AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು: ಶರಣ್ ಪಂಪ್​ವೆಲ್

ವಿಶ್ವ ಹಿಂದೂ ಪರಿಷತ್​ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ರಾಜ್ಯದಲ್ಲಿ ವಿಎಚ್​ಪಿ ಶೌರ್ಯ ಜಾಗರಣ ರಥಯಾತ್ರೆ ನಡೆಸಲಾಗುತ್ತಿದೆ. ಈ ರ್ಯಾಲಿಯು ಮಂಗಳೂರಿಗೆ ತಲುಪಿದ್ದು, ಬೃಹತ್ ಸಮಾವೇಶ ಕೂಡ ನಡೆಸಲಾಗಿದೆ. ಈ ವೇಳೆ ಮಾತನಾಡಿದ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್​ವೆಲ್, ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು ಎಂದಿದ್ದಾರೆ.

ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು: ಶರಣ್ ಪಂಪ್​ವೆಲ್
ಶರಣ್ ಪಂಪ್​ವೆಲ್Image Credit source: FILE
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Oct 09, 2023 | 6:49 PM

Share

ಮಂಗಳೂರು, ಅ.9: ವಿಶ್ವ ಹಿಂದೂ ಪರಿಷತ್ (VHP)​ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ನಡೆದ ಶೌರ್ಯ ಜಾಗರಣ ರಥಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್​ವೆಲ್ (Sharan Pumpwell), ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು ಎಂದಿದ್ದಾರೆ.

ಇವತ್ತು ನಮ್ಮ ಹೋರಾಟವನ್ನ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಶಾಂತಿ ನಿರ್ಮಾಣ ಆಗಬೇಕು ಅಂತ ಈ ಸರ್ಕಾರ ಹೇಳುತ್ತದೆ. ಆದರೆ ಶಿವಮೊಗ್ಗದಲ್ಲಿ ಪೈಗಂಬರರ ಜನ್ಮದಿನಾಚರಣೆ ಹೆಸರಲ್ಲಿ ಕಲ್ಲು ತೂರಲಾಗಿದೆ. ನಮ್ಮ ಕೃಷ್ಣಾಷ್ಟಮಿ, ಚೌತಿಗೆ ಇಂಥ ಘಟನೆ ನಡೆದ ಉದಾಹರಣೆ ಇದೆಯಾ? ಇದು ಔರಂಗಜೇಬನ ಕಾಲವಲ್ಲ. ಜಿಹಾದಿ ನಾಯಿಗಳೇ, ಇದು ನರೇಂದ್ರನ ಕಾಲ ಎಂದು ಹೇಳಿದರು.

ಇದನ್ನೂ ಓದಿ: ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಲು ಸಿದ್ಧರಾಗಿ; ಉಡುಪಿಯಲ್ಲಿ ಮಹಿಳೆಯರಿಗೆ ಶರಣ್ ಪಂಪ್​​​ವೆಲ್ ಕರೆ

ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ನೂರು ದಂಗೆಕೋರರ ಮೈ ಹುಡಿಯಾಗುತ್ತಿತ್ತು. ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಯಾರೋ ಒಬ್ಬ ಯುವಕ ಜೈಲಲ್ಲಿ ಕೂತು ಚಮಚವನ್ನ ನೆಲಕ್ಕೆ ಬಡೀತಿದ್ದ. ಬಳಿಕ ನಮ್ಮ ಕಾರ್ಯಕರ್ತನ ಬಲಿದಾನಕ್ಕೆ ಪ್ರತೀಕಾರ ಆಗಿತ್ತು. ಆ‌ ಬಲಿದಾನಕ್ಕೆ ಉತ್ತರ ಕೊಡುವ ಕೆಲಸ ಆ ಹಿಂದೂ ಯುವಕ ಮಾಡಿದ್ದ. ಮುಂದೆಯೂ ಅಂಥದ್ದೇ ಉತ್ತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಕೊಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಅಧರ್ಮ ಮಾಡಿದವರನ್ನ ಕೊಂದು ಬಿಡು ಅಂತ ಕೃಷ್ಣನೇ ಹೇಳಿದ್ದ. ಹಾಗಾಗಿ ಶ್ರೀಕೃಷ್ಣನ ನೀತಿ ಇಡೀ ಜಗತ್ತನ್ನೇ ಬದುಕಿಸಲಿದೆ. ಇಸ್ಲಾಂ ಜಿಹಾದಿಗಳು ಕೃಷ್ಣನ ನೀತಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶರಣ್ ಪಂಪ್​ವೆಲ್ ಹೇಳಿದ್ದಾರೆ.

ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿ

ವಿಎಚ್​ಪಿ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಕರಿಂಜೆ ಮುಕ್ತಾನಂದ ಸ್ವಾಮೀಜಿ ಸೇರಿ ಹಲವು ನಾಯಕರು ಭಾಗಿಯಾದರು. ವೇದಿಕೆಯ ಕೆಳಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ ಭಟ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಉಪಸ್ಥಿತರಿದ್ದರು. ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾದರು. ಈ ವೇಳೆ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ