ಹಡಗಿನಲ್ಲಿ ಅಗ್ನಿ ಅವಘಡ: ಸತತ 40 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಇಂಡಿಯನ್ ಕೋಸ್ಟ್ ಗಾರ್ಡ್
ಗೋವಾ ಕಡಲ ಕಿನಾರೆಯ ಅರಬ್ಬಿ ಸಮುದ್ರದಲ್ಲಿ ಜುಲೈ 20ರಂದು ಸರಕು ಸಾಗಾಟದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೋಗೆ ಹಡಗು ಹೊರಟಿದ್ದಾಗ ದುರಂತ ಸಂಭವಿಸಿದೆ. ಮಂಗಳೂರು ಕಡಲ ಕಿನಾರೆಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳೂರು, ಜುಲೈ 26: ಸರಕು ಸಾಗಾಟದ ಹಡಗಿನಲ್ಲಿ ಅಗ್ನಿ ಅವಘಡ (Fire accident) ಉಂಟಾಗಿರುವಂತಹ ಘಟನೆ ಗೋವಾ (Goa) ಕಡಲ ಕಿನಾರೆಯ ಅರಬ್ಬಿ ಸಮುದ್ರದಲ್ಲಿ ಜುಲೈ 20ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸತತ 40 ಗಂಟೆಯ ಕಾರ್ಯಾಚರಣೆ ಬಳಿಕ ಹೆಲಿಕಾಪ್ಟರ್ ಮತ್ತು ರಕ್ಷಣಾ ಹಡಗಿನ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ನಿಂದ ಬೆಂಕಿ ನಂದಿಸಲಾಗಿದೆ. ಸದ್ಯ ಹಡಗನ್ನು ಮಂಗಳೂರು ಕಡಲ ಕಿನಾರೆಗೆ ತಂದು ನಿಲ್ಲಿಸಲಾಗಿದೆ. ಗುಜರಾತ್ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೋಗೆ ಹಡಗು ಹೊರಟಿದ್ದ ವೇಳೆ ಅವಘಡ ಸಂಭವಿಸಿತ್ತು.
ಸದ್ಯ ಲಂಗರು ಹಾಕಿರುವ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವದ ಜೊತೆ ಹಡಗು ಮುಳುಗುವ ಆತಂಕ ಉಂಟಾಗಿದೆ. ಆದರೆ ಇದರಿಂದ ಮಂಗಳೂರು ಕಡಲ ಕಿನಾರೆಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ ಮತ್ತು ಸಂಭಾವ್ಯ ಅವಘಡ ಎದುರಿಸಲು ಸಿದ್ದ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರಸ್ತೆ ಬದಿ ವ್ಯಾಪಾರಿಗಳೂ UPI ಪಾವತಿ ಸ್ವೀಕರಿಸ್ತಾರೆ? ಬೆಸ್ಕಾಂಗೆ ಏನಾಗಿದೆ? ಹೈಕೋರ್ಟ್ ಕ್ಲಾಸ್
ಸದ್ಯ ಇಂಡಿಯನ್ ಕೋಸ್ಟ್ ಗಾರ್ಡ್ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮತ್ತೆ ಪ್ರಯಾಣ ಮುಂದುವರಿಸುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳಿಂದ ಬೆಂಕಿ: ಸುಟ್ಟು ಕರಕಲಾದ ವಾಹನಗಳು
ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವಂತಹ ಘಟನೆ ಲಕ್ಷ್ಮೀದೇವಿ ನಗರದಲ್ಲಿ ತಡರಾತ್ರಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ 2 ಆಟೋ, 1 ಗೂಡ್ಸ್ ವಾಹನ ಸುಟ್ಟು ಕರಕಲಾಗಿದೆ. ಮೇಲ್ನೋಟಕ್ಕೆ ದಾರಿಯಲ್ಲಿ ಹೊಗುತಿದ್ದ ಪುಂಡರಿಂದ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ; ಹನ್ನೊಂದನೇ ದಿನದ ಕಾರ್ಯಾಚರಣೆ ಅಂತ್ಯ, ಇಲ್ಲಿದೆ ಸಂಪೂರ್ಣ ವಿವರ
ತಡರಾತ್ರಿ 2 ಗಂಟೆ ಸುಮಾರಿಗೆ ಬಂದು ಬೆಂಕಿ ಹಾಕಿದಿದ್ದಾರೆ. ಬೆಂಕಿ ಕಂಡ ಕೂಡಲೇ ಸ್ಥಳೀಯರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 pm, Fri, 26 July 24