ಮಂಗಳೂರು: ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಶ್ರೀ ರಾಮ ಸೇನೆ ಆಚರಣೆಗೆ ವಿರೋಧ ವ್ಯಕ್ತಪಡಿಸಿದೆ. ಪಾರ್ಕ್, ಪಾರ್ಲರ್, ಹೋಟೆಲ್ ಮೇಲೆ ನಾಳೆ ಕಣ್ಣಿಡುವುದಾಗಿ ಮಂಗಳೂರಿನಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರತಿವರ್ಷ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತ ಬಂದಿದ್ದೇವೆ. ಈ ಬಾರಿಯೂ ಸಹ ಪೊಲೀಸರ ಸಹಕಾರದೊಂದಿಗೆ ರಾಜ್ಯಾದ್ಯಂತ ವಿರೋಧ ಮಾಡುತ್ತೇವೆ. ಪಾರ್ಕ್, ಪಾರ್ಲರ್, ಹೋಟೆಲ್ಗಳಲ್ಲಿ ಗಮನ ಇಡುತ್ತೇವೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ನಡೆಯುವ ಡ್ರಗ್, ಸೆಕ್ಸ್ ಮಾಫಿಯಾವನ್ನು ತಡೆಯುವ ಪ್ರಕ್ರಿಯೆ ಮಾಡುತ್ತೇವೆ. ಎಲ್ಲವನ್ನು ಕಾನೂನು ಬದ್ದವಾಗಿಯೆ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಉಡುಪಿಯ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ಯಾವುದೇ ಪರಿಸ್ಥಿತಿಯಲ್ಲೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಬಿಜೆಪಿಯಲ್ಲಿ ಇರುವವರೇ ಯೋಗ್ಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಹೇಳಿದ್ದಾರೆ. ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿರುವವರು ಸಪೋರ್ಟ್ ಮಾಡುವುದಾಗಿ ಹೇಳಿದ್ದಾರೆ. ಚುನಾವಣೆಗೆ ಬೇಕಾದ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್ಡಿಪಿಐ
ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ನೂರಕ್ಕೆ ನೂರು ನಾನು ಕಾರ್ಕಳದಲ್ಲಿ ಗೆಲ್ಲುತ್ತೇನೆ. ಈ ಹಿಂದೆ ನಾನು ರಾಜಕೀಯದಲ್ಲಿ ಫೈಲ್ ಆಗಿದ್ದೆ. ಡೋಂಗಿ ಹಿಂದುತ್ವಕ್ಕೆ ಸಪೋರ್ಟ್ ಮಾಡ್ತಿದ್ರೆ ಬಕೆಟ್ ಹಿಡಿತಿದ್ರೆ ಇವತ್ತು ಎಲ್ಲೋ ಹೋಗ್ತಿದ್ದೆ. ನನಗೆ ರಾಜಕೀಯ ಮಾಡೋಕೆ ಬರಲ್ಲ. ಅಸಲಿ ಹಿಂದುತ್ವ ಮತ್ತು ನಕಲಿ ಹಿಂದುತ್ವ, ಭ್ರಷ್ಟಾಚಾರ ಹಾಗೂ ಪ್ರಾಮಾಣಿಕತೆ ಈ ವಿಷಯದಲ್ಲಿ ನಾನು ಸ್ಪರ್ಧೆಗೆ ಇಳಿಯುತ್ತಿದ್ದೇನೆ. ನನ್ನ ಮೇಲಿರುವ 109 ಕೇಸ್ ನಲ್ಲಿ ಜಾಸ್ತಿ ಪ್ರಕರಣ ಹಾಕಿದ್ದೆ ಬಿಜೆಪಿ ಸರ್ಕಾರ. ನನಗೆ ಪ್ರವೇಶ ನಿಷೇಧ ಮಾಡಿದ್ರೆ ಕೋರ್ಟ್ ಗೆ ಹೋಗುತ್ತೇನೆ. ಹೊರಗಿದ್ದುಕೊಂಡೆ ಗೆಲ್ಲುವ ವಾತಾವರಣ ಕಾರ್ಕಳದಲ್ಲಿದೆ. ನನ್ನಲ್ಲಿ ಯಾರು ಯಾವುದೇ ಮಾತುಕತೆ ನಡೆಸಿಲ್ಲ. ಜನರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ಕಾರ್ಯಕರ್ತರು, ಜನರೇ ನನ್ನ ಆಸ್ತಿ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:49 pm, Mon, 13 February 23