ಮಂಗಳೂರು: ಧಾರ್ಮಿಕ ಕೇಂದ್ರಗಳಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿಯ ಬಂಧನ

ಮಂಗಳೂರು: ಧಾರ್ಮಿಕ ಕೇಂದ್ರಗಳಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿಯ ಬಂಧನ
ಸಾಂಕೇತಿಕ ಚಿತ್ರ

ಇಲ್ಲಿನ ಹಲವು ಧಾರ್ಮಿಕ ಕೇಂದ್ರಗಳಿಗೆ ಕಾಂಡೊಮ್ ಹಾಕುತ್ತಿದ್ದ. ಇದೀಗ ಆರೋಪಿಯನ್ನು ಮಂಗಳೂರಿನ ಪಾಂಡೇಶ್ವರ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

TV9kannada Web Team

| Edited By: ganapathi bhat

Dec 29, 2021 | 5:27 PM

ಮಂಗಳೂರು: ಕರಾವಳಿ ಭಾಗದ ದೈವಸ್ಥಾನಗಳಿಗೆ ಸಾಲು ಸಾಲು ಕಾಂಡೊಮ್ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ಕರಾವಳಿಯ ಇತರ ಭಾಗದ ದೈವಸ್ಥಾನ, ದೇವಸ್ಥಾನ, ಸಿಖ್ ಗುರುದ್ವಾರ, ಬಸದಿ, ದರ್ಗಾಗಳಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರಿನ ಕೋಟೆಕಾರು ನಿವಾಸಿ ದೇವದಾಸ್ ದೇಸಾಯಿ (62) ಎಂಬಾತನ ಬಂಧನವಾಗಿದೆ.

ಮಂಗಳೂರು ಸಿಸಿಬಿ ಮತ್ತು ಪಾಂಡೇಶ್ವರ ಪೊಲೀಸರಿಂದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಹುಬ್ಬಳ್ಳಿಯ ಉಣ್ಕಲ್ ಮೂಲದ ಆರೋಪಿ ಕಳೆದ 20 ವರ್ಷದಿಂದ ಮಂಗಳೂರಿನಲ್ಲಿ ವಾಸ ಆಗಿದ್ದ. ಈ ವೇಳೆ ಇಲ್ಲಿನ ಹಲವು ಧಾರ್ಮಿಕ ಕೇಂದ್ರಗಳಿಗೆ ಕಾಂಡೊಮ್ ಹಾಕುತ್ತಿದ್ದ. ಇದೀಗ ಆರೋಪಿಯನ್ನು ಮಂಗಳೂರಿನ ಪಾಂಡೇಶ್ವರ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೇಗುಲಗಳ ಹುಂಡಿಗೆ ಕಾಂಡೋಮ್ ಹಾಕ್ತಿದ್ದವನ ಬಂಧನ ಪ್ರಕರಣದ ಆರೋಪಿ ಈವರೆಗೆ 18 ದೇಗುಲಗಳ ಹುಂಡಿಗೆ ಕಾಂಡೋಮ್​ ಹಾಕಿದ್ದಾನೆ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಈ ಬಗ್ಗೆ ಆರೋಪಿ ದೇವದಾಸ್​​ ದೇಸಾಯಿ ಹೇಳಿಕೆ ನೀಡಿದ್ದಾರೆ. ದೇವದಾಸ್ ದೇಸಾಯಿ ತಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಆಗಿದ್ದರು. ದೇವದಾಸ್ ತಂದೆ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಕುಟುಂಬದಿಂದ ದೂರ ಉಳಿದಿದ್ದ ಆರೋಪಿ ದೇವದಾಸ್ ದೇಸಾಯಿ, ಮಂಗಳೂರಿನ ಕೋಟೆಕಾರು ನಿವಾಸಿ ಆಗಿದ್ದರು ಎಂದು ತಿಳಿದುಬಂದಿದೆ.

ಈಗ ಜೈಲಿಗೆ ಹೋಗುತ್ತಿರೋದಕ್ಕೆ ನನಗೆ ಪಶ್ಚತ್ತಾಪವಿಲ್ಲ ಬಂಧಿತ ಆರೋಪಿಯಿಂದ ಚಿತ್ರವಿಚಿತ್ರ ಹೇಳಿಕೆ ಕೇಳಿಬಂದಿದೆ. ಭೂಮಿ ವಿನಾಶಕ್ಕೆ ಬಂದಿದೆ. ಎಲ್ಲರೂ ಅಂತ್ಯವಾಗುತ್ತಾರೆ. ಏಸು ಒಬ್ಬನೆ ಕಾಪಾಡಬೇಕು‌. ಇನ್ಯಾವುದೇ ಧರ್ಮದ ದೇವರು ಈ ಅಂತ್ಯವನ್ನು ಕಾಪಾಡಲು ಸಾದ್ಯವಿಲ್ಲ. ಏಸು ಒಬ್ಬನೇ ಶ್ರೇಷ್ಟ. ಇನ್ನೇಲ್ಲಾ ದೇವರುಗಳು ಅಪವಿತ್ರ ಎಂದು ಹೇಳಿಕೆ ನೀಡಿದ್ದಾನೆ. ಅದಕ್ಕಾಗಿ ನಾನು ಅಲ್ಲಿ ಅಪವಿತ್ರ ವಸ್ತುಗಳನ್ನು ಹಾಕುತ್ತಿದ್ದೆ. ಮನುಷ್ಯನಿಗೆ ಆಯಸ್ಸು ಇರೋದೆ 70 ವರ್ಷ. ಈಗ ಜೈಲಿಗೆ ಹೋಗುತ್ತಿರೋದಕ್ಕೆ ನನಗೆ ಪಶ್ಚತ್ತಾಪವಿಲ್ಲ. ಇನ್ನೊಂದಿಷ್ಟು ವರ್ಷ ಇಂತದ್ದೇ ಕೆಲಸ ಮಾಡುವ ಅವಕಾಶವಿತ್ತು ಎಂದು ಹೇಳಿದ್ದಾನೆ.

ಶಿವಮೊಗ್ಗ: ಕಣ್ಣೂರು ಬಳಿ ಮಿನಿ ಲಾರಿ ಡಿಕ್ಕಿಯಾಗಿ ಲಾರಿ ಕ್ಲೀನರ್ ಸಾವು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಣ್ಣೂರು ಬಳಿ ಅಪಘಾತ ಸಂಭವಿಸಿದೆ. ಕಣ್ಣೂರು ಬಳಿ ಸಂಭವಿಸಿದ ಅಪಘಾತದಲ್ಲಿ ಲಾರಿ ಕ್ಲೀನರ್ ಸಾವನ್ನಪ್ಪಿದ್ದಾರೆ. ಮಿನಿ ಲಾರಿ ಡಿಕ್ಕಿಯಾಗಿ ಘಟನೆ ನಡೆದಿದೆ, ಮಿನಿ ಲಾರಿ ಕ್ಲೀನರ್ ನೂರ್ ಅಹಮ್ಮದ್‌ (36) ದುರ್ಮರಣವನ್ನಪ್ಪಿದ್ದಾರೆ. ಚಾಲಕ ರಾಹೀಲ್‌ಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Crime News: 21 ವರ್ಷದ ಮಗಳ ಮುಂದೆಯೇ ಮಹಿಳೆಯ ಹತ್ಯೆ ಪ್ರಕರಣ: 3ನೇ ಪತಿ ಸೇರಿ ಇಬ್ಬರ ಬಂಧನ

ಇದನ್ನೂ ಓದಿ: ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ; ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada