ಮಂಗಳೂರು, ಅ.9: ವಿಶ್ವ ಹಿಂದೂ ಪರಿಷತ್ (VHP) ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ನಡೆದ ಶೌರ್ಯ ಜಾಗರಣ ರಥಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ (Sharan Pumpwell), ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು ಎಂದಿದ್ದಾರೆ.
ಇವತ್ತು ನಮ್ಮ ಹೋರಾಟವನ್ನ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಶಾಂತಿ ನಿರ್ಮಾಣ ಆಗಬೇಕು ಅಂತ ಈ ಸರ್ಕಾರ ಹೇಳುತ್ತದೆ. ಆದರೆ ಶಿವಮೊಗ್ಗದಲ್ಲಿ ಪೈಗಂಬರರ ಜನ್ಮದಿನಾಚರಣೆ ಹೆಸರಲ್ಲಿ ಕಲ್ಲು ತೂರಲಾಗಿದೆ. ನಮ್ಮ ಕೃಷ್ಣಾಷ್ಟಮಿ, ಚೌತಿಗೆ ಇಂಥ ಘಟನೆ ನಡೆದ ಉದಾಹರಣೆ ಇದೆಯಾ? ಇದು ಔರಂಗಜೇಬನ ಕಾಲವಲ್ಲ. ಜಿಹಾದಿ ನಾಯಿಗಳೇ, ಇದು ನರೇಂದ್ರನ ಕಾಲ ಎಂದು ಹೇಳಿದರು.
ಇದನ್ನೂ ಓದಿ: ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಲು ಸಿದ್ಧರಾಗಿ; ಉಡುಪಿಯಲ್ಲಿ ಮಹಿಳೆಯರಿಗೆ ಶರಣ್ ಪಂಪ್ವೆಲ್ ಕರೆ
ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ನೂರು ದಂಗೆಕೋರರ ಮೈ ಹುಡಿಯಾಗುತ್ತಿತ್ತು. ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಯಾರೋ ಒಬ್ಬ ಯುವಕ ಜೈಲಲ್ಲಿ ಕೂತು ಚಮಚವನ್ನ ನೆಲಕ್ಕೆ ಬಡೀತಿದ್ದ. ಬಳಿಕ ನಮ್ಮ ಕಾರ್ಯಕರ್ತನ ಬಲಿದಾನಕ್ಕೆ ಪ್ರತೀಕಾರ ಆಗಿತ್ತು. ಆ ಬಲಿದಾನಕ್ಕೆ ಉತ್ತರ ಕೊಡುವ ಕೆಲಸ ಆ ಹಿಂದೂ ಯುವಕ ಮಾಡಿದ್ದ. ಮುಂದೆಯೂ ಅಂಥದ್ದೇ ಉತ್ತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಕೊಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಅಧರ್ಮ ಮಾಡಿದವರನ್ನ ಕೊಂದು ಬಿಡು ಅಂತ ಕೃಷ್ಣನೇ ಹೇಳಿದ್ದ. ಹಾಗಾಗಿ ಶ್ರೀಕೃಷ್ಣನ ನೀತಿ ಇಡೀ ಜಗತ್ತನ್ನೇ ಬದುಕಿಸಲಿದೆ. ಇಸ್ಲಾಂ ಜಿಹಾದಿಗಳು ಕೃಷ್ಣನ ನೀತಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶರಣ್ ಪಂಪ್ವೆಲ್ ಹೇಳಿದ್ದಾರೆ.
ವಿಎಚ್ಪಿ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಕರಿಂಜೆ ಮುಕ್ತಾನಂದ ಸ್ವಾಮೀಜಿ ಸೇರಿ ಹಲವು ನಾಯಕರು ಭಾಗಿಯಾದರು. ವೇದಿಕೆಯ ಕೆಳಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ ಭಟ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಉಪಸ್ಥಿತರಿದ್ದರು. ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾದರು. ಈ ವೇಳೆ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ