ಬೆಂಗಳೂರಿನಲ್ಲಿ ನಿಫಾ ವೈರೆಸ್ ಬೆನ್ನಲ್ಲೆ ಸ್ಕ್ರಬ್ ಟೈಫಸ್ ಭೀತಿ; ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ
ಫಾ ವೈರಸ್ ಬೆನ್ನಲೆ ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ಕ್ರಬ್ ಟೈಫಸ್ ಕಾಣಿಸಿಕೊಂಡಿದ್ದು ರಾಜ್ಯಕ್ಕೂ ಆತಂಕ ತಂದಿದೆ. ಸ್ಕ್ರಬ್ ಟೈಫಸ್ ಹೊಸ ಬ್ಯಾಕ್ಟೀರಿಯಾ ಸೋಂಕೊಂದು ಬೇರೆ ಬೇರೆ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ಇದು ಬ್ಯಾಕ್ಟೀರಿಯಾ ಸೋಂಕಿತ ಸಣ್ಣ ಹುಳಗಳು ಮನುಷ್ಯರಿಗೆ ಕಚ್ಚುವುದರ ಮೂಲಕ ಹರಡುತ್ತಿದ್ದು ಆತಂಕ ಹೆಚ್ಚಿಸಿದೆ.
ಬೆಂಗಳೂರು, ಸೆ.18: ಜನರ ಜೀವ ಹಿಂಡುವ ಹೆಮ್ಮಾರಿ ಕೊವಿಡ್(Covid 19) ಬಂದಾಗಿನಿಂದ ಜನರಿಗೆ ಒಂದಲ್ಲ ಒಂದು ಖಾಯಿಲೆಗಳು ಶುರುವಾಗಿದೆ. ಒಂದಲ್ಲ ಒಂದು ಚಿತ್ರವಿಚಿತ್ರ ಆರೋಗ್ಯ ಸಮಸ್ಯೆಯಿಂದ ಜನ ಕಂಗೆಟ್ಟಿದ್ದಾರೆ. ಕೊರೊನಾ(Coronavirus) ಬಳಿಕ ಇತ್ತೀಚೆಗೆ ಕೆಲವರಿಗೆ ಹೃದಯಘಾತ ಸಂಭವಿಸುತ್ತಿದ್ದರೆ, ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊವಿಡ್ ಬಳಿಕ ಒಂದಲ್ಲ ಒಂದು ವೈರಸ್ಗಳ ಹಾವಳಿ ಹೆಚ್ಚಾಗುತ್ತಲೇ ಇದ್ದು ಹೊಸ ಹೊಸ ಆತಂಕಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಡೆಂಗ್ಯೂ(Dengue) ಪ್ರಕರಣಗಳು ಹೆಚ್ಚಾಗಿದ್ದು ಇದರ ನಡುವೆ ಮತ್ತೊಂದು ವೈರಸ್ ಆತಂಕ ಶುರುವಾಗಿದೆ.
ಆತಂಕ ಹೆಚ್ಚಿಸಿದ ಸ್ಕ್ರಬ್ ಟೈಫಸ್
ಕೊರೊನಾ ಸೋಂಕಿನಿಂದ ಜನರು ಹೈರಾಣಾಗಿ ಕೊಂಚ ಸುಧಾರಿಸಿಕೊಳ್ಳುತ್ತಿದ್ದಂತೆಯೇ ಈಗ ಹಂದಿ ಜ್ವರ, ಡೆಂಗ್ಯೂ ಜ್ವರ, ನಿಫಾ ವೈರಸ್ ಸೇರಿದಂತೆ ಹಲವು ಹೊಸ ಹೊಸ ಕಾಯಿಲೆಗಳು ಜನರಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಈ ಮಧ್ಯೆ ಕೇರಳದಲ್ಲಿ ನಿಫಾ ವೈರಸ್ ಹಾವಳಿ ಬೆನ್ನಲೆ ಈಗ ಹೊಸ ವೈರಸ್ ಆತಂಕ ಹೆಚ್ಚುಮಾಡಿದೆ. ನಿಫಾ ವೈರಸ್ ಬೆನ್ನಲೆ ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ಕ್ರಬ್ ಟೈಫಸ್ ಕಾಣಿಸಿಕೊಂಡಿದ್ದು ರಾಜ್ಯಕ್ಕೂ ಆತಂಕ ತಂದಿದೆ. ಸ್ಕ್ರಬ್ ಟೈಫಸ್ ಹೊಸ ಬ್ಯಾಕ್ಟೀರಿಯಾ ಸೋಂಕೊಂದು ಬೇರೆ ಬೇರೆ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ಇದು ಬ್ಯಾಕ್ಟೀರಿಯಾ ಸೋಂಕಿತ ಸಣ್ಣ ಹುಳಗಳು ಮನುಷ್ಯರಿಗೆ ಕಚ್ಚುವುದರ ಮೂಲಕ ಹರಡುತ್ತಿದ್ದು ಆತಂಕ ಹೆಚ್ಚಿಸಿದೆ.
ಕೊವಿಡ್ ಹಾಗೂ ಡೆಂಗ್ಯೂ ಜ್ವರದ ಲಕ್ಷಣಗಳನ್ನೇ ಹೋಂದಿರುವ ಸ್ಕ್ರಬ್ ಟೈಫಸ್ ಸೋಂಕಿತ ಸಣ್ಣ ಹುಳಗಳು ಕಚ್ಚುವಿಕೆಯ ಮೂಲಕ ಹರಡುತ್ತಿದೆ. ಸಣ್ಣ ಹುಳಗಳು ಕಚ್ಚುವಿಕೆಯಿಂದ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು ಚಳಿ ಹಾಗೂ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಹುಳ ಕಚ್ಚಿದ ಜಾಗದ ಸುತ್ತ ಕೆಂಪನೆಯ ಸ್ಕ್ರಬ್ ಈ ರೋಗದ ಪ್ರಮುಖ ಲಕ್ಷಣಗಳಾಗಿದೆ. ಈ ಸ್ಕ್ರಬ್ ಟೈಫಸ್ ಸೋಂಕು ತೀವ್ರ ಸ್ವರೂಪ ಪಡೆದರೆ ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೆ ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಕಟ್ಟೆಚ್ಚರಕ್ಕೆ ಮುಂದಾಗಿದೆ. ಸದ್ಯ ನಮ್ಮಲ್ಲಿ ಈ ರೋಗದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಆದ್ರೆ ಈ ರೋಗ ಕಾಣಿಸಿಕಂಡ ರಾಜ್ಯಗಳ ಜೊತೆ ಮಾಹಿತಿ ಹಾಗೂ ಸಲಹೆ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.
ಸ್ಕ್ರಬ್ ಟೈಫಸ್ ಲಕ್ಷಣಗಳು ಏನು?
ಚಳಿ ಹಾಗೂ ಜ್ವರ, ತಲೆನೋವು, ಸ್ನಾಯು ನೋವು ಮೈ ಕೈ ನೋವು, ಹುಳ ಕಚ್ಚಿದ ಜಾಗದ ಸುತ್ತ ಕೆಂಪನೆಯ ಸ್ಕ್ರಬ್.
ಇನ್ನು ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಸೂಚನೆ ಬಳಿಕ ಸೂಕ್ತ ಮುನ್ನೇಚ್ಚರಿಕೆ ನೀಡಿದ್ದು ಆರೋಗ್ಯ ಇಲಾಖೆ ಆಲರ್ಟ್ ಆಗಿದೆ. ಈ ಸೋಂಕು ಕಾಣಿಸಿಕೊಂಡ ರಾಜ್ಯಗಳ ಜೊತೆ ಮಾತುಕಥೆ ಹಾಗೂ ಮಾಹಿತಿ ಪಡೆಯಲು ಮುಂದಾಗಿದ್ದು ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ಮುನ್ನೆಚ್ಚರಿಕೆ ವಹಿಸಲು ತಯಾರಿ ಶುರುಮಾಡಿದೆ. ಯಾವುದೇ ಈ ರೀತಿಯ ಪ್ರಕರಣ ಕಾಣಿಸಿಕೊಂಡು ತುರ್ತು ಚಿಕಿತ್ಸೆಗೆ ರೆಡಿಯಾಗಿರುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಒಟ್ನಲ್ಲಿ ಈಗಾಗಲೇ ಬೇರೆ ರಾಜ್ಯಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆಯೂ ಈ ಬಗ್ಗೆ ಎಚ್ಚರವಹಿಸಿದ್ದು ಕ್ರಮಕ್ಕೆ ಮುಂದಾಗಿದೆ. ಅದೇನೆ ಇರಲಿ ಜನರು ಮಾತ್ರ ಆತಂಕವಹಿಸದೇ ಆರೋಗ್ಯದ ಕಡೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:09 pm, Mon, 18 September 23