ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಚಿಂತನೆ ಮಾಡಿದ್ದಾರೆ ಎಂದ ಉಮೇಶ್ ಕತ್ತಿ, ಬೊಮ್ಮಾಯಿ ಏನಂದರು?

ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಮಾತನಾಡಿದ ಉಮೇಶ್ ಕತ್ತಿ, ರಾಜ್ಯದಲ್ಲಿ 2.5 ಕೋಟಿ ಇದ್ದ ಜನಸಂಖ್ಯೆ 6.5 ಕೋಟಿ ಆಗಿದೆ. ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಭಾಗ ಮಾಡಬೇಕಿದೆ. ಕರ್ನಾಟಕದಲ್ಲಿ ಎರಡು, ಉತ್ತರಪ್ರದೇಶದಲ್ಲಿ ಐದು ರಾಜ್ಯಗಳು, ಮಹಾರಾಷ್ಟ್ರದಲ್ಲಿ ಹೊಸ ಮೂರು ರಾಜ್ಯಗಳು ಉದಯಿಸಲಿವೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಚಿಂತನೆ ಮಾಡಿದ್ದಾರೆ ಎಂದ ಉಮೇಶ್ ಕತ್ತಿ, ಬೊಮ್ಮಾಯಿ ಏನಂದರು?
ಉಮೇಶ್ ಕತ್ತಿ
Follow us
TV9 Web
| Updated By: ಆಯೇಷಾ ಬಾನು

Updated on:Jun 23, 2022 | 6:45 PM

ಮಂಗಳೂರು: ದೇಶದಲ್ಲಿ 2024ರ ಚುನಾವಣೆ ನಂತರ 50 ರಾಜ್ಯಗಳು ಉದಯವಾಗಲಿವೆ. ಹೊಸ ರಾಜ್ಯಗಳ ರಚನೆ ಬಗ್ಗೆ ಮೋದಿ(Narendra Modi) ಚಿಂತನೆ ನಡೆಸಿದ್ದಾರೆ. ಸಿದ್ದತೆಯೂ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಸಚಿವ ಉಮೇಶ್ ಕತ್ತಿ(Umesh Katti) ಮತ್ತೆ ಉಚ್ಚರಿಸಿದ್ದಾರೆ. ಈ ಹಿಂದೆ ಹಲವು ತಿಂಗಳ ಹಿಂದೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ವಿಭಜನೆಯಾಗಬೇಕು ಎಂದು ಉಮೇಶ್ ಕತ್ತಿ ಒತ್ತಾಯ ಮಾಡಿದ್ದರು. ಅಲ್ಲದೆ ನಿನ್ನೆ ಬೆಳಗಾವಿಯಲ್ಲೂ 50 ರಾಜ್ಯಗಳು ಉದಯವಾಗಲಿವೆ ಎಂದು ಹೊಸ ಬಾಂಬ್ ಸಿಡಿಸಿದ್ದರು. ಈಗ ಮತ್ತೆ ಮಂಗಳೂರಿನಲ್ಲಿ ಇದೇ ಸ್ವರ ರಿಪೀಟ್ ಆಗಿದೆ.

ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಮಾತನಾಡಿದ ಉಮೇಶ್ ಕತ್ತಿ, ರಾಜ್ಯದಲ್ಲಿ 2.5 ಕೋಟಿ ಇದ್ದ ಜನಸಂಖ್ಯೆ 6.5 ಕೋಟಿ ಆಗಿದೆ. ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಭಾಗ ಮಾಡಬೇಕಿದೆ. ಕರ್ನಾಟಕದಲ್ಲಿ ಎರಡು, ಉತ್ತರಪ್ರದೇಶದಲ್ಲಿ ಐದು ರಾಜ್ಯಗಳು, ಮಹಾರಾಷ್ಟ್ರದಲ್ಲಿ ಹೊಸ ಮೂರು ರಾಜ್ಯಗಳು ಉದಯಿಸಲಿವೆ. ಇಡೀ ದೇಶದಲ್ಲಿ ಒಟ್ಟು 50 ರಾಜ್ಯಗಳು ನಿರ್ಮಾಣವಾಗಲಿದೆ. ಈ ಬಗ್ಗೆ ಪ್ರಧಾನಿಗಳು ಚಿಂತನೆ ನಡೆಸಿದ್ದಾರೆಂಬುದು ನನ್ನ ಅನಿಸಿಕೆ. ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ. ಆ ಭಾಗಕ್ಕೆ ಅನ್ಯಾಯವಾದರೆ ಮುಂದೆಯೂ ಧ್ವನಿ ಎತ್ತುತ್ತೇನೆ. ಅಖಂಡ ಕರ್ನಾಟಕದಲ್ಲಿ ತೊಂದರೆ ಆಗಬಾರದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನ ಎಚ್ಚರಿಸ್ತೇನೆ. ಅದು ಬಿಟ್ಟರೆ ನಾವು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಯೋಚಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ, ಅಭಿವೃದ್ಧಿಯೂ ಆಗಲಿ ಎಂದರು. ಇದನ್ನೂ ಓದಿ: ರಾಜ್ಯದ ಡಯಾಲಿಸಿಸ್ ಘಟಕ ಸಿಬ್ಬಂದಿ ಬೆಂಗಳೂರಿನಲ್ಲಿ ಪ್ರತಿಭಟನೆ; ಜಿಲ್ಲಾಸ್ಪತ್ರೆಗಳ ಮುಂದೆ ಡಯಾಲಿಸಿಸ್ ರೋಗಿಗಳ ಪರದಾಟ, ಸರ್ಕಾರಕ್ಕೆ ಕಾಣುತಿಲ್ವ ಗೋಳು?

ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಇನ್ನು ದೆಹಲಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಸಚಿವ ಕತ್ತಿ ಹೇಳಿಕೆ ನೀಡಿದ್ದಾರೆ. ಉಮೇಶ್ ಕತ್ತಿ ಹೀಗೆ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ನೀವೂ ಈ ಬಗ್ಗೆ ಅವರನ್ನೇ ಕೇಳಬೇಕು. ಆದ್ರೆ ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದಿದ್ದಾರೆ. ದೆಹಲಿ ತಲುಪಿದ ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರಪತಿ ಅಭ್ಯರ್ಥಿಗೆ ಸೂಚಕರಾಗಿ ಸಹಿ ಹಾಕಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ತೆರಳಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಪರ ಸೂಚಕರಾಗಿ ಸಹಿ ಹಾಕಲಿದ್ದಾರೆ.

ಉಮೇಶ್ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಹಾಸನದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್, ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಂಡಿತಾ ಅವರು ಇಂತಹ ಹೇಳಿಕೆಯನ್ನು ಕೊಡಬಾರದು. ಜವಾಬ್ದಾರಿ ಯುತ ಸ್ಥಾನದಲ್ಲಿರೊ ಸಚಿವರು ಈ ರೀತಿ ಪ್ರತ್ಯೇಕ ರಾಜ್ಯ ಇನ್ನೊಂದು ಮತ್ತೊಂದು ಹಗುರವಾಗಿ ಮಾತನಾಡಬಾರದು. ಅವರ ಹೇಳಿಕೆಯನ್ನು ಆರೂವರೆ ಕೋಟಿ ಜನರ ಪರವಾಗಿ ಖಂಡಿಸುತ್ತೇನೆ. ಇದು ನಾವು ನೀವು ಮಾಡಿರೋದಲ್ಲ ಸ್ವಾಮಿ. ನಾಡಿನ ಹಿರಿಯರು ಸಾಹಿತಿಗಳು ಬಹಳಷ್ಟು ಭಾವನಾತ್ಮಕವಾಗಿ ಆರು ರಾಜ್ಯವಾಗಿ ಹರಿದು ಹಂಚಿಹೋಗಿದ್ದನ್ನ ಒಂದುಗೂಡಿಸಿ ಕರ್ನಾಟಕ ನಿರ್ಮಾಣ ಮಾಡಿರೋದು. ಇದರ ಮಹತ್ವ ಇದರ ಶಕ್ತಿ ಅರಿಯಬೇಕು. ಅವರು ಮೊದಲಿನಿಂದಲೂ ಇಂತಹ ಹೇಳಿಕೆ ಕೊಡುತ್ತಾರೆ. ಈ ರೀತಿ ಹೇಳಿಕೆ ಕೊಟ್ಟಿರೋದಕ್ಕೆ ಸಂಪೂರ್ಣವಾಗಿ ಖಂಡಿಸುತ್ತೇನೆ. ಮೋದಿಯವರಲ್ಲಿ ಇಂತಹ ಚಿಂತನೆ ಇರೋದಿಲ್ಲ. ಅವರದೇನಿದ್ದರೂ ಸಮಾಜ ಉತ್ತಮ ಗೊಳಿಸೋ ಆಲೋಚನೆ. ಕನ್ನಡನಾಡಿನ ವಿಭಜನೆ ಪ್ರತ್ಯೇಕ ಅನ್ಮೋ ಪ್ರಶ್ನೆ ಇಲ್ಲ. ಅವರು ದಯವಿಟ್ಟು ಅವರ ಮಾತಿನಲ್ಲಿ ಪ್ರದಾನಿ ಹೆಸರು ತರೋ ಪ್ರಯತ್ನ ಮಾಡೋದು ಬೇಡಾ ಎಂದು ಡಾ.ಅಶ್ವಥ್ ನಾರಾಯಣ್ ಅಸಮಾಧಾನ ಹೊರ ಹಾಕಿದ್ದಾರೆ.

Published On - 5:11 pm, Thu, 23 June 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ