ಬೆಳ್ತಂಗಡಿಯ ಸೌತಡ್ಕ ಗ್ರಾಮದ ಮಹಾಗಣಪತಿ ದೇಗುಲಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿಷೇಧ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಗ್ರಾಮದ ಮಹಾಗಣಪತಿ ದೇಗುಲಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Beltangadi) ತಾಲೂಕಿನ ಸೌತಡ್ಕ ಗ್ರಾಮದ ಮಹಾಗಣಪತಿ (Mahaganpati) ದೇಗುಲಕ್ಕೆ ಹಿಂದೂಯೇತರರ (Non Hindu) ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇವಸ್ಥಾನದ ಎದುರುಗಡೆ ಹಿಂದೂ ಸಂಘಟನೆಗಳು ನಿರ್ಬಂಧದ ಫಲಕ ಅಳವಡಿಸಿದ್ದಾರೆ. ದೇವಸ್ಥಾನದ ಪ್ರವೇಶ ದ್ವಾರದ ಬಳಿಯೇ ವಿಶ್ವ ಹಿಂದೂಪರಿಷತ್ (Vishwa Hindu Parishad) ಬಜರಂಗದಳದ (Bajarangadal) ಹೆಸರಿನಲ್ಲಿ ಫಲಕ ಅಳವಣಡಿಸಲಾಗಿದೆ. ಸೌತಡ್ಕಕ್ಕೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಮತ್ತು ವಾಹನ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಇದನ್ನು ಓದಿ: ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್
ಅನ್ಯಕೋಮಿನವರು ಪ್ರವೇಶಿಸಿ ಭಕ್ತಾಧಿಗಳನ್ನ ಲವ್ ಜಿಹಾದ್ ಹಾಗೂ ಇತರೆ ದುಷ್ಕೃತ್ಯ ಎಸಗಿರೋದು ಕಂಡು ಬಂದಿದೆ. ಹೀಗಾಗಿ ಹಿಂದುಗಳಲ್ಲದವರ ವಾಹನಗಳು ದೇವಸ್ಥಾನ ಪ್ರವೇಶ ಮಾಡದಂತೆ ನಿರ್ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿನ ಮುಸ್ಲಿಂ ಆಟೋ ಚಾಲಕ ಲವ್ ಜಿಹಾದ್ ಎಸಗಿದ ಆರೋಪ ಕೇಳಿ ಬಂದಿತ್ತು.
ಇದನ್ನು ಓದಿ: ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ ಹಾಟ್ ಅವತಾರ ನೋಡಿ; ಇಲ್ಲಿದೆ ಫೋಟೋ ಗ್ಯಾಲರಿ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.