ಪ್ಲೋಗ್ ಅಂಡ್ ವಾಕ್ ಅಭಿಯಾನ: ಕಾರಿಂಜೇಶ್ವರ ದೇವಸ್ಥಾನದ ಆವರಣ ಶುಚಿಗೊಳಿಸಿದ ಎಸ್ಎಫ್ಡಿ
ಪ್ರಕೃತಿಯನ್ನು ಉಳಿಸಲು ಹಾಗೂ ವ್ಯಕ್ತಿತ್ವ ವಿಕಾಸನಗೊಳಿಸಲು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ (SFD) ಮಂಗಳೂರು ವಿಭಾಗದ ವತಿಯಿಂದ ಪ್ಲೋಗ್ ಅಂಡ್ ವಾಕ್ ಅಭಿಯಾನವು ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು. ವಿವಿಧ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿ ದೇವಾಲಯದ ಆವರಣವನ್ನು ಶುಚಿಗೊಳಿಸಿದರು.
ಬಂಟ್ವಾಳ, ನ.19: ಪ್ರಕೃತಿಯನ್ನು ಉಳಿಸಲು ಹಾಗೂ ವ್ಯಕ್ತಿತ್ವ ವಿಕಾಸನಗೊಳಿಸಲು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ (SFD) ಮಂಗಳೂರು ವಿಭಾಗದ ವತಿಯಿಂದ ಪ್ಲೋಗ್ ಅಂಡ್ ವಾಕ್ ಅಭಿಯಾನವು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು. ವಿವಿಧ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿ ದೇವಾಲಯದ ಆವರಣವನ್ನು ಶುಚಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಒಟ್ಟು 32 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸಿದರು. ಅಭಿಯಾನವನ್ನು ಬೆಳಗ್ಗೆ ಭಗವಂತ ಶಿವನಿಗೆ ಪೂಜೆಯನ್ನು ಸಲ್ಲಿಸುವ ಮುಖಾಂತರ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅದರಂತೆ ವಿದ್ಯಾರ್ಥಿಗಳು ದೇವಸ್ಥಾನದ ಆವರಣದಲ್ಲಿದ್ದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.
ಇದನ್ನೂ ಓದಿ: ನ್ಯಾಯಾಂಗ ಸೇವೆಗಳ ಮುಖ್ಯ ಪರೀಕ್ಷೆ: ತುಂಬು ಗರ್ಭಿಣಿಗೆ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ
ಈ ಅಭಿಯಾನವು ಕೇವಲ ಸ್ಥಳವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೆ ಪರಿಸರದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವುದು ಕೂಡ ಇದರ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿ ಸ್ವಯಂಸೇವಕರು ಕಸದ ವಿಲೇವಾರಿಯ ಅಗತ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟರು.
ಈ ಅಭಿಯಾನದ ಯಶಸ್ವಿಗೆ ನೇರವಾಗಿ ಕಾರಣಿಕರ್ತರಾದ ದೇವಾಲಯದ ಆಡಳಿತ ಸಮಿತಿಯ ಚಂದ್ರಶೇಖರ್ ಶೆಟ್ಟಿ ಮತ್ತು ಪ್ರವೀಣ್ ಪೂಜಾರಿಯವರು ಸಹ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು. ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ನ ಪ್ರಮುಖರಾದ ನಿಶಾನ್ ಆಳ್ವ ಕಾವೂರು, ನಿಶ್ಚಿತ್ ಬಂಟ್ವಾಳ ಹಾಗೂ ಕ್ಯಾತ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Sun, 19 November 23