ಸಾಮಾಜಿಕ ಅಂತರ ಕಾಪಾಡಲು ಬಂದಿದೆ Mobile Diesel Bunk
ಲಾಕ್ಡೌನ್ ಎಫಕ್ಟ್ ನಿಂದ ಸಾಮಾಜಿಕ ಅಂತರ ಪಾಲಿಸುವುದು ಎಲ್ಲರ ಆದ್ಯತೆಯಾಗಿದೆ. ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ಜನರು ಒಟ್ಟಿಗೆ ಸೇರುವುದೇ ನಿಷಿದ್ಧವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವಾಗಲೂ ರಷ್ ಆಗಿರುವ ಪೆಟ್ರೋಲ್ ಬಂಕ್ ಗಳಲ್ಲಿನ ಪರಿಸ್ಥಿತಿ ಹೇಗೆ? ಇದಕ್ಕಾಗಿ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆ ತಂದಿದ್ದು, ಅದು ಲಾಕ್ಡೌನ್ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಿದೆ. ಮೊಬೈಲ್ ಡೀಸೆಲ್ ಬಂಕರ್ ನಿಂದ ಸಾಮಾಜಿಕ ಅಂತರಕ್ಕೆ ಒತ್ತು..! ಲಾಕ್ ಡೌನ್ ನಲ್ಲಿ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹಾಗಾಗಿ ಕರಾವಳಿಯ ಪೆಟ್ರೋಲ್ […]
ಲಾಕ್ಡೌನ್ ಎಫಕ್ಟ್ ನಿಂದ ಸಾಮಾಜಿಕ ಅಂತರ ಪಾಲಿಸುವುದು ಎಲ್ಲರ ಆದ್ಯತೆಯಾಗಿದೆ. ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ಜನರು ಒಟ್ಟಿಗೆ ಸೇರುವುದೇ ನಿಷಿದ್ಧವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವಾಗಲೂ ರಷ್ ಆಗಿರುವ ಪೆಟ್ರೋಲ್ ಬಂಕ್ ಗಳಲ್ಲಿನ ಪರಿಸ್ಥಿತಿ ಹೇಗೆ? ಇದಕ್ಕಾಗಿ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆ ತಂದಿದ್ದು, ಅದು ಲಾಕ್ಡೌನ್ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಿದೆ.
ಮೊಬೈಲ್ ಡೀಸೆಲ್ ಬಂಕರ್ ನಿಂದ ಸಾಮಾಜಿಕ ಅಂತರಕ್ಕೆ ಒತ್ತು..! ಲಾಕ್ ಡೌನ್ ನಲ್ಲಿ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹಾಗಾಗಿ ಕರಾವಳಿಯ ಪೆಟ್ರೋಲ್ ಬಂಕ್ ಗಳಲ್ಲಿ ರಷ್ ಕಡಿಮೆ ಮಾಡಲಾಗುತ್ತಿದೆ. ಮಂಗಳೂರು ಹೊರವಲಯದ ಕೋಟೆಕಾರು ಎಂಬಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಮಾಲೀಕ ಅಣ್ಣಪ್ಪ ನಾಯಕ್ ಅವರು ಮೊಬೈಲ್ ಬಂಕರ್ ಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಬಿಪಿಸಿಎಲ್ ಗೆ ಅರ್ಜಿ ಹಾಕಿದ್ರು.
ಭಾರತ ಸರ್ಕಾರದ ಈ ಯೋಜನೆಯ ಪ್ರಕಾರ ಮೊಬೈಲ್ ಬಂಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಡಿಸೇಲ್ ಬೇಕಾದವರಿಗೆ ಡೋರ್ ಡೆಲಿವರಿಯನ್ನು ಅದೇ ದರದಲ್ಲಿ ನೀಡುವುದಾಗಿದೆ. ಕಳೆದ ತಿಂಗಳು ಇದಕ್ಕೆ ಸ್ಯಾಂಕ್ಷನ್ ಸಿಕ್ಕಿದೆ. ಲಾಕ್ ಡೌನ್ ಸಂದರ್ಭಕ್ಕೆ ಇದು ಹೇಳಿ ಮಾಡಿಸಿದಂತಿದ್ದು, ಸದ್ಬಳಕೆಯಾಗುತ್ತಿದೆ. ಮಂಗಳೂರಿನಲ್ಲಿ ಹಲವು ಆಸ್ಪತ್ರೆಗಳಿವೆ. ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಿವೆ. ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳಿವೆ. ಇಲ್ಲೆಲ್ಲಾ ಅತೀ ಹೆಚ್ಚು ಡಿಸೆಲ್ ಬಳಸಲಾಗುತ್ತೆ.
ಮೊಬೈಲ್ ಬಂಕ್ ವಾಹನದಲ್ಲಿ ಹಲವಾರು ವಿಶೇಷಗಳಿವೆ. ಬಂಕ್ ನಲ್ಲಿ ಇರುವಂತಹ ಮಷಿನ್ ಈ ವಾಹನದಲ್ಲಿಯೂ ಇದೆ. ಬಂಕ್ ನಲ್ಲಿ ಇರುವ ದರವೇ ಮೊಬೈಲ್ ಬಂಕರ್ ನಲ್ಲೂ ಕೂಡ ಇದ್ದು ಎಕ್ಸ್ಟ್ರಾ ತೆಗೆದುಕೊಳ್ಳುವುದಿಲ್ಲ. ಸದ್ಯ ದೊಡ್ಡ ಮಟ್ಟದಲ್ಲಿ ಡಿಸೆಲ್ ಅವಶ್ಯಕತೆ ಇದ್ದವರು ಆಪ್ ಮೂಲಕ ಬುಕ್ ಮಾಡಿ ಡಿಸೆಲ್ ನ್ನು ತಮ್ಮ ಮನೆ ಬಳಿಗೆ ತರಿಸಿಕೊಳ್ಳುತ್ತಿದ್ದಾರೆ. ಈ ಮೊಬೈಲ್ ಬಂಕರ್ ಗೆ ಜನರಿಂದ ಕೂಡ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಕೇಂದ್ರ ಸರ್ಕಾರದ ಈ ಒಂದು ಯೋಜನೆ ಲಾಕ್ ಡೌನ್ ವೇಳೆ ಸೋಶಿಯಲ್ ಡಿಸ್ಟೆನ್ಸ್ ಕಾಪಾಡಲು ನೆರವಾಗಿದೆ ಎನ್ನುತ್ತಾರೆ ಬಂಕ್ ಮಾಲೀಕ ಅಣ್ಣಪ್ಪ ನಾಯಕ್.