Mangaluru News: ಸಂಚಾರ ನಿಯಮ ಉಲ್ಲಂಘನೆ; 222 ಡಿಎಲ್​​ಗಳ ಅಮಾನತಿಗೆ ಮಂಗಳೂರು ಪೊಲೀಸರ ಶಿಫಾರಸು

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 222 ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಆಯಾ ಆರ್‌ಟಿಒಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

Mangaluru News: ಸಂಚಾರ ನಿಯಮ ಉಲ್ಲಂಘನೆ; 222 ಡಿಎಲ್​​ಗಳ ಅಮಾನತಿಗೆ ಮಂಗಳೂರು ಪೊಲೀಸರ ಶಿಫಾರಸು
ಕುಲದೀಪ್ ಕುಮಾರ್ ಜೈನ್
Prajwal D'Souza Edited By:

Updated on: Jul 28, 2023 | 2:56 PM

ಮಂಗಳೂರು: ಅಜಾಗರೂಕ ಚಾಲನೆ, ಅತಿವೇಗದ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮಗಳ ಉಲ್ಲಂಘನೆ ಅಪರಾಧಗಳಿಗೆ (Traffic Offences) ಸಂಬಂಧಿಸಿದಂತೆ 222 ಚಾಲನಾ ಪರವಾನಗಿಗಳನ್ನು (Driving Licenses) ಅಮಾನತುಗೊಳಿಸುವಂತೆ ಮಂಗಳೂರು ಪೊಲೀಸರು ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಪತ್ರ ಬರೆದಿದ್ದಾರೆ. ಜುಲೈ 13 ಮತ್ತು ಜುಲೈ 26 ರ ನಡುವೆ ಈ ಅಪರಾಧಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸುವ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಚಾಲಕರು ಮತ್ತು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 222 ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಆಯಾ ಆರ್‌ಟಿಒಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Dakshina Kannada: ಚಿನ್ನಕ್ಕಾಗಿ ಅಜ್ಜ-ಅಜ್ಜಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಂಗಳೂರಿನಲ್ಲಿ ಸಿಕ್ಕಿಬಿದ್ದ

ವರದಿಗಳ ಪ್ರಕಾರ, ಮೊದಲು ಆರ್‌ಟಿಒಗಳಿಂದ ವಿಚಾರಣೆ ನಡೆಸಲಾಗುತ್ತದೆ. ನಂತರ ಡಿಎಲ್‌ಗಳನ್ನು ಎರಡರಿಂದ ಆರು ತಿಂಗಳವರೆಗೆ ಅಮಾನತುಗೊಳಿಸಬಹುದಾಗಿದೆ.

ಈ ಪ್ರಕರಣಗಳಲ್ಲಿ ಮೊದಲ ಬಾರಿಯ ಮತ್ತು ಪುನರಾವರ್ತಿತ ಅಪರಾಧಗಳು ಸೇರಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ‘ನ್ಯೂಸ್ 9’ ಗೆ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Prajwal D'Souza

Prajwal is a reporter who covers the politics and current affairs of Karnataka. He is a co-host of Deccan Vahini, a live blogger and has expertise in writing explainers and long-form articles. Contact: prajwal.dsouza@tv9.com

Follow Us