ಜಮೀರ್ ಅಹ್ಮದ್ ಬ್ಲ್ಯಾಕ್ ವ್ಯಕ್ತಿ, ಕೊಚ್ಚೆ ಇದ್ದಂಗೆ! ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

ಕುಮಾರಸ್ವಾಮಿಗೆ ಬೆಂಗಳೂರಿನಲ್ಲಿ ಇರಲು ಜಾಗ ಇರಲಿಲ್ಲ ಎಂಬ ಜಮೀರ್ ಹೇಳಿಕೆಗೆ ಉತ್ತರಿಸಿದ ಹೆಚ್​ಡಿಕೆ, ಬೆಂಗಳೂರು ಬಹಳ ದೊಡ್ಡದು. ಬೆಂಗಳೂರಿನಲ್ಲಿ ನನಗೆ ಜಾಗವೇ ಇಲ್ವಾ. ಪಾಪ ಜಮೀರ್ ನನಗೆ ಜಾಗ ಕೊಡಬೇಕಾ?

ಜಮೀರ್ ಅಹ್ಮದ್ ಬ್ಲ್ಯಾಕ್ ವ್ಯಕ್ತಿ, ಕೊಚ್ಚೆ ಇದ್ದಂಗೆ! ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್
Follow us
TV9 Web
| Updated By: sandhya thejappa

Updated on:Oct 26, 2021 | 12:12 PM

ವಿಜಯಪುರ: ಜಮೀರ್ ಅಹ್ಮದ್ ಖಾನ್ ಬ್ಲ್ಯಾಕ್ ವ್ಯಕ್ತಿ, ಕೊಚ್ಚೆ ಇದ್ದಂಗೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ವಿಜಯಪುರ ನಗರದ ಫರ್ನ್ ಹೋಟೆಲ್​ನಲ್ಲಿ ಮಾತನಾಡಿದ ಅವರು, 20-20 ಸರ್ಕಾರದ ಆಡಿಯೋ ವಿಚಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ತಾಕತ್ ಇದ್ದರೆ ಆಡಿಯೋ ಬಿಡುಗಡೆ ಮಾಡಲಿ ಎಂದು ಜಮೀರ್​ಗೆ ಸವಾಲ್ ಹಾಕಿದ್ದಾರೆ. ಜಮೀರ್ ಬ್ಲ್ಯಾಕ್ ಮೇಲ್ ಜೀವನ ಮಾಡುತ್ತಾರೆ. ಮಾರ್ಯಾದೆ ಇಲ್ಲದವರ ಜೊತೆಗೆ ಚರ್ಚೆ ಮಾಡಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಬೆಂಗಳೂರಿನಲ್ಲಿ ಇರಲು ಜಾಗ ಇರಲಿಲ್ಲ ಎಂಬ ಜಮೀರ್ ಹೇಳಿಕೆಗೆ ಉತ್ತರಿಸಿದ ಹೆಚ್​ಡಿಕೆ, ಬೆಂಗಳೂರು ಬಹಳ ದೊಡ್ಡದು. ಬೆಂಗಳೂರಿನಲ್ಲಿ ನನಗೆ ಜಾಗವೇ ಇಲ್ವಾ. ಪಾಪ ಜಮೀರ್ ನನಗೆ ಜಾಗ ಕೊಡಬೇಕಾ? ಕೊಚ್ಚೆ ಮೇಲೆ ಕಲ್ಲು ಎಸೆದರೆ ನಮ್ಮ ಮೇಲೆ ಬೀಳುತ್ತದೆ ಎಂದರು.

ನನ್ನ ಕಾಲು ಹಿಡಿದು ಕೋಟ್ಯಂತರ ರೂ. ತೆಗೆದುಕೊಂಡಿದ್ದಾರೆ ಎಂದು ಜಮೀರ್ ಅಹ್ಮದ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈಗ ಆ ವಿಚಾರಗಳು ಯಾವುದೂ ಬೇಡ. ಮಾತನಾಡುವುದಕ್ಕೆ ನನ್ನ ಬಳಿಯೂ ಹಲವು ವಿಚಾರಗಳಿವೆ. ನಾನು ಸತ್ಯ ಮಾತನಾಡಿದರೆ, ಅದಕ್ಕೆ ಅರ್ಥ ಇರುವುದಿಲ್ಲ. ಮರ್ಯಾದೆ ಇರುವ ವ್ಯಕ್ತಿಗಳ ಜೊತೆ ಮಾತನಾಡಬೇಕು. ಮರ್ಯಾದೆ ಇಲ್ಲದ ವ್ಯಕ್ತಿಗಳ ಜತೆ ಮಾತು ಏಕೆ. ಇವರಿಗೆ ದೇವೇಗೌಡರನ್ನು ಸಿಎಂ ಮಾಡುವ ಶಕ್ತಿ ಇದ್ದಿದ್ರೆ, ದೇವೇಗೌಡರು ದೆಹಲಿಗೆ ಹೋದಾಗ ಅವರ ಹೆಸರು ಹೇಳಬೇಕಿತ್ತು. ಸಿಎಂ ಸ್ಥಾನಕ್ಕೆ ಅವರ ಹೆಸರು ಹೇಳಬೇಕಿತ್ತಲ್ವಾ ಅಂತ ಪ್ರಶ್ನಿಸಿದ್ದಾರೆ.

ಕಸ ಹೊಡೆದಿದ್ದು ನಿಜ ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಕಸ ಹೊಡೆದಿದ್ದು ನಿಜ. ಟೆಂಡರ್ ಪಡೆದಿದ್ದರ ಕುರಿತು ಸಹ‌ ವಿವಾದವಾಯ್ತು. ಆಗ ದೇವೇಗೌಡರು ಕರೆದು ಹೇಳಿದರು. ನಾನು ಅಧಿಕಾರದಲ್ಲಿ ಇರುವಾಗ ಸರ್ಕಾರಿ ಟೆಂಡರ್ ಪಡೆಯಬೇಡಾ ಎಂದರು. ಆಗ ಸರ್ಕಾರಿ ಟೆಂಡರ್ ಪಡೆಯೋದನ್ನ ಬಿಟ್ಟೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯನವರೇ ನನ್ನ ರಾಜಗುರುಗಳು ಎನ್ನುವ ವ್ಯಕ್ತಿಯೇ ಅಂದು ನನಗೆ ಫೋನ್ ಮಾಡಿ ಗೋಪಲಯ್ಯನ ನಾನೇ ಕಳುಹಿಸಿದ್ದೇನೆ ಅಂತ ಥ್ರೆಟ್ ಮಾಡಿದ್ದರು ಅಂತ ಜಮೀರ್ ಹೆಸರು ಉಲ್ಲೇಖಿಸದೆ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈಗ ಜಮೀರ್ ಅಲ್ಪಸಂಖ್ಯಾತರ ಎದುರು ಹೋಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಿ ಅಂತ ನನಗೆ ಥ್ರೆಟ್ ಮಾಡಿದ್ದನ್ನು ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ

ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು, ಯಡಿಯೂರಪ್ಪ ಜತೆ ಸೇರಿ ಒಳಸಂಚು ಮಾಡಿದ್ರು; ಹೆಚ್​ಡಿ ಕುಮಾರಸ್ವಾಮಿ ಆರೋಪ

ಹೆಚ್​ಡಿ ಕುಮಾರಸ್ವಾಮಿ ಆಡಿಯೋ ಕ್ಲಿಪ್ ನನ್ನ ಹತ್ತಿರ ಇದೆ; ಶಾಸಕ ಜಮೀರ್

Published On - 11:59 am, Tue, 26 October 21

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ