ಲವ್ ಜಿಹಾದ್, ಗೋಹತ್ಯೆ, ಮತಾಂತರ ವಿರುದ್ಧ ಕರ್ನಾಟಕದಾದ್ಯಂತ ಶೌರ್ಯ ಯಾತ್ರೆ
ಲವ್ ಜಿಹಾದ್, ಗೋಹತ್ಯೆ, ಮತಾಂತರ ವಿರುದ್ಧ ಶೌರ್ಯ ಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಚಿತ್ರದುರ್ಗದಲ್ಲಿ ಈ ಯಾತ್ರೆಗೆ ಚಾಲನೆ ದೊರಕಲಿದ್ದು, ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಇರುವ ಬಜರಂಗದಳದ ಘಟಕಗಳನ್ನು ಎರಡು ಸಾವಿರದಿಂದ ಐದು ಸಾವಿರಕ್ಕೆ ಏರಿಸುವ ಗುರಿಯನ್ನೂ ಹೊಂದಲಾಗಿದೆ.
ಮಂಗಳೂರು, ಸೆ.21: ಲವ್ ಜಿಹಾದ್, ಗೋಹತ್ಯೆ, ಮತಾಂತರ ವಿರುದ್ಧ ರಾಜ್ಯಾದ್ಯಂತ ಶೌರ್ಯ ಯಾತ್ರೆ (Shaurya Yatra) ನಡೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಹಿಂದೂ ದೇವಾಲಯಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಉದ್ದೇಶ ಸೇರಿದಂತೆ ವಿವಿಧ ಉದ್ದೇಶದಿಂದ ರಥಯಾತ್ರೆ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ 25 ಕ್ಕೆ ಚಿತ್ರದುರ್ಗದಲ್ಲಿ (Chitradurga) ಚಾಲನೆ ನೀಡಲಾಗುತ್ತಿದೆ. ಅಕ್ಟೋಬರ್ 10 ರಂದು ಉಡುಪಿಯಲ್ಲಿ (Udupi) ಸಮರೋಪಗೊಳ್ಳಲಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಎರಡು ಸಾವಿರ ಇರುವ ಭಜರಂಗದಳ ಘಟಕವನ್ನು ಐದು ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಹಿಂದೂ ದೇವಾಲಯಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಉದ್ದೇಶ ಸೇರಿದಂತೆ ವಿವಿಧ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಬೆಳ್ಳಂದೂರು ಮಹಿಳಾ ಟೆಕ್ಕಿಯಿಂದ ಲವ್ ಜಿಹಾದ್ ಆರೋಪ: ಯುವಕನ ಬೆನ್ನುಹತ್ತಿ ಕಾಶ್ಮೀರಕ್ಕೆ ತೆರಳಿದ ಹೆಬ್ಬಗೋಡಿ ಪೊಲೀಸರು
ಶೌರ್ಯ ಜಾಗರಣ ಯಾತ್ರೆ ಮರ್ಮವೇನು?
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿತ್ತು. ರಾಜ್ಯ ಸರ್ಕಾರದ ಈ ನಿಲುವಿಗೆ ಠಕ್ಕರ್ ಕೊಡುವುದೇ ಶೌರ್ಯ ಯಾತ್ರೆಯ ಉದ್ದೇಶವೂ ಹೌದು. ಇದರ ಜೊತೆಗೆ ಲವ್ ಜಿಹಾದ್, ಮತಾಂತರ, ಗೋಹ್ಯತೆ ನಿಷೇಧ ವಿಚಾರವಾಗಿ ತಳಮಟ್ಟದಲ್ಲಿ ಜಾಗೃತಿ ಉಂಟು ಮಾಡುವ ಪ್ಲಾನ್ ಇದಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಂತಾ ಬಿಂಬಿಸುವ ಸಾಧ್ಯತೆ ನಿಟ್ಟಿನಲ್ಲಿ ಈ ಶೌರ್ಯ ಯಾತ್ರೆ ಮಹತ್ವ ಪಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ