ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ; ಮೂವರು ರಾಮ್ ಸೇನೆ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ ಪಣಂಬೂರು ಪೊಲೀಸರು

| Updated By: ಆಯೇಷಾ ಬಾನು

Updated on: Feb 05, 2024 | 1:03 PM

ಮಂಗಳೂರು ಹೊರವಲಯದ ಪಣಂಬೂರು ಬೀಚ್​ಗೆ ಕೇರಳದ ಯುವಕ ಹಾಘೂ ಬೆಂಗಳೂರಿನ ಯುವತಿ ಬಂದಿದ್ದರು. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕ-ಯುವತಿಯನ್ನು ತಡೆದು ವಿಚಾರಣೆ ನಡೆಸಿ ಕಿರಿಕ್ ಮಾಡಿದ್ದಾರೆ. ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ; ಮೂವರು ರಾಮ್ ಸೇನೆ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ ಪಣಂಬೂರು ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಫೆ.05: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣ ದಾಖಲಾಗಿದೆ. ಮಂಗಳೂರು ಹೊರವಲಯದ ಪಣಂಬೂರು ಬೀಚ್ ನಲ್ಲಿ (Panambur Beach) ಅನ್ಯಕೋಮಿನ ಯುವಕ ಯುವತಿಯನ್ನ ತಡೆದು ಹಿಂದೂ ಸಂಘಟನೆ ಕಾರ್ಯಕರ್ತರು ಕಿರಿಕ್ ಮಾಡಿದ್ದಾರೆ. ಸದ್ಯ ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಹೊರವಲಯದ ಪಣಂಬೂರು ಬೀಚ್​ಗೆ ಕೇರಳದ ಯುವಕ ಹಾಘೂ ಬೆಂಗಳೂರಿನ ಯುವತಿ ಬಂದಿದ್ದರು. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕ-ಯುವತಿಯನ್ನು ತಡೆದು ವಿಚಾರಣೆ ನಡೆಸಿ ಕಿರಿಕ್ ಮಾಡಿದ್ದಾರೆ. ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಹರಕೆ ಕೋಲದಲ್ಲಿ ಭಾಗವಹಿಸಿದ ಯು.ಟಿ. ಖಾದರ್

ರೆಂಬೆ ಕಡಿದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಥಳಿತ?

ಮರದ ರೆಂಬೆ ಕಡಿದಿದ್ದಕ್ಕೆ ಕುರಿಗಾಹಿ ಹಾಗೂ ನಾಲ್ವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಜಂಬರಗಟ್ಟೆಯಲ್ಲಿ ಘಟನೆ ನಡೆದಿದೆ. ಕುರಿ ಕಟ್ಟುವ ಗೂಟಕ್ಕೆ ಕುರಿಗಾಹಿ ರವಿ ಮರದ ರೆಂಬೆ ಕಡಿದು ಬಂದಿದ್ನಂತೆ. ರೆಂಬೆ ಕಡಿದ ಜಾಗದಲ್ಲಿ ಅನ್ಯ ಧರ್ಮದ ಸ್ಮಶಾನ ಇದೆ. ಇದೇ ವಿಚಾರಕ್ಕೆ ಅನ್ಯಕೋಮಿನ ಯುವಕರು ದಾಳಿ ಮಾಡಿರೋ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡಿದವರ ಬಂಧನಕ್ಕೆ ಗ್ರಾಮಸ್ಥರು ಪಟ್ಟು ಹಿಡಿದ್ರು. ಹೊಳೆಹೊನ್ನೂರು ಠಾಣೆ ಎದುರು ಜಮಾಯಿಸಿದ್ರು.

42 ಸಿಮ್ ಕಾರ್ಡ್​ಗಳಿಂದ ಟ್ರೇಡಿಂಗ್ ದಂಧೆ

42 ಸಿಮ್ ಕಾರ್ಡ್​ಗಳಿಂದ ನಿಗೂಢ ಕೆಲಸ ಪ್ರಕರಣದ ತನಿಖೆಯ ವೇಳೆ ಶಾಕಿಂಗ್ ಸತ್ಯ ಬಯಲಾಗಿದೆ. ಆನ್​ಲೈನ್ ವಿದೇಶಿ ಕರೆನ್ಸಿಯ ವ್ಯವಹಾರಕ್ಕೆ ಸಿಮ್ ಕಾರ್ಡ್​ಗಳನ್ನ ಬಳಸಿದ್ದು ಧರ್ಮಸ್ಥಳ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಮೂಲದ ವ್ಯಕ್ತಿ ಸೂಚನೆಯಂತೆ ಆನ್​ಲೈನ್​ನಲ್ಲಿ ವಿದೇಶಿ ಕರೆನ್ಸಿಯ ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದರು. ಬೆಳ್ತಂಗಡಿ ಮೂಲದ ಯುವಕರ ಮೂಲಕ ಸಿಮ್ ಕಾರ್ಡ್ ಖರೀದಿಸಿ ಅನಧಿಕೃತ ಆ್ಯಪ್​​ಗಳ ಮೂಲಕ ದಂಧೆ ನಡೆಸ್ತಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:50 am, Mon, 5 February 24