ತಾಕತ್ತಿದ್ರೆ ನನ್ನನ್ನು ಗಡಿಪಾರು ಮಾಡಲಿ: ಮಂಗಳೂರು ಜಿಲ್ಲಾಡಳಿತಕ್ಕೆ ವಜ್ರದೇಹಿ ಸ್ವಾಮೀಜಿ ಆಗ್ರಹ
ಮುಸ್ಲಿಂ ಸಮುದಾಯದ ಸ್ಫೀಕರ್ ಯುಟಿ ಖಾದರ್ ಎದುರು ಬಿಜೆಪಿ ದೊಡ್ಡ ದೊಡ್ಡ ನಾಯಕರು ನಮಸ್ಕರಿಸುವಂತೆ ಕಾಂಗ್ರೆಸ್ ಮಾಡಿದೆ ಎನ್ನುವ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಜಮಿರ್ ಅಹಮ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಈ ಬಗ್ಗೆ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಮೊದಲು ಜಮೀರ್ ಅಹ್ಮದ್ ಖಾನ್ ನನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರು, (ನವೆಂಬರ್ 20): ಮಂಗಳೂರಿನ ಬಜರಂಗದಳದ ಕೆಲ ಕಾರ್ಯಕರ್ತರ ಗಡಿಪಾರು ಆದೇಶಕ್ಕೆ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ (Vajradehi Rajashekarananda Swamiji) ಕೆಂಡಾಮಂಡಲರಾಗಿದ್ದಾರೆ. ಮಂಗಳೂರಿನಲ್ಲಿ ಸುಳ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ತಾಕತ್ತಿದ್ರೆ ಜಮೀರ್ ಅಹ್ಮದ್ ಖಾನ್ ನನ್ನ ಗಡಿಪಾರು ಮಾಡಿ. ಇಲ್ಲೆಲ್ಲೂ ಅಲ್ಲ, ಜಮೀರ್ ನನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ಇದು ನಿಮಗೆ ತಾಕತ್ತಿದ್ಯಾ ಎಸ್ಪಿ ಸಾಹೇಬ್ರೆ? ಎಂದು ಪೊಲೀಸ್ ಇಲಾಖೆಗೆ ಸವಾಲ್ ಹಾಕಿದರು.
ಹಿಂದೂ ಕಾರ್ಯಕರ್ತರ ಯಾವುದಕ್ಕೋಸ್ಕರ ಕೇಸ್ ಹಾಕೊಂಡ್ರು ? ಅವಲೋಕನ ಮಾಡಿ. ಗೋವುಗಳನ್ನ ರಕ್ಷಣೆ ಮಾಡಿ 10-20 ಕೇಸ್ ಬಿದ್ದಿವೆ. ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನ ಗಡಿಪಾರು ಮಾಡಲಿ. ಸರಕಾರಕ್ಕೆ ನಮ್ಮ ಮಕ್ಕಳನ್ನ ಕಂಡರೆ ಭಯ. ಹಿಂದೂ ಕಾರ್ಯಕರ್ತ ಲತೇಶ್ ನನ್ನ ಗಡಿಪಾರು ಮಾಡಬಹುದು. ಲತೇಶ್ ನಂತಹ ಸಾವಿರ ಯುವಕರು ಹುಟ್ಟಿದ್ರೆ ಮುಂದಿನ ದಿನಗಳು ನಿಮಗೆ ಕಷ್ಟವಾಗಬಹುದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮಂಗಳೂರು: ಕರಾವಳಿಯ ಹಿಂದೂ ಕಾರ್ಯಕರ್ತರ ವಿರುದ್ಧ ಮತ್ತೆ ಗಡಿಪಾರು ಅಸ್ತ್ರ
ಭಜರಂಗದಳ ಕಾರ್ಯಕರ್ತರಿಗೆ ನೋಟಿಸ್
ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಸಂಬಂಧ ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಕೇಳಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಐವರು ಭಜರಂಗದಳ (Bajrang Dal) ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದೆ.
ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಭಜರಂಗದಳ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಅವರಿಗೆ ನೋಟಿ ಜಾರಿ ಮಾಡಿದ ಪೊಲೀಸರು, ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಕಾರಣ ಕೇಳಿ ನವೆಂಬರ್ 22 ರಂದು ಪುತ್ತೂರು ಸಹಾಯಕ ಆಯುಕ್ತರೆದುರು ಹಾಜರಾಗಲು ಸೂಚನೆ ನೀಡಿದ್ದಾರೆ.
ಭಜರಂಗದಳದಲ್ಲಿ ದಿನೇಶ್, ಪ್ರಜ್ವಲ್ ಅವರು ಪುತ್ತೂರು ತಾಲೂಕು ಜವಾಬ್ದಾರಿ ಹೊಂದಿದ್ದು, ಲತೇಶ್ ಗುಂಡ್ಯ ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದಾರೆ. ಉಳಿದ ಇಬ್ಬರು ಕಾರ್ಯಕರ್ತರಾದ ನಿಶಾಂತ್ ಮತ್ತು ಪ್ರದೀಪ್ ವಿರುದ್ಧವೂ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ