ಯಶೋಗಾಥೆ – ಈ ಯುವ ಮೆಕ್ಯಾನಿಕಲ್ ಇಂಜಿನಿಯರ್ ಅಡಿಕೆ ಎಲೆಗಳಿಂದ ಕೇವಲ ತಟ್ಟೆ, ಪ್ಲೇಟಷ್ಟೇ ಅಲ್ಲ; ಇನ್ನೂ ಏನೇನು ತಯಾರಿಸುತ್ತಾನೆ ನೋಡಿ!

ಸ್ವತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದುಕೊಂಡು ಶ್ರೀ ಕೃಷ್ಣ ವಿವಿಧ ರೀತಿಯ ಉತ್ಪನ್ನಗಳಿಗೆ ಅಗತ್ಯವಿರುವ ಯಂತ್ರಗಳನ್ನು ತಾನೇ ತಯಾರಿಸಿಕೊಂಡಿರುವುದು ಮತ್ತೊಂದು ವಿಶೇಷ. ಮಡವು ಎಂಬ ಹಳ್ಳಿಯಲ್ಲಿ ತಯಾರಾಗುವ ವಿವಿಧ ರೀತಿಯ ಅಡಿಕೆ ಎಲೆಯ ಉತ್ಪನ್ನಗಳನ್ನು ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಗುಜರಾತ್‌ನಂತಹ ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ.

ಯಶೋಗಾಥೆ - ಈ ಯುವ ಮೆಕ್ಯಾನಿಕಲ್ ಇಂಜಿನಿಯರ್ ಅಡಿಕೆ ಎಲೆಗಳಿಂದ ಕೇವಲ ತಟ್ಟೆ, ಪ್ಲೇಟಷ್ಟೇ ಅಲ್ಲ; ಇನ್ನೂ ಏನೇನು ತಯಾರಿಸುತ್ತಾನೆ ನೋಡಿ!
ಯಶೋಗಾಥೆ - ಅಡಿಕೆ ಎಲೆ ತಟ್ಟೆ-ಪ್ಲೇಟು ತಯಾರಿಸುವ ಉದ್ಯಮದಲ್ಲಿ ಯುವ ಮೆಕ್ಯಾನಿಕಲ್ ಇಂಜಿನಿಯರ್ ಮಾದರಿ ಸಾಧನೆ
Follow us
ಸಾಧು ಶ್ರೀನಾಥ್​
|

Updated on:Oct 10, 2023 | 11:09 AM

ಪುತ್ತೂರು, ಅಕ್ಟೋಬರ್ 10: ನಿರುಪಯುಕ್ತ ಒಣಗಿದ ಅಡಿಕೆ ಎಲೆಗಳಿಂದ ತಟ್ಟೆ-ಪ್ಲೇಟು ತಯಾರಿಕೆ ಉದ್ಯಮದಲ್ಲಿ (arecanut leaf industry) ಯುವ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರು (Mechanical engineer) ಈಟಿಂಗ್ ಪ್ಲೇಟ್, ಸಾಬೂನು ಬಾಕ್ಸ್, ಐಸ್ ಕ್ರೀಂ ಕಪ್ ಮತ್ತು ಚಮಚಗಳಂತಹ ನಾನಾ ವಸ್ತುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರು (Puttur) ತಾಲೂಕಿನ ಮಾಡಾವು ನಿವಾಸಿ ಶ್ರೀಕೃಷ್ಣ ಈ ಉದ್ಯಮದಲ್ಲಿ ಸಾಧನೆ ಮಾಡಿದ ಯುವಕ. ಆತನ ಕೃಷಿ ಭೂಮಿಯಲ್ಲಿ ನಿರುಪಯುಕ್ತವಾಗಿ ಬಿದ್ದ ಅಡಿಕೆ ಎಲೆಗಳ ಜೊತೆಗೆ ನೆರೆಹೊರೆಯ ಅಡಿಕೆ ತೋಟಗಳಲ್ಲಿಯೂ ಬಿದ್ದಿರುವ ಎಲೆಗಳನ್ನು ಕೃಷ್ಣ ತನ್ನ ಉದ್ಯಮಕ್ಕೆ ಬಳಸುವ ಕಚ್ಚಾ ವಸ್ತುಗಳನ್ನಾಗಿ ಬಳಸುತ್ತಿದ್ದಾರೆ.

ಅನೇಕರು ಅಡಿಕೆ ಎಲೆಗಳಿಂದ ತಟ್ಟೆಗಳನ್ನು ಮಾತ್ರವೇ ತಯಾರಿಸಿ, ಮಾರಾಟ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಕೃಷ್ಣ ಇಷ್ಟಕ್ಕೇ ಸೀಮಿತವಾಗದೆ ಒಂದೇ ಕಚ್ಚಾ ವಸ್ತುವಿನಿಂದ 60 ವಿವಿಧ ಉತ್ಪನ್ನಗಳನ್ನು ಉತ್ಪಾದಿಸುತ್ತಾನೆ (success story) .

ಸ್ವತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದುಕೊಂಡು ಶ್ರೀ ಕೃಷ್ಣ ವಿವಿಧ ರೀತಿಯ ಉತ್ಪನ್ನಗಳಿಗೆ ಅಗತ್ಯವಿರುವ ಯಂತ್ರಗಳನ್ನು ಸ್ವತಃ ತಾನೇ ತಯಾರಿಸಿಕೊಂಡಿರುವುದು ಮತ್ತೊಂದು ವಿಶೇಷತೆ. ತಾಲ್ಲೂಕಿನ ಮಡವು ಎಂಬ ಹಳ್ಳಿಯಲ್ಲಿ ತಯಾರಾಗುವ ವಿವಿಧ ರೀತಿಯ ಅಡಿಕೆ ಎಲೆಯ ಉತ್ಪನ್ನಗಳನ್ನು ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಗುಜರಾತ್‌ನಂತಹ ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ. ಅವುಗಳನ್ನು ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಇದನ್ನೂ ಓದಿ:ಬಿಕಾಂ ಪದವೀಧರನ ಕೃಷಿ ಪಯಣ; 20 ಎಕರೆ ಜಮೀನಿನಲ್ಲಿ ಸಮೃದ್ಧ ಬೆಳೆ, ಸ್ವಾವಲಂಬಿ ಜೀವನದ ಯಶೋಗಾಥೆ ಇಲ್ಲಿದೆ

ಈ ಉದ್ಯಮವು ಸ್ಥಳೀಯ ಮಹಿಳೆಯರಿಗೂ ಉದ್ಯೋಗ ಒದಗಿಸಿದೆ ಎಂಬುದು ಮತ್ತೊಂದು ಸಮಾಧಾನಕರ ಸಂಗತಿ. ಶ್ರೀಕೃಷ್ಣ ತೋರಿದ ಧೈರ್ಯವು ಅವರನ್ನು ಯಶಸ್ವಿ ಉದ್ಯಮಿ ಮತ್ತು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವವರನ್ನಾಗಿ ಮಾಡಿದೆ ಎಂದು Daijiworld Media ವರದಿ ಮಾಡಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Tue, 10 October 23

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM