Assam Flood: ಅಸ್ಸಾಂನಲ್ಲಿ ನೋಡನೋಡುತ್ತಿದ್ದಂತೆ ಪ್ರವಾಹದ ನೀರಿನಲ್ಲಿ ಕುಸಿದು ಬಿದ್ದ ಪೊಲೀಸ್ ಸ್ಟೇಷನ್; ವೈರಲ್ ಆಯ್ತು ವಿಡಿಯೋ
ಅಸ್ಸಾಂನಲ್ಲಿ ಪ್ರವಾಹದ ನೀರಿನಲ್ಲಿ ಅರ್ಧ ಮುಳುಗಿದ್ದ ಪೊಲೀಸ್ ಠಾಣೆ ಶಿಥಿಲಗೊಂಡು ಕುಸಿದುಬಿದ್ದಿದೆ. ನಲ್ಬರಿ ಜಿಲ್ಲೆಯ ಭಂಗ್ನಮರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಸ್ಸಾಂನಲ್ಲಿ ಈ ವರ್ಷದ ಮುಂಗಾರಿನ ಆರಂಭದಲ್ಲೇ ಭಾರೀ ಪ್ರವಾಹ (Assam Floods) ಉಂಟಾಗಿದೆ. ಪ್ರವಾಹ ಪೀಡಿತ ಅಸ್ಸಾಂನ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಸ್ಸಾಂನಲ್ಲಿ ಎರಡು ಅಂತಸ್ತಿನ ಪೊಲೀಸ್ ಠಾಣೆಯ ಬೃಹತ್ ಕಟ್ಟಡ ಮುಳುಗಿ, ಪಕ್ಕದಲ್ಲಿ ಹರಿಯುವ ನದಿಯಲ್ಲಿ ಕುಸಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಅಸ್ಸಾಂನಲ್ಲಿ ಪ್ರವಾಹದ ನೀರಿನಲ್ಲಿ ಅರ್ಧ ಮುಳುಗಿದ್ದ ಪೊಲೀಸ್ ಠಾಣೆ ಶಿಥಿಲಗೊಂಡು ಕುಸಿದುಬಿದ್ದಿದೆ. ನಲ್ಬರಿ ಜಿಲ್ಲೆಯ ಭಂಗ್ನಮರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 1 ನಿಮಿಷದ ಈ ವಿಡಿಯೋದ ಅಂತ್ಯದ ವೇಳೆಗೆ ಕಟ್ಟಡದ ಅರ್ಧಕ್ಕಿಂತ ಹೆಚ್ಚು ಭಾಗವು ನೀರಿಗೆ ಅಪ್ಪಳಿಸಿದೆ. ನಲ್ಬರಿಯು ಅಸ್ಸಾಂನ ಅತಿ ಹೆಚ್ಚು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: Assam Flood: ಅಸ್ಸಾಂನಲ್ಲಿ ಪ್ರವಾಹದ ಮಟ್ಟ ಕೊಂಚ ಇಳಿಕೆ; 127 ಜನ ಸಾವು, ಸಂಕಷ್ಟದಲ್ಲಿ 22 ಲಕ್ಷ ಜನ
ಕಳೆದೆರಡು ದಿನಗಳಿಂದ ಅಸ್ಸಾಂ ರಾಜ್ಯದಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಕೊಂಚ ಸುಧಾರಿಸಿದ್ದರೂ, 22 ಲಕ್ಷ ಜನರು ಇನ್ನೂ ಸಂತ್ರಸ್ತರಾಗಿದ್ದಾರೆ. ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇದುವರೆಗೆ 126 ಜನರು ಮಳೆ ಸಂಬಂಧಿದ ಅನಾಹುತಗಳಿಂದ ಸಾವನ್ನಪ್ಪಿದ್ದಾರೆ. ಇಲ್ಲಿನ ಹಲವಾರು ಜಿಲ್ಲೆಗಳು ಇನ್ನೂ ಪ್ರವಾಹ ಅಥವಾ ಜಲಾವೃತವಾಗಿವೆ. ಪ್ರವಾಹದಿಂದ ಸ್ಥಳಾಂತರಗೊಂಡವರಿಗೆ ಮತ್ತು ಅದರಿಂದ ಸಿಲುಕಿಕೊಂಡವರಿಗೆ ಅಗತ್ಯ ನೆರವು, ಆಹಾರ, ಶುದ್ಧ ನೀರು ಮತ್ತು ಆಶ್ರಯವನ್ನು ಒದಗಿಸಲು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
#WATCH | A part of the two-storied building of Bhangnamari police station sinks due to flood in Assam’s Nalbari district
(Source: Unverified) pic.twitter.com/CMHpcgpHmN
— ANI (@ANI) June 28, 2022
ಪುನರ್ವಸತಿ ಮತ್ತು ಆರೈಕೆಗಾಗಿ ರಾಜ್ಯಾದ್ಯಂತ ನೂರಾರು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಬ್ರಹ್ಮಪುತ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಮುಳುಗಡೆಯಾಗಿವೆ.