ಗುಬ್ಬಿ ವೀರಣ್ಣ ಹುಟ್ಟಿರುವ ಕ್ಷೇತ್ರ ನಮ್ಮದು, ಕುಮಾರಸ್ವಾಮಿ ನಾಟಕ ತುಂಬಾ ನೋಡಿದೀವಿ- ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಟಾಂಗ್
ನಾನು ದೇವರಲ್ಲಿ ಕೇಳಿಕೊಳ್ತೀನಿ. ನಾನು ಏನಾದರೂ ತಪ್ಪು ಮಾಡಿದ್ದರೇ ನಮ್ಮ ಮನೆ ಹಾಳಾಗಿ ಹೋಗಲಿ. ಕುಮಾರಸ್ವಾಮಿ ಸುಳ್ಳು ಹೇಳಿದ್ದರೇ ಅವರ ಮನೆ ಹಾಳಾಗಲಿ, ಅವರ ವಂಶ ಹಾಳಾಗಿ ಹೋಗಲಿ. ಯಾಕೆ ಜನರಿಗೆ ಸುಳ್ಳು ಹೇಳಬೇಕು ಎಂದು ತುಮಕೂರಿನಲ್ಲಿ ಎಸ್ ಆರ್ ಶ್ರೀನಿವಾಸ್ ಹೇಳಿದರು.

ತುಮಕೂರು: ಗುಬ್ಬಿ ಸಮಾವೇಶಕ್ಕೆ ಹಣ ನೀಡಿ ಜನ ಕರೆದುಕೊಂಡು ಬಂದಿದ್ದರು. ನಾನು ಯಾರನ್ನೂ ಹೋಗಬೇಡಿ ಅಂತಾ ಹೇಳಿರಲಿಲ್ಲ, ಡಂಗೂರ ಹೊಡೆಸಿಲ್ಲ. ನನಗೆ ಅಂತಾ ದರ್ದ್ ಇಲ್ಲ. ಕಾರ್ಯಕರ್ತರು ನನ್ನ ಕೇಳಿದರೂ ನಾನು ಹೋಗಲ್ಲ, ಬೇಕಿದ್ದರೆ ನೀವು ಹೋಗಿ ಎಂದೆ. ನಾಗರಾಜ್ ರನ್ನ ಪಕ್ಷಕ್ಕೆ ಸೇರಿಸಿಕೊಂಡು ಶ್ರೀನಿವಾಸ್ ಗೆ ಬಲ ತುಂಬುತೀವಿ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ಶ್ರೀನಿವಾಸ್ ಹೀಗೆ ಟಾಂಗ್ ಕೊಟ್ಟಿದ್ದಾರೆ.
ಈ ನಾಟಕ ತುಂಬಾ ನೋಡಿದೀವಿ, ಈ ಮಾತುಗಳನ್ನು ಯಾರಾದರೂ ಕಿವಿಗೆ ಹೂವು ಇಟ್ಟುಕೊಂಡಿರೋರಿಗೆ ಹೇಳಿದ್ರೆ ನಂಬ್ತಾರೆ. ನಾನು ಕಿವಿಯಲ್ಲಿ ಹೂವ ಇಟ್ಟುಕೊಂಡಿದೀನಾ? ನಾನು 20 ವರ್ಷ ರಾಜಕೀಯ ಮಾಡಿದೀನಿ. ನಮ್ಮ ಅಪ್ಪನ ಕಾಲದಿಂದಲೂ ರಾಜಕೀಯ ಮಾಡಿದೀನಿ. ನಮ್ಮದು ಗುಬ್ಬಿ ವೀರಣ್ಣ ಹುಟ್ಟಿರುವ ಕ್ಷೇತ್ರ, ಅವರ ನಾಟಕ ಗೊತ್ತು. ಒಬ್ಬ ವ್ಯಕ್ತಿ ಮುಗಿಸಲು ಏನೆಲ್ಲಾ ಆರೋಪ ಮಾಡ್ತಾರಂತೆ ನನಗೆ ಗೊತ್ತು. ದೇವೇಗೌಡರು ಸೋಲಿಸಿದರು ಅಂತಾರೆ, ಇವರಿಗೆ ದೇವರು ಒಳ್ಳೆಯದು ಮಾಡ್ತಾದಾ? ದೇವರು ಅವರಿಗೆ ಒಬ್ಬರಿಗೇನಾ ಇರೋದು, ನಮಗೆ ಇಲ್ವಾ.
ನಾನು ದೇವರಲ್ಲಿ ಕೇಳಿಕೊಳ್ತೀನಿ. ನಾನು ಏನಾದರೂ ತಪ್ಪು ಮಾಡಿದ್ದರೇ ನಮ್ಮ ಮನೆ ಹಾಳಾಗಿ ಹೋಗಲಿ. ಅವರು ತಪ್ಪು ಮಾಡಿದ್ದರೇ ಅವರ ಮನೆ ಹಾಳಾಗಿ ಹೋಗಲಿ. ದೇವೇಗೌಡರು ಸೋಲಲು ನಾನು ಸಣ್ಣ ಕೆಲಸ ಮಾಡಿದ್ದರೆ ನಮ್ಮ ಮನೆ ಹಾಳಾಗಲಿ. ಕುಮಾರಸ್ವಾಮಿ ಸುಳ್ಳು ಹೇಳಿದ್ದರೇ ಅವರ ಮನೆ ಹಾಳಾಗಲಿ, ಅವರ ವಂಶ ಹಾಳಾಗಿ ಹೋಗಲಿ. ಯಾಕೆ ಜನರಿಗೆ ಸುಳ್ಳು ಹೇಳಬೇಕು ಎಂದು ತುಮಕೂರಿನಲ್ಲಿ ಎಸ್ ಆರ್ ಶ್ರೀನಿವಾಸ್ ಹೇಳಿದರು.
ಟವೆಲ್ ಇಟ್ಕೊಂಡು ಕಣ್ಣೀರು ಹಾಕಿದ್ರೆ ಯಾರ್ ವೋಟ್ ಹಾಕ್ತಾರೆ? |JDSMLA | Tv9kannada
(Gubbi jds mla sr srinivas verbal attack on jds leader hd kumaraswamy in tumakuru)
Published On - 1:09 pm, Tue, 26 October 21




