AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಜೆಪಿಯವರು ಮು.. ಮಕ್ಕಳು, ಯಾರೂ ನನ್ನ ಕೂದಲು ಸಹ ಕಿತ್ಕೊಳ್ಳೋಕ್ಕೆ ಆಗೋದಿಲ್ಲ’ -ನಾಲಿಗೆ ಹರಿಯಬಿಟ್ಟ​ ಶಾಸಕ ಜಮೀರ್

ಬಿಜೆಪಿಯವರದ್ದು ಹಿಂದೂ ಮುಸ್ಲಿಂ ಅಂತ ಜಾತಿ ರಾಜಕಾರಣ. ಮುಂ.. ಮಕ್ಳದು ಬರೀ ಅದೇ ಎಂದು ಆಕ್ರೋಶದ ಧ್ವನಿಯಲ್ಲಿ ಕಾಂಗ್ರೆಸ್​ ಶಾಸಕ ಜಮೀರ್ ಅಹಮದ್​ ಖಾನ್ ನಾಲಿಗೆ ಹರಿಬಿಟ್ಟರು. ಇಡೀ ದೇಶದಲ್ಲಿ ನನಗೆ ಸಿಕ್ಕ ಪ್ರೀತಿ ಯಾರಿಗೂ ಸಿಕ್ಕಿಲ್ಲ. ಅದಿಕ್ಕೆ ಯಾರೂ ನನ್ನ ಕೂದಲು ಸಹ ಕಿತ್ಕೋಳೊಕ್ಕೆ ಆಗೋದಿಲ್ಲ ಎಂದು ಹಾನಗಲ್ ನರೇಗಲ್ ಗ್ರಾಮದಲ್ಲಿ ಜಮೀರ್ ಅಹ್ಮದ್ ಹೇಳಿದರು.

‘ಬಿಜೆಪಿಯವರು ಮು.. ಮಕ್ಕಳು, ಯಾರೂ ನನ್ನ ಕೂದಲು ಸಹ ಕಿತ್ಕೊಳ್ಳೋಕ್ಕೆ ಆಗೋದಿಲ್ಲ’ -ನಾಲಿಗೆ ಹರಿಯಬಿಟ್ಟ​ ಶಾಸಕ ಜಮೀರ್
‘ಬಿಜೆಪಿಯವರು ಮು.. ಮಕ್ಕಳು’: ಹಾನಗಲ್ ಚುನಾವಣೆ ಪ್ರಚಾರದ ವೇಳೆ ನಾಲಿಗೆ ಹರಿಯಬಿಟ್ಟ ಶಾಸಕ ಜಮೀರ್ ಅಹ್ಮದ್
TV9 Web
| Updated By: ಸಾಧು ಶ್ರೀನಾಥ್​|

Updated on:Oct 26, 2021 | 2:31 PM

Share

ಹಾವೇರಿ: ರಾಜ್ಯದಲ್ಲಿ ಎರಡು ಅಸೆಂಬ್ಲಿ ಬೈ ಎಲೆಕ್ಷನ್​ಗಳು ಅಕ್ಟೋಬರ್​ 30ಕ್ಕೆ ನಿಗದಿಯಾಗಿದ್ದು, ರಾಜಕೀಯ ನಾಯಕರ ಮಾತುಗಳು ಪಂಚಾಯಿತಿ ಕಟ್ಟೆಗಿಂತ ಕೆಳಮಟ್ಟಕ್ಕೆ ತೂರಿಹೋಗುತ್ತಿವೆ. ಇನ್ನೂ ನಾಲ್ಕು ದಿನ ಇವರ ಮಾತುಗಳನ್ನು ಸಹಿಸಿಕೊಳ್ಳುವುದು ಹೇಗಪ್ಪಾ ಎಂದು ಅಲ್ಲಿನ ಮತದಾರರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಮಧ್ಯೆ, ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್​, ಆಡಳಿತಾರೂಢ ಬಿಜೆಪಿ ಸದಸ್ಯರ ಬಗ್ಗೆ ಕೀಳು ಭಾಷೆಯಲ್ಲಿ ಸಂಭೋದಿಸಿದ್ದಾರೆ. ಪ್ರಚಾರದ ವೇಳೆ ತಮ್ಮ ನಾಲಿಗೆಯನ್ನು ಹರಿಯಬಿಟ್ಟ ಬೆಂಗಳೂರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್​ (zameer ahmed khan) ಬಿಜೆಪಿಯವರ ವಿರುದ್ಧ ಅವಾಚ್ಯ ಶಬ್ದ ಪ್ರಯೋಗಿಸಿದ್ದಾರೆ. ಹಾನಗಲ್ ತಾಲೂಕಿನ ನರೇಗಲ್‌ನಲ್ಲಿ ಪ್ರಚಾರ ಸಭೆಯಲ್ಲಿ ಅವಾಚ್ಯ ಪದ ಬಳಕೆ ಮಾಡಿದ ಶಾಸಕ ಜಮೀರ್ ‘ಬಿಜೆಪಿಯವರು ಮು.. ಮಕ್ಕಳು’ ಎಂದಿದ್ದಾರೆ.

ಪ್ರಚಾರದ ವೇಳೆ ತಮ್ಮ ನಾಲಿಗೆಯನ್ನು ಹರಿಯಬಿಟ್ಟ ಬೆಂಗಳೂರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್​ (zameer ahmed khan) ಬಿಜೆಪಿಯವರ ವಿರುದ್ಧ ಅವಾಚ್ಯ ಶಬ್ದ ಪ್ರಯೋಗಿಸಿದ್ದಾರೆ. ಹಾನಗಲ್ ತಾಲೂಕಿನ ನರೇಗಲ್‌ನಲ್ಲಿ ಪ್ರಚಾರ ಸಭೆಯಲ್ಲಿ ಅವಾಚ್ಯ ಪದ ಬಳಕೆ ಮಾಡಿದ ಶಾಸಕ ಜಮೀರ್ ‘ಬಿಜೆಪಿಯವರು ಮು.. ಮಕ್ಕಳು’ ಎಂದಿದ್ದಾರೆ.

ಉದಾಸಿಯವರನ್ನ ಬಹಳ‌ ಹತ್ತಿರದಿಂದ ನೋಡಿದ್ದೇನೆ. ಅವರೂ ಜೆಡಿಎಸ್ ನಲ್ಲಿದ್ದರು ನಾನೂ ಜೆಡಿಎಸ್ ನಲ್ಲಿದ್ದೆ. ಅವರದ್ದು ಜಾತ್ಯತೀತ ನಿಲುವು ಆಗಿತ್ತು. ಅವರು ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎಂದು ನರೇಗಲ್ ಗ್ರಾಮದ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದರು.

ಮುಂದೆ ರಾಜ್ಯದಲ್ಲಿ ನೂರಕ್ಕೆ ನೂರು ನಮ್ಮ ಸರ್ಕಾರ ಬರುತ್ತೆ. ಈ ಶಾದಿ ಮಹಲ್ ಗೆ ಇನ್ನೂ ಎಷ್ಟು ಬೇಕೋ ಅಷ್ಟು ಹಣ‌ ಕೊಡ್ತೀನಿ. ಜೆಡಿಎಸ್ ಅಲ್ಪಸಂಖ್ಯಾತ ಕ್ಯಾಂಡಿಡೇಟ್ ಹಾಕಿದೆ‌. 2014 ರಲ್ಲೂ ಜೆಡಿಎಸ್ ಇದನ್ನೇ ಮಾಡಿತ್ತು. ಅವಾಗ ಇವರಿಗೆ ಕೇವಲ 1023 ಮತ ಬಿದ್ದಿದ್ವು. ನಾಚಿಕೆಯಾಗಬೇಕು ಜೆಡಿಎಸ್ ಗೆ. ಯಾರೋ ಕೌನ್ಸಿಲರ್ 2-3 ಸಾವಿರ ವೋಟ್ ತೋಗೋತಾರೆ. ಸಿಂದಗಿಯಲ್ಲಿ ಬಿಜೆಪಿಯರೇ ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳುತ್ತಾರೆ. ಸಿಂದಗಿಯಲ್ಲಿ ಹೆಚ್ ಡಿಕೆಗೆ ಸೂಟ್ ಕೇಸ್ ಸಿಕ್ಕಿದೆ. ಅದಕ್ಕೇ ಅಲ್ಲೆ ಠಿಕಾಣಿ ಹೂಡಿದ್ದಾರೆ. ಇಲ್ಲಿ ಅರ್ಧಂಬರ್ಧ ಸಿಕ್ಕಿದೆ ಅದಕ್ಕೆ ಇಲ್ಲಿ ಬಂದಿದೆ.

ಕುಮಾರಸ್ವಾಮಿ ಇಬ್ಬರು ಕ್ಯಾಂಡಿಟ್ ಗಳನ್ನ ಮುಗಿಸ್ತಾರೆ. ಇಲ್ಲಿ ಸೂಟ್ ಕೇಸ್ ಸಿಗ್ಲಿಲ್ಲ ಅದಿಕ್ಕೆ ಇಲ್ಲಿಂದ ವಾಪಸ್ ಹೋಗಿದ್ದಾನೆ. ಜೆಡಿಎಸ್ ಬಿಜೆಪಿಯಿಂದ ಸೂಟ್ ಕೇಸ್ ತೆಗೆದುಕೊಂಡು ಮುಸ್ಲಿಂ ಕ್ಯಾಂಡಿಟ್ ಹಾಕಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಮತ್ತೊಮ್ಮೆ ಗಂಭೀರ ಆರೋಪ ಮಾಡಿದರು. ಬಸವಕಲ್ಯಾಣದಲ್ಲೂ 10 ಕೋಟಿ ಹಣ ತೆಗೆದುಕೊಂಡು ಕ್ಯಾಂಡಿಡೇಟ್ ಹಾಕಿದ್ರು. ಆವತ್ತೇ ನಾನ್ ಹೆಚ್ ಡಿಕೆಗೆ ಸವಾಲ್ ಹಾಕಿದ್ದೆ. ಆದ್ರೆ ಚರ್ಚೆಗೆ ಬರಲಿಲ್ಲ ಎಂದರು

ಯಾರೂ ನನ್ನ ಕೂದಲು ಸಹ ಕಿತ್ಕೋಳೊಕ್ಕೆ ಆಗೋದಿಲ್ಲ: ಬಿಜೆಪಿಯವರದ್ದು ಹಿಂದೂ ಮುಸ್ಲಿಂ ಅಂತ ಜಾತಿ ರಾಜಕಾರಣ. ಮುಂ.. ಮಕ್ಳದು ಬರೀ ಅದೇ ಎಂದು ಆಕ್ರೋಶದ ಧ್ವನಿಯಲ್ಲಿ ಕಾಂಗ್ರೆಸ್​ ಶಾಸಕ ಜಮೀರ್ ಅಹಮದ್​ ಖಾನ್ ನಾಲಿಗೆ ಹರಿಬಿಟ್ಟರು. ಮಾನೆ ನನ್ನ ತಮ್ಮ ಇದ್ದ ಹಾಗೆ. ಅವರು ಗೆದ್ರೆ ನಾನ್ ಗೆದ್ದಂಗೆ, ಸಿದ್ದರಾಮಯ್ಯ ಗೆದ್ದೆಂಗೆ. ಇಡೀ ದೇಶದಲ್ಲಿ ನನಗೆ ಸಿಕ್ಕ ಪ್ರೀತಿ ಯಾರಿಗೂ ಸಿಕ್ಕಿಲ್ಲ. ಅದಿಕ್ಕೆ ಯಾರೂ ನನ್ನ ಕೂದಲು ಸಹ ಕಿತ್ಕೋಳೊಕ್ಕೆ ಆಗೋದಿಲ್ಲ ಎಂದು ಹಾನಗಲ್ ನರೇಗಲ್ ಗ್ರಾಮದಲ್ಲಿ ಜಮೀರ್ ಅಹ್ಮದ್ ಹೇಳಿದರು.

(Congress mla zameer ahmed khan uses foul language against bjp leaders during hangal assembly by election)

Published On - 2:12 pm, Tue, 26 October 21