ವಕೀಲನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; 48 ಗಂಟೆಗಳಲ್ಲಿ ಆರೋಪಿ ರಾಜೇಶ್ ಬಂಧಿಸದಿದ್ದರೆ ಸರ್ವ ಕಾಲೇಜು ಬಂದ್!

| Updated By: sandhya thejappa

Updated on: Oct 26, 2021 | 12:55 PM

ಮಂಗಳೂರಿನ ಪ್ರಖ್ಯಾತ ವಕೀಲ ಕೆಎಸ್ಎನ್ ರಾಜೇಶ್ ವಿರುದ್ಧ ಇಂಟರ್ನ್ಶಿಪ್ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರು ನೀಡಿದ್ದಳು.

ವಕೀಲನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; 48 ಗಂಟೆಗಳಲ್ಲಿ ಆರೋಪಿ ರಾಜೇಶ್ ಬಂಧಿಸದಿದ್ದರೆ ಸರ್ವ ಕಾಲೇಜು ಬಂದ್!
ವಕೀಲ ರಾಜೇಶ್ ಭಟ್
Follow us on

ಮಂಗಳೂರು: ಇಂಟರ್ನ್​ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಾಜೇಶ್​ರನ್ನು ಇನ್ನೂ ಬಂಧಿಸಿಲ್ಲ. ವಾರ ಕಳೆದರೂ ಆರೋಪಿ ಬಂಧನವಾಗದ ಹಿನ್ನೆಲೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಸಂಘಟನೆ ಮಂಗಳೂರು ಪೊಲೀಸ್ ಕಮಿಷನರ್ಗೆ ಡೆಡ್ಲೈನ್ ನೀಡಿದೆ. 48 ಗಂಟೆಗಳ ಒಳಗಾಗಿ ಆರೋಪಿ ವಕೀಲ ರಾಜೇಶ್​ರನ್ನು ಬಂಧಿಸಬೇಕು. ಇಲ್ಲದಿದ್ದರೆ ಸರ್ವ ಕಾಲೇಜು ಬಂದ್ ಮಾಡಲಾಗುತ್ತದೆ ಅಂತ ವಿದ್ಯಾರ್ಥಿ ಸಂಘ ಎಚ್ಚರಿಕೆ ನೀಡಿದೆ.

ಆರೋಪಿಯನ್ನು 48 ಗಂಟೆಗಳಲ್ಲಿ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾಲೇಜುಗಳನ್ನು ಬಂದ್ ಮಾಡಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಅಂತ ಮಂಗಳೂರು ಪೊಲೀಸ್ ಇಲಾಖೆಗೆ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ತಿಳಿಸಿದೆ.

ಮಂಗಳೂರಿನ ಪ್ರಖ್ಯಾತ ವಕೀಲ ಕೆಎಸ್ಎನ್ ರಾಜೇಶ್ ವಿರುದ್ಧ ಇಂಟರ್ನ್​ಶಿಪ್ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರು ನೀಡಿದ್ದಳು. ಮಂಗಳೂರಿನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಸೆಪ್ಟೆಂಬರ್ 25ರಂದು ದೂರು ನೀಡಿದ್ದಳು. ಲೈಂಗಿಕ ಕಿರುಕುಳದ ಜೊತೆ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗಿ ವಾರ ಕಳೆದರೂ ಆರೋಪಿ ರಾಜೇಶ್ ಬಂಧನವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ

ಹೆಚ್​ಡಿಕೆ ಕರ್ಚೀಫ್​ಗೆ ಗ್ಲಿಸರಿನ್ ಹಾಕಿಕೊಂಡು ಅಳೋದು: ಪ್ರತಿಕ್ರಿಯೆಗೆ ಪತ್ರಕರ್ತರ ಕೈಗೇ ಕರ್ಚೀಫ್ ಕೊಟ್ಟು ದುಂಬಾಲು ಬಿದ್ದ ಕುಮಾರಸ್ವಾಮಿ

ಜಮೀರ್ ಅಹ್ಮದ್ ಬ್ಲ್ಯಾಕ್ ವ್ಯಕ್ತಿ, ಕೊಚ್ಚೆ ಇದ್ದಂಗೆ! ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

Published On - 12:54 pm, Tue, 26 October 21