದ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದೇಶದಿಂದ ಗೋವಾಕ್ಕೆ ಬಂದ ಗಾಂಜಾವನ್ನು ಆರೋಪಿ ಶಮೀರ್ ಪಿ.ಕೆ ಕಾರಿನಲ್ಲಿ ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಪ್ರವೃತ್ತರಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯ ಬಪ್ಪನಾಡು ಬಳಿ ಆರೋಪಿ ಶಮೀರ್ ಪಿ.ಕೆಯನ್ನು ತಡೆದಿದ್ದಾರೆ. ಮಾಲು ಸಮೇತ ಸಿಕ್ಕ ಶಮೀರ್ ಪಿ.ಕೆಯನ್ನು ಬಂಧಿಸಿದ್ದಾರೆ. 738 ಗ್ರಾಂ ಹೈಡ್ರೋವೀಡ್ ಗಾಂಜಾ, ಕಾರು, ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗದ ಗಾರ್ಮೆಂಟ್ಸ್​ಗಳ​ ಮೇಲೆ ದಾಳಿ: 6 ಬಾಂಗ್ಲಾದೇಶ ಪ್ರಜೆಗಳು ಪೊಲೀಸ್​ ವಶಕ್ಕೆ

ಉಡುಪಿಯಲ್ಲಿ 9 ಜನ ಪೊಲೀಸ್​ ವಶಕ್ಕೆ

2024ರ ಅಕ್ಟೋಬರ್​ ತಿಂಗಳಲ್ಲಿ ಉಡುಪಿ ಪೊಲೀಸರು 9 ಮಂದಿ ಬಾಂಗ್ಲಾದೇಶ್​ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ಇವರು ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಅರಿಸಿಕೊಂಡು ಉಡುಪಿಗೆ ಬಂದಿದ್ದರು ಎಂದು ತಿಳಿದು ಬಂದಿದತ್ತು.

ಮೊದಲಿಗೆ ಮಹಮ್ಮದ್ ಮಾಣಿಕ್ ಎಂಬ ವ್ಯಕ್ತಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದನು. ಆಗ ಬಾಂಗ್ಲಾದೇಶದ ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿತ್ತು. ಬಳಿಕ ಈತನ ವಿಚಾರಣೆ ವೇಳೆ ಇನ್ನೂ ಹಲವರು ಮಲ್ಪೆಯಲ್ಲಿರುವುದು ತಿಳಿದುಬಂದಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:33 am, Fri, 10 January 25

ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ