
ಮಂಗಳೂರು, ಅಕ್ಟೋಬರ್ 14: ಅಪ್ರಾಪ್ತ ಕಾಲೇಜ್ ಹುಡುಗಿಯರನ್ನಿಟ್ಟುಕೊಂಡು (girls) ದಂಧೆ ಮಾಡುತ್ತಿದ್ದ ವೇಶ್ಯಾವಾಟಿಕೆ (Prostitution) ಅಡ್ಡೆ ಮೇಲೆ ಮೂಡಬಿದಿರೆ ಪೊಲೀಸರು ದಾಳಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಟೋ ಚಾಲಕ ಮಹೇಶ್, ಕಟೀಲು ನಿವಾಸಿ ಶ್ರೀಕಾಂತ್, ಯಜ್ಞೇಶ್ ಮತ್ತು ದಿಲೀಪ್ ಬಂಧಿತರು. ಖಾಕಿ ಪಡೆ ಇಬ್ಬರು ಅಪ್ರಾಪ್ತೆಯರ ರಕ್ಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ನಿಡ್ಡೋಡಿ ಎಂಬಲ್ಲಿ ಘಟನೆ ನಡೆದಿದೆ. ಮೂಡಬಿದಿರೆಯ ನಿಡ್ಡೋಡಿ ನಿವಾಸಿ ಆಟೋ ಚಾಲಕ, ಬಂಧಿತ ಮಹೇಶ್, ಇಬ್ಬರು ಅಪ್ರಾಪ್ತ ಕಾಲೇಜ್ ಬಾಲಕಿಯರನ್ನು ಪುಸಲಾಯಿಸಿ ಕರೆತಂದಿದ್ದ.
ಇದನ್ನೂ ಓದಿ: ಮನೆಯಲ್ಲೇ ಹೈಟೆಕ್ ವೇಶ್ಯವಾಟಿಕೆ ದಂಧೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 6 ಪುರುಷರು, ಇಬ್ಬರು ಯುವತಿಯರು
ಇದೇ ವೇಳೆ ತನ್ನ ಸ್ನೇಹಿತರನ್ನು ಮನೆಗೆ ಕರೆಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಮೂಡಬಿದಿರೆ ಪೊಲೀಸರು ಇಬ್ಬರು ಅಪ್ರಾಪ್ತೆಯರ ರಕ್ಷಣೆ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ಇನ್ನು ಇತ್ತೀಚೆಗೆ ಮೈಸೂರು ತಾಲ್ಲೂಕಿನ ದಾಸನಕೊಪ್ಪಲಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ಮಾಡಿ, 6 ಆರೋಪಿಗಳನ್ನು ಬಂಧಿಸಿದ್ದರು. ಇನ್ನು ದಾಳಿ ವೇಳೆ ಮನೆಯಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ಬೆಳಕಿಗೆ ಬಂದಿದ್ದವು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್ನಲ್ಲಿ ಸುರಂಗ ಮಾರ್ಗ ಪತ್ತೆ
ಓಡನಾಡಿ ಸಂಸ್ಥೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದರು. ಮನೆಯಲ್ಲಿ ನಕಲಿ ಪೇಯಿಂಗ್ ಗೆಸ್ಟ್ ಎಂದು ಯುವತಿಯರನ್ನು ಇರಿಸಲಾಗಿತ್ತು. ಸ್ಥಳೀಯರು ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದರು.
ಇನ್ನು ಮತ್ತೊಂದು ಪ್ರಕರಣದಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದ ಘಟನೆಯೊಂದು ವರದಿಯಾಗಿತ್ತು. ಬಸ್ನಲ್ಲಿ ಪಕ್ಕದಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದ. ಸದ್ಯ ಪ್ರಯಾಣಿಕರೆಲ್ಲರೂ ಸೇರಿ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.