ರಾಹುಲ್ ಗಾಂಧಿ ದೊಡ್ಡ ಹುಚ್ಚ, ಪಾರ್ಲಿಮೆಂಟ್​ಗೆ ಹೋಗಿ ಅವನ ಕೆನ್ನೆಗೆ ಬಾರಿಸಬೇಕು: ಭರತ್ ಶೆಟ್ಟಿ ಹೇಳಿಕೆಗೆ ವ್ಯಾಪಕ ವಿರೋಧ

| Updated By: ಆಯೇಷಾ ಬಾನು

Updated on: Jul 09, 2024 | 12:18 PM

ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಶಾಸಕ ಭರತ್ ಶೆಟ್ಟಿ ಏಕವಚನದಲ್ಲೇ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದು ಈ ಹೇಳಿಕೆಗೆ ಮಾಜಿ ಸಚಿವ ರಮನಾಥ್ ರೈ ಕೆಂಡಕಾರಿದ್ದಾರೆ. ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್. ಅವನು ಯೋಗ್ಯತೆ ಇಲ್ಲದ ಮನುಷ್ಯ ಎಂದಿದ್ದಾರೆ.

ರಾಹುಲ್ ಗಾಂಧಿ ದೊಡ್ಡ ಹುಚ್ಚ, ಪಾರ್ಲಿಮೆಂಟ್​ಗೆ ಹೋಗಿ ಅವನ ಕೆನ್ನೆಗೆ ಬಾರಿಸಬೇಕು: ಭರತ್ ಶೆಟ್ಟಿ ಹೇಳಿಕೆಗೆ ವ್ಯಾಪಕ ವಿರೋಧ
ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ
Follow us on

ಮಂಗಳೂರು, ಜುಲೈ.09: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಇತ್ತೀಚೆಗೆ ಹಿಂದೂಗಳ ಕುರಿತು ಆಡಿದ ಮಾತುಗಳು ಭಾರೀ ವಿವಾದ ಸೃಷ್ಟಿಸಿದ್ದು ಮಂಗಳೂರಿನಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ (Dr Y Bharath Shetty) ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಭರತ್ ಶೆಟ್ಟಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ರಮನಾಥ್ ರೈ (Ramanath Rai) ಕೆಂಡಕಾರಿದ್ದಾರೆ.

ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಭರತ್ ಶೆಟ್ಟಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಭರತ್ ಶೆಟ್ಟಿ ಹೇಳಿಕೆಗೆ ಮಾಜಿ ಸಚಿವ ರಮನಾಥ್ ರೈ ಕಿಡಿಕಾರಿದ್ದಾರೆ. ಬಿಜೆಪಿಯ ಶಾಸಕರು ರಾಹುಲ್ ಗಾಂಧಿ ಮಾತನಾಡಿರೋದನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್. ಅವನು ಯೋಗ್ಯತೆ ಇಲ್ಲದ ಮನುಷ್ಯ. ಅವನು ರಾಹುಲ್ ಗಾಂಧಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ರಾಹುಲ್ ಗಾಂಧಿ‌ ಅವರಿಗೆ ಕಪಾಳಕ್ಕೆ ಹೊಡಿಬೇಕು ಎಂದು ಹೇಳಿದ್ದಾನೆ. ಅವನು ಮೊದಲು ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಮಾಡಲಿ. ತಾಕತ್ತು ಇದ್ರೆ ಅವ ಗಂಡು ಮಗ ಆಗಿದ್ರೆ ಕಾರ್ಯಕರ್ತನ ಮೇಲೆ ಕೈ ಹಾಕಲಿ. ಆಮೇಲೆ ಜಿಲ್ಲೆಯಲ್ಲಿ ಏನು ಆಗುತ್ತೆ ಎಂದು ನಾನು ನೋಡ್ತೇನೆ. ಬೆಳ್ತಂಗಡಿ ಶಾಸಕ‌ ಅಧಿಕಾರಿಗಳ ಮೇಲೆ ಕೈ ಮಾಡಲು ಹೋಗ್ತಾನೆ. ಭರತ್ ಶೆಟ್ಟಿ ವಿರೋಧ ಪಕ್ಷದ ನಾಯಕನಿಗೆ ಕಪಾಲಕ್ಕೆ ಹೊಡಿಬೇಕು ಅಂತಾನೆ. ಅವನ ಮೇಲೆ ಸುಮೋಟೊ ಕೇಸ್ ಹಾಕಬೇಕು. ಈ ಮಾತುಗಳನ್ನು ನಾವು ಸಹಿಸಲು ಸಾಧ್ಯವಿಲ್ಲ. ನಾವು ಸಣ್ಣಪುಟ್ಟ ಮಾತನಾಡಿದ್ರೆ ದೊಡ್ಡ ರಂಪಾಟ ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದದಾರೆ.

ಭರತ್ ಶೆಟ್ಟಿ ಹೇಳಿದ್ದೇನು?

ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದರು. ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. ಆತ ದೊಡ್ಡ ಹುಚ್ಚ. ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಭರತ್ ಶೆಟ್ಟಿ ಕಿಡಿಕಾರಿದ್ದರು.

ಇದನ್ನೂ ಓದಿ: ಹಿಂದೂಗಳ ಬಗ್ಗೆ ಹೇಳಿಕೆ; ರಾಹುಲ್ ಗಾಂಧಿಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಬೆಂಬಲ

ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅವನು ಅಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಪೇಜಾವರ ಸ್ವಾಮೀಜಿ ಹೇಳಿಕೆ ಕೊಟ್ಟಿದನ್ನು ವಿರೋಧಿಸಿ ಸ್ಥಳೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ಧರ್ಮವನ್ನು ಕಾಪಾಡೋದು, ಮಠ-ಮಂದಿರ ರಕ್ಷಣೆ ನಮ್ಮ ಕರ್ತವ್ಯ. ಹಿಂದೂ ಮತ್ತು ಹಿಂದುತ್ವ ಬೇರೆ ಎಂಬ ಥಿಯರಿ ಹೇಳೋದಕ್ಕೆ ಇವರು ಶುರು ಮಾಡಿದ್ದಾರೆ. ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. 99 ಸೀಟು ಹಿಡಿದುಕೊಂಡು ಏನೋ ಸಾಧನೆ ಮಾಡಿದಾಗೆ ಇವನು ಮಾತನಾಡುತ್ತಿದ್ದಾನೆ ಎಂದು ಪ್ರತಿಭಟನಾ ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ ಏಕವಚನದಲ್ಲೇ ರಾಹುಲ್ ಗಾಂಧಿಯವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು. ಎಲ್ಲಿ ಶಸ್ತ್ರ ತೆಗೆಯಬೇಕೊ ಅಲ್ಲಿ ತೆಗೆಯುತೇವೆ. ಶಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಪಾರ್ಲಿಮೆಂಟ್ ಗೆ ಹೋಗಿ ಅವನ ಕೆನ್ನೆಗೆ ಕೊಟ್ಟರೆ ಅವನು‌ ಸರಿಯಾಗಬಹುದು. ಅವ ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾನೆ. ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾನೆ. ಆತ ದೊಡ್ಡ ಹುಚ್ಚ. ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ಧಹಿಸುವ ನಿರ್ಧಾರ ಮಾಡಿದ್ದರು. ಆದರೆ ರಾಹುಲ್ ಗಾಂಧಿ ಪ್ರತಿಕೃತಿ ಧಹಿಸಬೇಡಿ ಎಂದು ಪೊಲೀಸರು ಹೇಳಿದ್ದಾರೆ. ಆ ರೀತಿ ಆದರೆ ನಮ್ಮ ವರ್ಗಾವಣೆ ಆಗುತ್ತೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರು ಸಹ ನಮ್ಮ ಜೊತೆ ಪ್ರತಿಭಟನೆಗೆ ಬರಬಹುದು ಎಂದು ಭರತ್ ಶೆಟ್ಟಿ ವಾಗ್ದಾಳಿ ನಡೆಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:16 pm, Tue, 9 July 24