ಮಂಗಳೂರಿನಲ್ಲಿ ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್! ಆಸ್ಪತ್ರೆ ಐಸಿಯುನಲ್ಲಿ ಆರೋಪಿಗಳಿಗೆ ಚಿಕಿತ್ಸೆ

| Updated By: sandhya thejappa

Updated on: Jun 11, 2022 | 11:50 AM

ಮಂಗಳೂರು ನಗರದ ಹೊರವಲಯದ ಮುಲ್ಕಿ ಬಳಿ ಬಂಧಿಸಲು ತೆರಳಿದ್ದ ಸಿಸಿಬಿ ಅಧಿಕಾರಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳಿಗೆ ಪೊಲೀಸರು ಗುಂಡೇಟು ಹಾರಿಸಿದ್ದಾರೆ.

ಮಂಗಳೂರಿನಲ್ಲಿ ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್! ಆಸ್ಪತ್ರೆ ಐಸಿಯುನಲ್ಲಿ ಆರೋಪಿಗಳಿಗೆ ಚಿಕಿತ್ಸೆ
ಹಲ್ಲೆಗೊಳಗಾದ ಪೊಲೀಸರು
Follow us on

ಮಂಗಳೂರು: ರೌಡಿಶೀಟರ್ ರಾಜಾ ಕೊಲೆ (Murder) ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ (Firing) ಮಾಡಿದ್ದಾರೆ. ಮಂಗಳೂರು ನಗರದ ಹೊರವಲಯದ ಮುಲ್ಕಿ ಬಳಿ ಬಂಧಿಸಲು ತೆರಳಿದ್ದ ಸಿಸಿಬಿ ಅಧಿಕಾರಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳಿಗೆ ಪೊಲೀಸರು ಗುಂಡೇಟು ಹಾರಿಸಿದ್ದಾರೆ. ಮೊದಲು ಗಾಳಿಯಲ್ಲಿ 3 ಸುತ್ತು ಗುಂಡುಹಾರಿಸಿ ಪೊಲೀಸರು ಎಚ್ಚರಿಕೆ ನೀಡಿದ್ದರು. ನಂತರ ಆತ್ಮರಕ್ಷಣೆಗಾಗಿ ಸಿಸಿಬಿ ಇನ್ಸ್​ಪೆಕ್ಟರ್​​  ಮಹೇಶ್ ಕುಮಾರ್, ಮನೋಜ್ ಅಲಿಯಾಸ್ ಬಿಂದಾಸ್ ಮನೋಜ್, ಅರ್ಜುನ್ ಮೂಡುಶೆಡ್ಡೆ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸದ್ಯ ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಫೈರಿಂಗ್ ನಡೆದ ಸ್ಥಳ, ಆಸ್ಪತ್ರೆಗೆ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದರು. ಜೊತೆಗೆ ಗಾಯಗೊಂಡಿರುವ ಸಿಬ್ಬಂದಿ ಆರೋಗ್ಯವನ್ನು ವಿಚಾರಿಸಿದರು. ಇನ್ನು ಗುಂಡೇಟು ತಿಂದು ಆಸ್ಪತ್ರೆ ಐಸಿಯುನಲ್ಲಿರುವ ಆರೋಪಿಗಳ ವಾರ್ಡ್​ಗೂ ಭೇಟಿ ನೀಡಿದರು.

ಟಿವಿ9 ಜೊತೆ ಮಾತನಾಡಿದ್ದ ಮಂಗಳೂರು ನಗರ ಕಮಿಷನರ್ ಶಶಿಕುಮಾರ್, ಜೂನ್ 6 ರಂದು ಬೈಕಂಪಾಡಿಯಲ್ಲಿ ರೌಡಿಶೀಟರ್ ರಾಜನ ಹತ್ಯೆಯ ಅರೋಪಿಗಳ ಬಂಧನದ ಕಾರ್ಯಚರಣೆ ವೇಳೆ ಘಟನೆ ನಡೆದಿದೆ. ಇಬ್ಬರು ಅರೋಪಿಗಳು ಮುಲ್ಕಿ ಹೊರವಲಯದ ಲೇಔಟ್​ನ ಮನೆಯೊಂದರಲ್ಲಿ ವಾಸ ಇರುವುದರ ಬಗ್ಗೆ ಮಾಹಿತಿ ತಿಳಿದಿದೆ. ರಾತ್ರಿ ಸಿಸಿಬಿ ಇನ್ಸ್​ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಅರೋಪಿಗಳು ಪೋಲಿಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ದಾಳಿಯಲ್ಲಿ ಮೂವರು ಪೋಲಿಸರಿಗೆ ಗಾಯವಾಗಿದೆ. ಅರೋಪಿಗಳನ್ನು ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ
ಪಿಎಸ್ಐ ಹಗರಣದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ; ಪರೀಕ್ಷೆಯ ಒಂದೊಂದು ವಿಧಾನಕ್ಕೆ ಒಂದೊಂದು ರೇಟ್ ಫಿಕ್ಸ್!
NEET PG 2022: ನೀಟ್ ಪರೀಕ್ಷೆ ಮುಂದೂಡಲು ಆರೋಗ್ಯ ಸಚಿವರಿಗೆ ಐಎಂಎ ಮನವಿ
Sarkaru Vaari Paata Review: ಒಂದೊಳ್ಳೆಯ ಕಥೆಗೆ ಬೇಕಿತ್ತು ಇನ್ನಷ್ಟು ಒಳ್ಳೆಯ ಟ್ರೀಟ್​ಮೆಂಟ್
ಬೆಂಗಳೂರಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ! ಕರ್ನಾಟಕದಲ್ಲಿ ಇಂದಿನಿಂದ 4 ದಿನ ಮಳೆ ಮುಂದುವರೆಯುವ ಸಾಧ್ಯತೆ

ಇದನ್ನೂ ಓದಿ: ಹಿರಿಯ ನಾಗರಿಕರ ಆಗ್ರಹದ ಮೇರೆಗೆ ಪೊಲೀಸರು ಪಾಪ್​ಕಾರ್ನ್ ಮಾರುತ್ತಿದ್ದ ಯುವಕನನ್ನು ಸ್ಟೇಶನ್​ಗೆ ಕರೆದ್ಯೊಯ್ದರು!

ಅಂತಾರಾಷ್ಟ್ರೀಯ ದರೋಡೆಕೋರರ ಗ್ಯಾಂಗ್ ಬಂಧನ:
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರೋಡೆಕೋರರ ಗ್ಯಾಂಗ್​ನ ಪೊಲೀಸರು ಬಂಧಿಸಿದ್ದಾರೆ. 9 ಆರೋಪಿಗಳು ಬಾಂಗ್ಲಾದಿಂದ ಬಂದು ಕಳ್ಳತನ, ದರೋಡೆ ಮಾಡುತ್ತಿದ್ದರು. ಎಟಿಎಂ ಕಳ್ಳತನ ಪ್ರಕರಣದ​ ತನಿಖೆ ವೇಳೆ ಆರೋಪಿಗಳ ಕೃತ್ಯ ಬಹಿರಂಗವಾಗಿದೆ. ಆರೋಪಿಗಳು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡಿಎಲ್​, ಆಯುಷ್ ಕಾರ್ಡ್ ತಯಾರಿಸುತ್ತಿದ್ದರು. ಕಳ್ಳತನ, ದರೋಡೆ ಮಾಡಿದ ಹಣವನ್ನು ಏಜೆಂಟ್​ಗಳ ಮೂಲಕ ಬಾಂಗ್ಲಾದೇಶಕ್ಕೆ ರವಾನೆ ಮಾಡುತ್ತಿದ್ದರು.

ಸ್ಫೋಟಕ ವಸ್ತು ಮಾರುತ್ತಿದ್ದ ಆರೋಪಿಗಳು ಸೆರೆ:
ಸ್ಫೋಟಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೋಲಾರ ಜಿಲ್ಲೆ ರಾಬರ್ಟ್​​ಸನ್ ವ್ಯಾಪ್ತಿಯ ಫೋಟ್ಟೆಪಲ್ಲಿ ಸಮೀಪ ಬಂಧಿಸಲಾಗಿದೆ. ಬಾಲಾಜಿ ಬಿನ್ ಮೋಹನ್, ಸುರೇಶ್ ಬಿನ್ ಚಿನ್ನಸ್ವಾಮಿ ಬಂಧಿತರು. ಆರೋಪಿಗಳು 7 ಕೆಜಿ ತೂಕದ ಸ್ಫೋಟಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ‌ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 am, Sat, 11 June 22