ದಕ್ಷಿಣ ಕನ್ನಡ: ಭಾರತ ಸರ್ಕಾರದಿಂದ ಅಮಾನ್ಯಗೊಂಡ 1,92,50,000 ರೂಪಾಯಿ ಮೌಲ್ಯದ ಹಳೆ ನೋಟು ಪತ್ತೆಯಾಗಿದೆ. ಮಂಗಳೂರಿನ ಲಾಲ್ಬಾಗ್ ಬಳಿ ಬರ್ಜೆ ಪೊಲೀಸರು ಇನೋವಾ ಕಾರು ತಪಾಸಣೆ ನಡೆಸಿದ್ದು, ಹಳೆ ನೋಟು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹಳೆ ನೋಟು ಸಾಗಾಟ ಮಾಡುತ್ತಿದ್ದ ಕಣ್ಣೂರು ನಿವಾಸಿ ಜುಬೈರ್ ಹಮ್ಮಬ್ಬ, ಪಡೀಲ್ ನಿವಾಸಿ ದೀಪಕ್ ಕುಮಾರ್, ಬಜ್ಪೆ ನಿವಾಸಿ ಅಬ್ದುಲ್ ನಾಸಿರ್ ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ಅಕ್ರಮ ಲಾಭಕ್ಕಾಗಿ ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಬರ್ಜೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಂಗಳೂರು: ವಿಲಾಸಿ ಜೀವನಕ್ಕಾಗಿ ಬೈಕ್ ಕಳ್ಳತನ ಮಾಡುತಿದ್ದ ಆರೋಪಿಗಳ ಬಂಧನ
ವಿಲಾಸಿ ಜೀವನಕ್ಕಾಗಿ ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತಿದ್ದ ರೋಹಿತ್ ಮತ್ತು ರೆವಂತ್ ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ನಿರ್ಜನ ಪ್ರದೇಶದ ಏರಿಯಾಗಳಿಗೆ ಎಂಟ್ರಿ ಕೊಟ್ಟು ಇವರು ತಮ್ಮ ಕೈಚಳಕ ತೋರುತ್ತೊದ್ದರು. ಕಾಮಾಕ್ಷಿಪಾಳ್ಯ, ಕೆಂಗೇರಿ, ಕೆಆರ್ ಪುರಂ, ಮಾದನಾಯಕನಹಳ್ಳಿ ಸೇರಿದಂತೆ ಹಲವು ಕಡೆ ಮನೆಯ ಮುಂದೆ ನಿಲ್ಲಿಸಿದ್ದ ಬೈ್ಗಳನ್ನು ಆರೋಪಿಗಳು ಕಳ್ಳತನ ಮಾಡುತಿದ್ದರು. ಬಂಧಿತರಿಂದ 5.42 ಲಕ್ಷ ರೂಪಾಯಿ ಮೌಲ್ಯದ ವಿವಿಧ 11 ಬೈಕ್ ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದ:
ಮಾವೋವಾದಿಗಳಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ; ಸಿಆರ್ಪಿಎಫ್ ಕಾನ್ಸ್ಟೆಬಲ್ ಸೇರಿ ಮೂವರ ಬಂಧನ
ನಿಮ್ಮ ಬಳಿ ಇರುವ 1 ರೂಪಾಯಿಯ ಹಳೆ ನೋಟು ಸಹ ಲಕ್ಷ ಲಕ್ಷ ಗಳಿಸಿಕೊಡಬಹುದು; ಖರ್ಚು ಮಾಡೋ ಮುಂಚೆ ಈ ಲೇಖನ ಓದಿ