ಕುಮಾರಸ್ವಾಮಿಗೆ ಬುದ್ಧಿ ಹೇಳಿದ್ದೇ ಮುಳುವಾಯ್ತು! ನಡುರಾತ್ರಿ ಹೋಟೆಲ್ನಲ್ಲಿ ನಡೆದಿದ್ದ ಸಭೆಯ ವಿವರ ಬಿಚ್ಚಿಟ್ಟ ಗುಬ್ಬಿ ಶಾಸಕ ಶ್ರೀನಿವಾಸ್
ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಇಂದು ಮತ್ತೊಂದು ಮಜಲು ತಲುಪಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ನಡೆದಿರುವ ಆಂತರಿಕ ವಿಚಾರಗಳು ಜಗಜ್ಜಾಹೀರಾಗುತ್ತಿವೆ. ಬೆಂಗಳೂರಿನ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ನಡೆದಿದ್ದ ಸಭೆಯ ರಹಸ್ಯ ಬಿಚ್ಚಿಟ್ಟ ಶಾಸಕ ಎಸ್.ಆರ್. ಶ್ರೀನಿವಾಸ್, ಕುಮಾರಸ್ವಾಮಿ ಹಾಗೂ ಜಮೀರ್ ಟೀಂ ನಡುವೆ 2013ರಲ್ಲಿ ಮಧ್ಯರಾತ್ರಿ 4 ಗಂಟೆವರೆಗೂ ಸಭೆ ನಡೆದಿತ್ತು. ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟರಾಜು ಪಾಲ್ಗೊಂಡಿದ್ದ ಸಭೆ […]
ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಇಂದು ಮತ್ತೊಂದು ಮಜಲು ತಲುಪಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ನಡೆದಿರುವ ಆಂತರಿಕ ವಿಚಾರಗಳು ಜಗಜ್ಜಾಹೀರಾಗುತ್ತಿವೆ. ಬೆಂಗಳೂರಿನ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ನಡೆದಿದ್ದ ಸಭೆಯ ರಹಸ್ಯ ಬಿಚ್ಚಿಟ್ಟ ಶಾಸಕ ಎಸ್.ಆರ್. ಶ್ರೀನಿವಾಸ್, ಕುಮಾರಸ್ವಾಮಿ ಹಾಗೂ ಜಮೀರ್ ಟೀಂ ನಡುವೆ 2013ರಲ್ಲಿ ಮಧ್ಯರಾತ್ರಿ 4 ಗಂಟೆವರೆಗೂ ಸಭೆ ನಡೆದಿತ್ತು.
ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟರಾಜು ಪಾಲ್ಗೊಂಡಿದ್ದ ಸಭೆ ಅದು. ಜಮೀರ್ ಟೀಂ ಹಾಗೂ ಕುಮಾರಸ್ವಾಮಿ ನಡುವೆ ನಡೆದಿದ್ದ ಸಂಧಾನ ಸಭೆ ಅದು. ಕುಮಾರಸ್ವಾಮಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ಅಲ್ಲಿಗೆ ಲಿ ಮೆರಿಡಿಯನ್ ಹೋಟೆಲ್ನಲ್ಲಿ ಅಂದು ನಡೆದಿದ್ದ ಸಭೆಯೇ ಶಾಸಕ ಎಸ್.ಆರ್. ಶ್ರೀನಿವಾಸ್ಗೆ ಈಗ ಜೆಡಿಎಸ್ನಿಂದ ವಿಮುಖವಾಗಲು ಕಾರಣವಾಯ್ತು ಎಂಬುದು ಸ್ಪಷ್ಟವಾಗಿದೆ.
ಬೆಳಗಿನ ಜಾವ 4 ಗಂಟೆವರೆಗೂ ನಡೆದ ಸಭೆಯಲ್ಲಿ ನಡೆದಿದ್ದಾದ್ರೂ ಏನು? ಕುಮಾರಸ್ವಾಮಿಯ ತಪ್ಪುಗಳನ್ನ ಅತೃಪ್ತ ಶಾಸಕರು ಎತ್ತಿ ತೋರಿಸಿದರು ಎಂದು 2013 ರಲ್ಲಿ ನಡೆದ ಸಭೆಯ ವಿವರವನ್ನ ಶ್ರೀನಿವಾಸ್ ತಿಳಿಸಿದರು. ಸಂಧಾನ ಸಭೆ ಭಿನ್ನಮತವಾಗಿ ಸ್ಫೋಟವಾಯ್ತಾ? ಮಧು ಬಂಗಾರಪ್ಪ, ಜಿ.ಟಿ. ದೇವೇಗೌಡ ಹಾಗೂ ಸುರೇಶ್ ಬಾಬು, ಸಾರಾ ಮಹೇಶ್ ಸೇರಿ ಕುಮಾರಸ್ವಾಮಿ ಹಾಗೂ ಜಮೀರ್ ಅಂಡ್ ಟೀಂ ಅನ್ನು ಒಂದು ಮಾಡಲು ನಡೆಸಿದ್ದ ಸಭೆ ಅದು. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ರಾತ್ರಿ 3-4 ಗಂಟೆವರೆಗೂ ಜಮೀರ್ ಅಹಮದ್ ಕುಮಾರಸ್ವಾಮಿ ಮೇಲೆ ದೂರುಗಳೆ ಹೇಳ್ತಿದ್ದರು. ಕುಮಾರಸ್ವಾಮಿ ಸುಮ್ಮನೇ ಕುಳಿತಿದ್ದರು.
ಕೊನೆಗೆ ಸಭೆ ಮುಕ್ತಾಯ ಮಾಡಲು ನನಗೆ ಎಲ್ಲಾ ಹೇಳಿದರು. ಆಗ ನಾನು, ನೀವು ಯಾಕೆ ಮಾತನಾಡ್ತಿಲ್ಲ ಅಂತಾ ಕುಮಾರಸ್ವಾಮಿಗೆ ಕೇಳಿದೆ. ಮೇಲ್ನೋಟಕ್ಕೆ ನಿಮ್ಮದೇ ತಪ್ಪು ಅಂತಾ ಕಾಣುತ್ತೆ. ಇನ್ನು ಮುಂದೆ ಸರಿಮಾಡಿಕೊಂಡು ಹೋಗ್ತಿನಿ ಅಂತಾ ಹೇಳಿ ಎಂದೆ. ಆದರೆ ಕುಮಾರಸ್ವಾಮಿ ಅವರು ವಾಸು ಹೇಗೆ ಹೇಳ್ತಾರೋ ಹಾಗೇ ಅಂತಾ ಹೇಳಿದರು. ಅಲ್ಲಿಂದಲೇ ಶುರುವಾಯ್ತು ನನ್ನ ಹಾಗೂ ಅವರ ನಡುವಿನ ಬಿರುಕು. ಎರಡ್ಮೂರು ಸಲ ಅವರನ್ನ ಮಾತನಾಡಿಸುವ ಪ್ರಯತ್ನ ಮಾಡಿದೆ. ಆದರೆ ನನಗೆ ಕುಮಾರಸ್ವಾಮಿ ರೆಸ್ಪಾನ್ಸ್ ಮಾಡಲಿಲ್ಲ, ನಾನೂ ಸುಮ್ಮನಾದೆ. ಹೋಟೆಲ್ ನಲ್ಲಿ ನೀವು ಮಾತನಾಡಬಾರದಿತ್ತು ಅಂತಾ ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದರು. ಹೀಗೆ ಎಳೆ ಎಳೆಯಾಗಿ ಕುಮಾರಸ್ವಾಮಿ ಹಾಗೂ ತಮ್ಮ ನಡುವಿನ ಬಿರುಕಿನ ರಹಸ್ಯವನ್ನು ಎಸ್.ಆರ್. ಶ್ರೀನಿವಾಸ್ ಬಿಚ್ಚಿಟ್ಟರು.
ನಿಖಿಲ್ ಕುಮಾರಸ್ವಾಮಿಯೇ ಸೀಮಂತ ಕಾರ್ಯಕ್ರಮಕ್ಕೆ ಕರೆದಿದ್ದ. ಹೋಗಿದ್ದೆ: ಮುಂದುವರಿದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಶಾಸಕ ಶ್ರೀನಿವಾಸ್ ಜೆಡಿಎಸ್ ಕಾರ್ಯಾಗಾರಕ್ಕೆ ನನಗೆ ಆಹ್ವಾನ ಕೊಟ್ಟಿರಲಿಲ್ಲ. ನನ್ನ ಹೆಸರು ಬ್ಲಾಕ್ ಮಾಡಿಸಿದ್ದರು ಎಂದು ದೂರಿದ್ದಾರೆ. ಅವರೂ (ಹೆಚ್‌ಡಿಕೆ) ಪೋನ್ ಮಾಡಿಲ್ಲ ನಾನೂ ಸಂಪರ್ಕಕ್ಕೆ ಸಿಕ್ಕಿಲ್ಲ. ನನಗೆ ಕಾರ್ಯಾಗಾರಕ್ಕೆ ಪೋನ್ ಮಾಡಿರಲಿಲ್ಲ. ಮೊದಲು ಮಗನ ಸೀಮಂತಕ್ಕೆ ಹೋಗಿದ್ದೆ. ಅಲ್ಲಿ ಕುಮಾರಸ್ವಾಮಿ ನನ್ನ ಮಾತನಾಡಿಸಲಿಲ್ಲ. ಯಾರು ಏನು ಅಂತಾ ಕೂಡ ಕೇಳಲಿಲ್ಲ. ನಿಖಿಲ್ ಕುಮಾರಸ್ವಾಮಿಯೇ ಕಾರ್ಯಕ್ರಮಕ್ಕೆ ಕರೆದಿದ್ದ. ಹೋಗಿದ್ದೆ. ಪೋಟೊ ತೆಗೆಸಿಕೊಂಡು ಬಂದೆ. ಇದಾದ ಬಳಿಕ ರೇವಣ್ಣ ಮನೆಗೆ ಊಟಕ್ಕೆ ಕರೆದಿದ್ದರು. ನಾನು ಎದರು ಬದರು ಸಿಕ್ಕರೂ (ಹೆಚ್‌ಡಿಕೆ) ಮಾತನಾಡಿಸಿಲ್ಲ. ಸಾರಾ ಮಹೇಶ್, ವಾಸು ಬಂದವರೇ ಅಂತಾ ಹೇಳಿದರೂ (ಹೆಚ್‌ಡಿಕೆ) ಮಾತನಾಡಿಸಿಲ್ಲ.
ಬಳಿಕ ಪೋನ್ ಮಾಡಿದರೂ ನಾಳೆ ತೋಟಕ್ಕೆ ಬಾ ಅಂದ್ರು. ನಾನು ನಾಳೆ ಬರವುದಕ್ಕೆ ಆಗಲ್ಲ ಅಣ್ಣ, ಕಾರ್ಯಾಗಾರ ದಿನ ಬರ್ತಿನಿ ಎಂದೆ. ಕಾರ್ಯಾಗಾರದ ಮೊದಲ ದಿನ ನಾನು ಹೋಗಲು ಆಗಲಿಲ್ಲ. ಎರಡನೇ ದಿನ ಕಾರ್ಯಾಗಾರಕ್ಕೆ ಹೋದೆ. ನನ್ನ ಹೆಸರು ಬ್ಲಾಕ್ ಮಾಡಿಸಿದ್ದರು. ನನಗೆ ಪಾಸ್ ನೀಡಲಿಲ್ಲ. ಕಾರ್ಯಾಗಾರ ಒಳಗೆ ಹೋಗಲು ನನಗೆ ಅವಕಾಶವಿರಲಿಲ್ಲ. ಅಲ್ಲೇ ಅರ್ಧಗಂಟೆ ಕಾದಿದ್ದೆ. ನಮ್ಮ ಜಿಲ್ಲಾಧ್ಯಕ್ಷರು ಹೆಚ್‌ಡಿ ದೇವೇಗೌಡರ ಬಳಿ ಮಾತನಾಡಿದ ಬಳಿಕ ಪ್ರವೇಶ ಪಾಸ್ ಕೊಡಿಸಿದರು. ಕುಮಾರಸ್ವಾಮಿಗೆ ನಮಸ್ಕಾರ ಹೊಡೆದರೂ ಅವರು ನಮಸ್ಕಾರ ಎನ್ನಲಿಲ್ಲ. ಸಂಜೆ ಏಳು ಗಂಟೆವರೆಗೂ ಕಾರ್ಯಾಗಾರದಲ್ಲಿ ಇದ್ದೆ, ಬಳಿಕ ಮನೆಗೆ ವಾಪಸ್ ಬಂದೆ ಎಂದು ಶ್ರೀನಿವಾಸ್ ವಿವರಿಸಿದರು.
Nikhil ಸೋಲಿಗೆ ಹಾಗಾದ್ರೆ ನಾನು ಕಾರಣನಾ ಎಂದ ಜೆಡಿಎಸ್ ಶಾಸಕ |JDSMLA | Tv9kannada
(Gubbi jds mla sr srinivas discloses details of jds leaders hotel meeting involving hd kumaraswamy at mid night in bangalore)
Published On - 12:17 pm, Tue, 26 October 21