Mangaluru international airport: ಮುಂದಿನ ತಿಂಗಳಿಂದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಸಂಪೂರ್ಣ ನಿಯಂತ್ರಣ ಅದಾನಿ ಗ್ರೂಪ್ ತೆಕ್ಕೆಗೆ

Adani Group: ಒಪ್ಪಂದದ ಪ್ರಕಾರ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸುವುದಿಲ್ಲ. ಮೂರು ವರ್ಷಗಳವರೆಗೆ, ಎಎಐಗೆ ಸೇರಿದ ಅರ್ಧದಷ್ಟು ಸಿಬ್ಬಂದಿ ಅದಾನಿ ಸಮೂಹದ ಸಿಬ್ಬಂದಿಯೊಂದಿಗೆ ಕೆಲಸ ಮಾಡಬೇಕಾಗಿತ್ತು. ಇದೀಗ ವಿಮಾನ ನಿಲ್ದಾಣದ ಸಂಪೂರ್ಣ ನಿರ್ವಹಣೆ ಅದಾನಿ ಕೈ ಸೇರುತ್ತಿದೆ.

Mangaluru international airport: ಮುಂದಿನ ತಿಂಗಳಿಂದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಸಂಪೂರ್ಣ ನಿಯಂತ್ರಣ ಅದಾನಿ ಗ್ರೂಪ್ ತೆಕ್ಕೆಗೆ
ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಸಂಪೂರ್ಣ ನಿಯಂತ್ರಣ ಅದಾನಿ ಗ್ರೂಪ್ ತೆಕ್ಕೆಗೆ
Follow us
ಸಾಧು ಶ್ರೀನಾಥ್​
|

Updated on: Oct 10, 2023 | 12:45 PM

ಮಂಗಳೂರು, ಅಕ್ಟೋಬರ್ 10: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mangaluru international airport) ಸಂಪೂರ್ಣ ನಿರ್ವಹಣೆಯನ್ನು ಅಕ್ಟೋಬರ್ 31 ರಿಂದ ಅದಾನಿ ಗ್ರೂಪ್ ಸಂಸ್ಥೆಗೆ ಕಾರ್ಯಾಚರಣೆ ಗುತ್ತಿಗೆ ಜವಾಬ್ದಾರಿ ಹೊತ್ತುಕೊಳ್ಳಲಲಿದೆ. ಅಂದಹಾಗೆ, ಮೂರು ವರ್ಷಗಳ ಹಿಂದೆ ಈ ಗುತ್ತಿಗೆ ಅದಾನಿ ಗ್ರೂಪ್ (Adani Group) ಪಾಲಾಗಿತ್ತು. ಅಕ್ಟೋಬರ್ 31, 2020 ರಂದು, ಅದಾನಿ ಗ್ರೂಪ್ ದೇಶದ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ವಹಿಸಿಕೊಂಡಿತ್ತು. ಇದು ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಖಾಸಗೀಕರಣಗೊಳಿಸಲು (privatize) ಕೇಂದ್ರ ಸರ್ಕಾರದ ನಿರ್ಧಾರವಾಗಿತ್ತು.

ಅದಾನಿ ಗ್ರೂಪ್ ಮೊದಲು ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತೆಗೆದುಕೊಂಡಿತು. ನಂತರ ಅದು ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಮತ್ತು ತಿರುವನಂತಪುರದ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಸಹ ತೆಗೆದುಕೊಂಡಿತು. ಅದಾನಿ ಗ್ರೂಪ್ ಜುಲೈ 2020 ರಲ್ಲಿ ಜಿವಿಕೆ ಗುಂಪಿನಿಂದ ಮುಂಬೈ ವಿಮಾನ ನಿಲ್ದಾಣ ನಿರ್ವಹಣೆಯನ್ನು ತನ್ನ ಪರಭಾರೆಗೆ ತೆಗೆದುಕೊಂಡಿತ್ತು. ಪ್ರಸ್ತುತ, ಸಮೂಹದಿಂದ ನವಿ ಮುಂಬೈನಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಇದು 2024 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ.

Also Read: ಮಂಗಳೂರು ವಿಮಾನ ನಿಲ್ದಾಣ ಅದಾನಿ ಸಮೂಹಕ್ಕೆ ಹಸ್ತಾಂತರಿಸುವುದು ಬೇಡ, ನಾವೇ ನಿರ್ವಹಿಸುತ್ತೇವೆ – ಕೇಂದ್ರಕ್ಕೆ ಪತ್ರ ಬರೆಯಲು ಕರ್ನಾಟಕ ಚಿಂತನೆ

ಒಪ್ಪಂದದ ಪ್ರಕಾರ, ಮೂರು ವರ್ಷಗಳವರೆಗೆ, ಎಎಐಗೆ ಸೇರಿದ ಅರ್ಧದಷ್ಟು ಸಿಬ್ಬಂದಿ ಅದಾನಿ ಸಮೂಹದ ಸಿಬ್ಬಂದಿಯೊಂದಿಗೆ ಕೆಲಸ ಮಾಡಬೇಕಾಗಿತ್ತು. ಇದೀಗ ವಿಮಾನ ನಿಲ್ದಾಣದ ಸಂಪೂರ್ಣ ನಿರ್ವಹಣೆ ಅದಾನಿ ಕೈ ಸೇರುತ್ತಿದೆ. ಅದಾನಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಹಿಸಿಕೊಂಡಾಗ ಎಎಐನಲ್ಲಿ 118 ಸಿಬ್ಬಂದಿ ಇದ್ದರು. ಈ ಪೈಕಿ 97 ಮಂದಿಯನ್ನು ಉಳಿಸಿಕೊಳ್ಳಲಾಗಿದೆ.

ಎಲ್ಲರೂ AGM ಮಟ್ಟ ಮತ್ತು ಅದಕ್ಕಿಂತ ಕೆಳಗಿನವರು. ಅವರು ಹಣಕಾಸು, ಮಾನವ ಸಂಪನ್ಮೂಲ, ಆಡಳಿತ, ವಾಣಿಜ್ಯ, ಅಗ್ನಿಶಾಮಕ ಸೇವೆ ಮತ್ತು ಟರ್ಮಿನಲ್ ಅನ್ನು ನೋಡಿಕೊಳ್ಳುವ ಅದಾನಿ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 31 ರಂದು ಒಪ್ಪಂದ ಮುಗಿಯುತ್ತಿದ್ದಂತೆ, 97 ಎಎಐ ಸಿಬ್ಬಂದಿಯನ್ನು ಇತರ ವಿಮಾನ ನಿಲ್ದಾಣಗಳಿಗೆ ವರ್ಗಾಯಿಸಲಾಗುತ್ತಿದೆ. ಏರ್ ಟ್ರಾಫಿಕ್ ಕಂಟ್ರೋಲ್ (ATC) ಮತ್ತು ಸಂವಹನ ನ್ಯಾವಿಗೇಷನ್ ಮತ್ತು ಕಣ್ಗಾವಲು (CNS) ಮಾತ್ರ ಅದಾನಿ ನಿಯಂತ್ರಣಕ್ಕೆ ಬರುವುದಿಲ್ಲ. ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಲಾಗುವುದಿಲ್ಲ ಎಂದು Daijiworld Media ವರದಿ ಮಾಡಿದೆ.

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೆಲವು ಅಭಿವೃದ್ಧಿಗಳನ್ನು ಮಾಡಲಾಗಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಆಗಮನಕ್ಕಾಗಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಇನ್ನೂ ಎರಡು ಏರೋಬ್ರಿಡ್ಜ್‌ಗಳನ್ನು ಸೇರಿಸಲಾಗಿದೆ. ರನ್ ವೇಗೆ ಡಾಂಬರೀಕರಣ ಮಾಡಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನಿರ್ಗಮನ ಹಾಗೂ ಆಗಮನಕ್ಕೆ ನೆಲ ಮಹಡಿಯಲ್ಲಿ ಏಕಮುಖ ವ್ಯವಸ್ಥೆ ಜಾರಿಯಲ್ಲಿದೆ. ಪಾರ್ಕಿಂಗ್ ಪ್ರದೇಶದಲ್ಲಿ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಪ್ರೀ-ಪೇಯ್ಡ್ ಟ್ಯಾಕ್ಸಿ ಬುಕಿಂಗ್, ಟ್ಯಾಕ್ಸಿ ಡ್ರೈವರ್‌ಗಳಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ಸೌಲಭ್ಯ ಮತ್ತು ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಆಹಾರ ಎಲ್ಲವೂ ಕಾರ್ಯೋನ್ಮುಖವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್