ಮಂಗಳೂರಿನ ಕೆಲ ಅಂಗಡಿಗಳಲ್ಲಿ ಕುರಿ ಮಾಂಸದಲ್ಲಿ ಕರುಗಳ ಮಾಂಸ ಮಿಶ್ರಣ: ಭಜರಂಗದಳ ಆರೋಪ

| Updated By: ವಿವೇಕ ಬಿರಾದಾರ

Updated on: Jul 26, 2024 | 10:42 AM

ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಹೊಟೇಲ್​ಗಳಲ್ಲಿ ಗೋ ಖಾದ್ಯಗಳ ಮಾರಾಟ ಮಾಡಲಾಗುತ್ತಿದೆ. ಇದನ್ನು ಹಿಂದೂಗಳಿಗೆ ತಿನ್ನಿಸಿ ಧರ್ಮ‌ ಭ್ರಷ್ಟರನ್ನಾಗಿ ಮಾಡಲಾಗುತ್ತಿದೆ. ಮಾಂಸದ ಅಂಗಡಿಯ ಲೈಸನ್ಸ್ ಪಡೆದು ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಭಜರಂಗದಳ ಪ್ರಮುಖ ಪುನೀತ್ ಅತ್ತಾವರ ಹೇಳಿದರು.

ಮಂಗಳೂರಿನ ಕೆಲ ಅಂಗಡಿಗಳಲ್ಲಿ ಕುರಿ ಮಾಂಸದಲ್ಲಿ ಕರುಗಳ ಮಾಂಸ ಮಿಶ್ರಣ: ಭಜರಂಗದಳ ಆರೋಪ
ವಿಹೆಚ್​ಪಿ, ಭಜರಂಗ ಮುಖಂಡರು
Follow us on

ಮಂಗಳೂರು, ಜುಲೈ 26: ಕುರಿ ಮಾಂಸದಲ್ಲಿ ಕರುಗಳ ಮಾಂಸ ಮಿಶ್ರಣ ಮಾಡಿ ಮಾರಲಾಗುತ್ತಿದೆ ಎಂದು ಭಜರಂಗದಳ (Bajrang Dal) ಮಂಗಳೂರು (Mangaluru) ವಿಭಾಗೀಯ ಸಹ ಸಂಯೋಜಕ ಪುನೀತ್ ಅತ್ತಾವರ ಆರೋಪ ಮಾಡಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿದರೂ ಅವ್ಯಾಹತವಾಗಿ ಅಕ್ರಮ ಗೋ ಸಾಗಾಟ, ಹತ್ಯೆ ಮಾಡಲಾಗುತ್ತಿದೆ. ಕುರಿ ಮಾಂಸದ ಹೆಸರಿನಲ್ಲಿ ಸಣ್ಣ ಸಣ್ಣ ಕರುಗಳ (Calf) ಮಾಂಸ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗಳೂರಿನಲ್ಲಿ ಟವಿ9 ಜೊತೆ ಮಾತನಾಡಿದ ಅವರು, ಕೆಲ ಹೊಟೇಲ್​ಗಳಲ್ಲಿ ಗೋ ಖಾದ್ಯಗಳ ಮಾರಾಟ ಮಾಡಲಾಗುತ್ತಿದೆ. ಇದನ್ನು ಹಿಂದೂಗಳಿಗೆ ತಿನ್ನಿಸಿ ಧರ್ಮ‌ ಭ್ರಷ್ಟರನ್ನಾಗಿ ಮಾಡಲಾಗುತ್ತಿದೆ. ಮಾಂಸದ ಅಂಗಡಿಯ ಲೈಸನ್ಸ್ ಪಡೆದು ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ಸುರತ್ಕಲ್, ಜೋಕಟ್ಟೆ, ತಣ್ಣೀರುಬಾವಿ ಪರಿಸರದಲ್ಲಿಅಕ್ರಮ ಕಸಾಯಿಖಾನೆ ತೆರೆಯಲಾಗಿದೆ. ಈ ಬಗ್ಗೆ ದೂರು ನೀಡುತ್ತೇವೆ ಎಂದರು.

ಇದನ್ನೂ ಓದಿ: ಗೋಮಾತೆಯನ್ನು ಕಡಿಯುವ ಮುಸ್ಲಿಮರ ಕೈಗಳನ್ನು ಕತ್ತರಿಸಬೇಕೆಂದ ಹಿಂದೂ ಮುಖಂಡ ಪುನೀತ್ ಅತ್ತಾವರ; ಕಾರ್ಕಳದಲ್ಲಿ ಪ್ರಕರಣ ದಾಖಲು

ಗೋವುಗಳನ್ನು ತರುವ, ಮಾಂಸ ಕೊಂಡು ಹೋಗುವ ಜಾಲ ಭೇದಿಸಬೇಕು. ಕಮೀಷನರೇಟ್ ವ್ಯಾಪ್ತಿಯಲ್ಲಿ ನೂರಾರು ಬೀಫ್ ಸ್ಟಾಲ್​ಗಳಿವೆ. ಎಲ್ಲಿಂದ ಈ ಮಾಂಸ ಬರುತ್ತೆ ಎಂಬ ತನಿಖೆ ಆಗುತ್ತಿಲ್ಲ. ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ಭಜರಂಗದಳ ಕಾರ್ಯಕರ್ತರೇ ನೇರ ಕಾರ್ಯಾಚರಣೆಗಿಳಿಯುತ್ತಾರೆ.

2006 ರಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಯನ್ನು ಪೊಲೀಸ್​ ಇಲಾಖೆ ನೆನಪು ಮಾಡಿಕೊಳ್ಳಬೇಕು. ಇಂತಹ ಘಟನೆ ಆಗಬಾರದೆಂದರೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಗೋವಿನ ರಕ್ಷಣೆ ಹಿಂದೂ ಸಮಾಜದ ಕರ್ತವ್ಯ. ನಮ್ಮ ಮೇಲೆ ಕೇಸ್ ಆದ್ರೂ ಗೋ ರಕ್ಷಣೆ ಮಾಡೇ ಮಾಡುತ್ತೇವೆ. ಗೋರಕ್ಷಣೆ ಮಾಡಿದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಗೋ ಕಳ್ಳರ ಮೇಲೂ ಗೂಂಡಾ ಕಾಯ್ದೆ ಹಾಕಿ. ಆಗ ಈ ಗೋಕಳ್ಳತನ, ಅಕ್ರಮ ಕಸಾಯಿಖಾನೆ ಕೃತ್ಯ ಕಡಿಮೆಯಾಗುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ