AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕಿತ ನಿಫಾ ಪ್ರಕರಣ ಗಮನಕ್ಕೆ ಬಂದರೆ ಸ್ವ್ಯಾಬ್ ಟೆಸ್ಟ್: ದಿನೇಶ್ ಗುಂಡೂರಾವ್

ಕೇರಳದಲ್ಲಿ ಕೊನೆಯದಾಗಿ ಪತ್ತೆಯಾದ ನಿಫಾ ವೈರಸ್​ನ ಅವಧಿ ಮುಕ್ತಾಯವಾಗುವವರೆಗೆ ಅಂದರೆ, ಅಕ್ಟೋಬರ್ 10 ರ ವರೆಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲದೆ, ಶಂಕಿತ ಪ್ರಕರಣ ನಮ್ಮ ಗಮನಕ್ಕೆ ಬಂದರೆ ಸ್ವ್ಯಾಬ್ ಟೆಸ್ಟ್ ನಡೆಸಲಾಗುವುದು ಎಂದರು.

ಶಂಕಿತ ನಿಫಾ ಪ್ರಕರಣ ಗಮನಕ್ಕೆ ಬಂದರೆ ಸ್ವ್ಯಾಬ್ ಟೆಸ್ಟ್: ದಿನೇಶ್ ಗುಂಡೂರಾವ್
ಶಂಕಿತ ನಿಫಾ ಪ್ರಕರಣ ಗಮನಕ್ಕೆ ಬಂದರೆ ಸ್ವ್ಯಾಬ್ ಟೆಸ್ಟ್ ನಡೆಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ (ಸಾಂದರ್ಭಿಕ ಚಿತ್ರ)
Rakesh Nayak Manchi
|

Updated on: Sep 21, 2023 | 9:25 AM

Share

ಮಂಗಳೂರು, ಸೆ.21: ರಾಜ್ಯದಲ್ಲಿ ಶಂಕಿತ ನಿಫಾ ಸೋಂಕಿನ (Nipah Virus) ಪ್ರಕರಣ ನಮ್ಮ ಗಮನಕ್ಕೆ ಬಂದರೆ ಸ್ವ್ಯಾಬ್ ಟೆಸ್ಟ್ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಅಲ್ಲದೆ, ಅಕ್ಟೋಬರ್ 10ರ ವರೆಗೆ ರಾಜ್ಯದ ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರವಹಿಸಲಾಗುವುದು ಎಂದಿದ್ದಾರೆ.

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈವರೆಗೆ ಯಾವುದೇ ಶಂಕಿತ ನಿಫಾ ಪ್ರಕರಣಗಳು ವರದಿಯಾಗದಿದ್ದರೂ ರಾಜ್ಯವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಮತ್ತು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು. ಈ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 20 ಚೆಕ್ ಪೋಸ್ಟ್​ಗಳನ್ನು ಸ್ಥಾಪಿಸಲಾಗಿದ್ದು, ಜ್ವರ, ಕೆಮ್ಮು ಮತ್ತು ಇತರ ರೋಗಲಕ್ಷಣಗಳಿಂದ ಬಳಲುತ್ತಿದ್ದ 10,000 ಕ್ಕೂ ಹೆಚ್ಚು ಜನರನ್ನು ತಪಾಸಣೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಫಾ ವೈರೆಸ್ ಬೆನ್ನಲ್ಲೆ ಸ್ಕ್ರಬ್ ಟೈಫಸ್ ಭೀತಿ; ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ

ಕೇರಳದ ನಿಫಾ ಪೀಡಿತ ಕೇಂದ್ರದಿಂದ 150 ಕಿ.ಮೀ ವ್ಯಾಪ್ತಿಯಲ್ಲಿರುವ ಗಡಿಯಲ್ಲಿರುವ ಎಚ್.ಡಿ.ಕೋಟೆ ತಾಲ್ಲೂಕಿನ ಕುಗ್ರಾಮಗಳು ಮತ್ತು ಕೇರಳದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅವರು ಹೇಳಿದರು.

ನಿಫಾ ಸಾವಿನ ಪ್ರಮಾಣವು ಶೇಕಡಾ 40-70 ರಷ್ಟಿರುವುದರಿಂದ ಮತ್ತು ರೋಗಕ್ಕೆ ಲಸಿಕೆ ಇಲ್ಲದ ಕಾರಣ ಅವರು ಹೆಚ್ಚು ಜಾಗರೂಕತೆವಹಿಸಲಾಗಿದೆ ಎಂದು ಸಚಿವರು ಹೇಳಿದರು. ಕ್ವಾರಂಟೈನ್, ವಿಶೇಷ ವಾರ್ಡ್​ಗಳು, ಮಾಸ್ಕ್, ಕಿಟ್ ಇತ್ಯಾದಿಗಳ ಸೌಲಭ್ಯಗಳನ್ನು ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧವಾಗಿಡುವ ಮೂಲಕ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಫಾರ್ಮಾಸಿಸ್ಟ್ ಹುದ್ದೆಗಳಿಗೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರ ವೇತನವನ್ನು 12,000 ರೂ.ಗಳಿಂದ 17,000 ರೂ.ಗೆ ಹೆಚ್ಚಿಸಲು ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಅಲ್ಲದೆ, ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ಶೇಕಡಾ 100 ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ