ಮಂಗಳೂರು: ರಾಜಸ್ತಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ (Murder) ನಾಚಿಗೇಡಿನ ಸಂಗತಿ. ಇದೊಂದು ವ್ಯವಸ್ಥಿತ ಸಂಚು. ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷನ ಹತ್ಯೆ ನಡೆದಿತ್ತು ಎಂದು ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದರು. ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಗನ ಹತ್ಯೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಹರ್ಷನ ಕತ್ತು ಸಿಗಿದು ಹತ್ಯೆ ಮಾಡಿ ಅದರ ವಿಡಿಯೋ ತಂಗಿಗೆ ಕಳುಹಿಸಲಾಗಿತ್ತು. ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ. ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯ ಕಾರಣದಿಂದ ಈ ಘಟನೆ ನಡೆದಿದೆ. ಕಾಂಗ್ರೆಸ್ ಈಗ ಮೌನವಾಗಿರೋದ್ರ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು. ಇಂಥಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಅನ್ನೋದು ಮುಖ್ಯ. ಈ ಘಟನೆ ದೇಶದಲ್ಲಿ ನಡೆಯಲು ಕಾರಣ ತುಷ್ಟೀಕರಣದ ರಾಜನೀತಿ. ಇಂಥಹ ಘಟನೆ ಖಂಡಿಸುತ್ತೇನೆ ಇದರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಹೇಳಿದರು.
ಉತ್ತರ ಪ್ರದೇಶದ ಯೋಗಿ ಮಾದರಿ ನಿರ್ಧಾರಗಳ ಅವಶ್ಯಕತೆ ಇದೆ. ತಕ್ಷಣ ಕಠಿಣ ಕ್ರಮ ಆಗಬೇಕು, ಕೇಂದ್ರ ಸರ್ಕಾರ ಎಸ್ಐಎ ಕಳುಹಿಸಿದೆ. ಇದೊಂದು ಮಾನವೀಯತೆಗೆ ಸವಾಲಾಗಿರುವ ಪ್ರಕರಣ. ನಿರಂತರ ಗಲಭೆ ಸೃಷ್ಟಿಸಲು ಹತ್ಯೆ ಮಾಡಿ ಸಮಾಜ ಒಡೆಯಲಾಗುತ್ತಿದೆ. ಜಿಹಾದಿ ಹೆಸರಿನಲ್ಲಿ ಇದನ್ನ ಮಾಡಲಾಗುತ್ತಿದ್ದು, ವಿಶ್ವಾಸ ಕಡಿಮೆ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳು ಹೊರಗಡೆ ಬರ್ತಿದೆ. ದೇಶದಲ್ಲಿ ಅತಂತ್ರ ಸ್ಥಿತಿ ತರಬೇಕು. ಜಿಹಾದಿ ಮಾನಸಿಕತೆ ಬೆಳೆಸಲು ಯತ್ನ ನಡೀತಾ ಇದೆ. ನರೇಂದ್ರ ಮೋದಿ ಸರ್ಕಾರ ಇದನ್ನ ಸಹಿಸಲ್ಲ, ತಡೆ ಹಾಕುತ್ತೆ. ಈ ರೀತಿಯ ಘಟನೆಗಳನ್ನು ಅಲ್ಲಲ್ಲೇ ನಿಯಂತ್ರಿಸುವ ಕೆಲಸ ಆಗಬೇಕು. ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಅಂಥಹ ವಾತಾವರಣವನ್ನ ನಮ್ಮ ಸರ್ಕಾರವೂ ಮಾಡಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು: ಸಿ.ಟಿ ರವಿ
ಈ ಕುರಿತಾಗಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿದ್ದು, ನಮ್ಮದೆ ನೆಲದಲ್ಲಿ ಮತಾಂಧತೆ ಕ್ರೌರ್ಯ ನಡೆದಿದೆ. ಪ್ರಚೋದನೆ ಕೊಡುವ ಮೂಲ ಹುಡುಕಬೇಕಿದೆ. ಪ್ರಚೋದನೆ ಕೊಟ್ಟ ಅಂಶ, ಜಾಲವನ್ನು ಬೇರು ಸಮೇತ ಕಿತ್ತುಹಾಕಬೇಕು. ರಾಜಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು. ಓಲೈಕೆ ರಾಜಕಾರಣದ ಪ್ರಭಾವ ದೇಶ ಇಬ್ಬಗಾವಾಯ್ತು. ಮಾನವೀಯತೆಯ ವಿರುದ್ಧವಾದ ಮಾನಸಿಕತೆವಿದು. ಸ್ಟೆಟಸ್ ಹಾಕಿದ್ದೆ ತಪ್ಪೇ, ನಿತ್ಯ ದೇವರ ಅಪಮಾನ ಮಾಡಲಾಗುತ್ತಿದೆ. ಸ್ವಧರ್ಮ ಪ್ರೀತಿಸಬೇಕು, ಪರಧರ್ಮ ಗೌರವಿಸಬೇಕು ಎಂದು ಹೇಳಿದರು.
ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಖಂಡನೀಯ: ಬಿ.ಕೆ ಹರಿಪ್ರಸಾದ್
ರಾಜಸ್ಥಾನದಲ್ಲಿ ನಡೆದಿರುವುದು ಘೋರವಾದ ಘಟನೆ, ಇದು ಖಂಡನೀಯ ಎಂದು ನವದೆಹಲಿಯಲ್ಲಿ ವಿಧಾನ ಪರಿಷತ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದು, ಇದನ್ನು ಮುಂದಿಟ್ಟುಕೊಂಡು ರಾಜಕೀಯ ಹೇಳಿಕೆ ನೀಡುಬಹದು ತಪ್ಪು. ಎಲ್ಲ ಧರ್ಮ ಭಾಷೆಗಳು ಅನ್ಯೂನವಾಗಿರುವ ದೇಶ. ಘಟನೆಗೆ ಹಲವಾರು ಘಟನೆಗಳು ಇರಬಹುದು. ಸಾವನ್ನು ವೈಭವಿಕರಿಸಬಾರದು.
ಹಿಂದೆ ಶಂಕರಲಾಲ್ ಎನ್ನುವವರು ಓರ್ವ ಹುಡ್ಗನ ಹತ್ಯೆ ಮಾಡಿಸಿದ್ದರು. ಫರಿದಾಬಾದ್ನಲ್ಲಿ ಅಲ್ಪ ಸಂಖ್ಯಾತ ಅನ್ನೊ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಕಟುವಾದಲ್ಲಿ ಐದು ವರ್ಷದ ಹೆಣ್ಣು ಮಗು ಕೊಲೆ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಖಂಡಿಸಬೇಕು. ಅಸಹಿಷ್ಣುತೆ ಎನ್ನುವುದು ಭಾರತದಲ್ಲಿ ಇರಲಿಲ್ಲ. ಎಂಟು ವರ್ಷದ ಹಿಂದೆ ವಿಶ್ವಗುರು ಬಂದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿದೆ. ಇದನ್ನು ಸಭ್ಯ ನಾಗರಿಕ ಸಮಾಜ ವಿರೋಧಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೊಲಂಬಿಯಾ ಜೈಲಿನಲ್ಲಿ ಬೆಂಕಿ ಅನಾಹುತ : 51 ಕೈದಿಗಳು ಸಾವು, 24 ಮಂದಿಗೆ ಗಾಯ
Published On - 10:41 am, Wed, 29 June 22