ಮಂಗಳೂರು: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ವೇಳೆ ಬಾಂಬ್ ಇಡಲು ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ. ಮೊಹಮ್ಮದ್ ಸಿನಾನ್, ಇಕ್ಬಾಲ್, ಸರ್ಫರಾಜ್ ನವಾಜ್ ಮತ್ತು ನೌಫಲ್ ಎಂಬುವವರ ಮನೆಗಳ ಮೇಲೆ ಕೇಂದ್ರ ಸಂಸ್ಥೆ ಭಾನುವಾರ ದಾಳಿ ಮಾಡಿದೆ. ಈ ನಾಲ್ವರೂ ಬಂಟ್ವಾಳ ಸಮೀಪದ ನಂದಾವರ ನಿವಾಸಿಗಳು ಎಂದು ತಿಳಿದು ಬಂದಿದೆ.
ಇನ್ನು ಮತ್ತೊಂದೆಡೆ ಎನ್‌ಐಎ ಈ ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಎನ್‌ಐಎ ಮೂಲಗಳು ಟಿವಿ9ಗೆ ತಿಳಿಸಿವೆ. ತನಿಖೆಯ ವೇಳೆ ಹಲವು ಬ್ಯಾಂಕ್ ಖಾತೆಗಳಿಗೆ ನಿರಂತರವಾಗಿ ಹಣ ವರ್ಗಾವಣೆಯಾಗುತ್ತಿರುವುದು ಪತ್ತೆಯಾಗಿದೆ. ಹೆಚ್ಚಿನ ತನಿಖೆಗಾಗಿ ಎನ್‌ಐಎ ನಾಲ್ವರು ಶಂಕಿತರನ್ನು ಬಿಹಾರಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.
ಆದ್ರೆ ಎನ್‌ಐಎ ದಾಳಿ ನಡೆಸಿರುವ ನಾಲ್ವರು ಪ್ರಧಾನಿ ಮೋದಿಯವರ ಯಾವ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯಕ್ಕೆ ಆರ್ಥಿಕ ನೆರವು ನೀಡಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:38 pm, Mon, 6 March 23