ಮಂಗಳೂರು: ಗುರುವಾರ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ಈದ್ ಉಲ್ ಫಿತರ್ (ರಂಜಾನ್ ಹಬ್ಬ) ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತಕ್ವಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರ ಕರಾವಳಿ ಭಾಗದ ಮುಸ್ಲಿಮರು ಉಪವಾಸ ವೃತ ಕೈಗೊಳ್ಳಬಹುದಾಗಿದೆ. ಅಲ್ಲದೆ ಶುಕ್ರವಾರದೊಂದಿಗೆ 1 ತಿಂಗಳ ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ (Ramadan Festival 2023) ಉಪವಾಸ ಅಂತ್ಯವಾಗಲಿದ್ದು, ದಕ್ಷಿಣ ಕನ್ನಡ-ಉಡುಪಿ ಸೇರಿದಂತೆ ಕರಾವಳಿ ಭಾಗದ ಮುಸ್ಲಿಮರು ಶನಿವಾರ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ.
ರಂಜಾನ್ ತಿಂಗಳ ಉಪವಾಸ ಕೊನೆಗೊಂಡ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಕೂಡಾ ಒಂದು. ಈ ದಿನದಂದು ಮುಸ್ಲಿಮರು ತಮ್ಮ ಉಪವಾಸ(ರೋಜಾ)ವನ್ನು ಕೊನೆಗೊಳಿಸುತ್ತಾರೆ. ರಂಜಾನ್ ಸಮಯದಲ್ಲಿ ಅವರಿಗೆ ಆರೋಗ್ಯ ಮತ್ತು ಪ್ರತಿರೋಧಕವನ್ನು ನೀಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ, ದಾನ ಮಾಡುತ್ತಾರೆ, ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯುತ್ತಾರೆ.
ಇದನ್ನೂ ಓದಿ: Eid-Ul-Fitr 2023: ನೀವು ಭೇಟಿ ನೀಡಲೇಬೇಕಾದ ಪ್ರಮುಖ ಮಸೀದಿಗಳ ಮಾಹಿತಿ ಇಲ್ಲಿವೆ
ಈದ್-ಉಲ್-ಫಿತಾರ್ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್ನ ಹತ್ತನೇ ತಿಂಗಳಾದ ಶವ್ವಾಲ್ನ ಮೊದಲ ದಿನದಂದು ಅಮಾವಾಸ್ಯೆಯ ದರ್ಶನದ ನಂತರ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ನ ಅನುಗುಣವಾಗಿ ಚಂದ್ರನ ಹಿಜ್ರಿ ತಿಂಗಳ ಆರಂಭವು ಧಾರ್ಮಿಕ ವ್ಯವಸ್ಥೆಗಳು ಅಂದರೆ ಕಾಲನುಕ್ರಮದಲ್ಲಿ ಬದಲಾವಣೆಯು ಅಮವಾಸ್ಯೆಯ ವೀಕ್ಷಣೆಗೆ ಅನುಗುಣವಾಗಿ ಬದಲಾಗುವುದರಿಂದ ಈದ್-ಉಲ್-ಫಿತರ್ ವಿವಿಧ ಪ್ರದೇಶಗಳಲ್ಲಿ ವಿವಿಧ ದಿನಗಳಲ್ಲಿ ಬರುತ್ತದೆ.
ಈ ವರ್ಷ ಈದ್-ಉಲ್-ಫಿತಾರ್ ನ್ನು ಏಪ್ರಿಲ್ 21 ಶುಕ್ರವಾರದಿಂದ ಏಪ್ರಿಲ್ 23 ಭಾನುವಾರದವರೆಗೆ ಆಚರಿಸಲಾಗುತ್ತದೆ ಎಂದು ಹೇಳಲಾದ್ದು, ಚಂದ್ರನ ವೀಕ್ಷಣೆಗೆ ಅನುಗುಣವಾಗಿ ನಿಜವಾದ ದಿನಾಂಕ ಬದಲಾವಣೆಯಾಗಿದೆ.
ಪವಿತ್ರ ಕುರಾರ್ನ್ನು ಪ್ರವಾದಿ ಮುಹಮ್ಮದ್ ಅವರಿಗೆ ರಂಜಾನ್ ತಿಂಗಳಲ್ಲಿ ಬಹಿರಂಗಪಡಿಸಲಾಯಿತು ಎಂದು ನಂಬಲಾಗಿದೆ. ಆ ಕಾರಣದಿಂದ ಮುಸ್ಲಿಮರು ಈ ತಿಂಗಳನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಮತ್ತು ಈ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ಹಿಡಿಯುತ್ತಾರೆ. ಅಲ್ಲಾಹನಿಗೆ ಪ್ರಾರ್ಥಿಸಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುತ್ತಾರೆ.
ಈದ್-ಉಲ್-ಫಿತಾರ್ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಮತ್ತು ಅವರು ರುಚಿಕರವಾದ ಊಟದೊಂದಿಗೆ ಉಪವಾಸವನ್ನು ಮುಗಿಸುತ್ತಾರೆ. ಈದ್-ಉಲ್-ಫಿತಾರ್ ದಿನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಹಬ್ಬವನ್ನು ಆಚರಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:33 pm, Thu, 20 April 23