ಉಪಚುನಾವಣೆ ​ ಪ್ರಚಾರ: ಆಸಕ್ತಿ ತೋರದ ಸಚಿವ ನಿರಾಣಿ! ಸಿಎಂ ಬೊಮ್ಮಾಯಿ ಸುಸ್ತು, ಮತದಾರರಿಗೆ ತಲುಪಿದ ಸಂದೇಶ ಏನು?

Hangal assembly by election: ಹಾನಗಲ್‌ ಕ್ಷೇತ್ರಕ್ಕೆ ಚುನಾವಣೆ ಉಸ್ತುವಾರಿಯನ್ನಾಗಿಯೂ ಅವರನ್ನು ನೇಮಕ ಮಾಡಲಾಗಿತ್ತು. ಆದ್ರೆ ಸಚಿವ ಮುರುಗೇಶ್ ನಿರಾಣಿ ಹೆಚ್ಚು ಪ್ರಚಾರ ಕಾರ್ಯ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ಮತದಾರರಿಗೆ ಏನು ಸಂದೇಶ ರವಾನೆಯಾಗಿದೆ ಎಂಬುದು ಮತದಾನದ ದಿನ ಅರ್ಥವಾಗಲಿದೆ.

ಉಪಚುನಾವಣೆ ​ ಪ್ರಚಾರ: ಆಸಕ್ತಿ ತೋರದ ಸಚಿವ ನಿರಾಣಿ! ಸಿಎಂ ಬೊಮ್ಮಾಯಿ ಸುಸ್ತು, ಮತದಾರರಿಗೆ ತಲುಪಿದ ಸಂದೇಶ ಏನು?
ಉಪಚುನಾವಣೆ ​ ಪ್ರಚಾರದಲ್ಲಿ ಆಸಕ್ತಿ ತೋರದ ಸಚಿವ ನಿರಾಣಿ! ಸಿಎಂ ಬೊಮ್ಮಾಯಿ ಸುಸ್ತು, ಮತದಾರರಿಗೆ ತಲುಪಿದ ಸಂದೇಶ ಏನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 27, 2021 | 10:02 AM

ಹಾವೇರಿ: ರಾಜ್ಯದಲ್ಲಿ ಇದೇ ಶನಿವಾರ 2 ಕ್ಷೇತ್ರಗಳಿಗೆ ಅಸೆಂಬ್ಲಿ ಬೈ ಎಲಕ್ಷನ್ ನಡೆಯಲಿದೆ. ಇಂದು ​ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ವತಿಯಿಂದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆದಿದೆ. ಬಹುತೇಕ ಎಲ್ಲ ನಾಯಕರೂ ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಡೀ ಆಡಳಿತ ಉಪಚುನಾವನೆಗೆ ಮುಡಿಪಾಗಿದೆ ಎಂಬ ಆರೋಪಗಳೂ ಪ್ರತಿಪಕ್ಷಗಳಿಂದ ಕೇಳಿಬಂದಿದೆ. ಈ ಮಧ್ಯೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಒಂದು ವರ್ಗದ ನಾಯಕರು ಪ್ರಚಾರ ಕಾರ್ಯದಲ್ಲಿ ಅಷ್ಟೇನೂ ಆಸಕ್ತಿ ತೋರಿಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಅದರಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹೆಸರು ಸಣ್ಣ ಮತ್ತು ಬೃಹತ್​ ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ ಅವರದ್ದು.

ಲಿಂಗಾಯತ ಮತ್ತು ಪಂಚಮಸಾಲಿ ಮತಗಳಿಗೆ ಹೊಡೆತ ಹೌದು ಈ ಭಾಗದ ಪ್ರಭಾವೀ ನಾಯಕ, ಸಚಿವ ಮುರುಗೇಶ್​ ನಿರಾಣಿ ಉಪಚುನಾವಣೆಯಲ್ಲಿ ಹೆಚ್ಚು ಆಸಕ್ತಿ ತೋರಿಸಿಲ್ಲ. ಇದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಸು ಬೇಸ್ತು ಬಿದ್ದಿದ್ದಾರೆ. ಸಿಎಂ ಬೊಮ್ಮಾಯಿ ನಿರೀಕ್ಷೆಗೆ ತಕ್ಕಂತೆ ಸಚಿವ ನಿರಾಣಿ ಕೆಲಸ ಮಾಡಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಲಿಂಗಾಯತ ಮತ್ತು ಪಂಚಮಸಾಲಿ ಮತಗಳನ್ನು ಸಳೆಯಲು ಸಚಿವ ಮುರುಗೇಶ್ ನಿರಾಣಿ ಮಹತ್ತರ ಪಾತ್ರವಹಿಸಬೇಕಿತ್ತು. ಹಾನಗಲ್‌ ಕ್ಷೇತ್ರಕ್ಕೆ (Hangal assembly by election) ಚುನಾವಣೆ ಉಸ್ತುವಾರಿಯನ್ನಾಗಿಯೂ ಅವರನ್ನು ನೇಮಕ ಮಾಡಲಾಗಿತ್ತು. ಆದ್ರೆ ಸಚಿವ ಮುರುಗೇಶ್ ನಿರಾಣಿ ಹೆಚ್ಚು ಪ್ರಚಾರ ಕಾರ್ಯ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ಮತದಾರರಿಗೆ ಏನು ಸಂದೇಶ ರವಾನೆಯಾಗಿದೆ ಎಂಬುದು ಮತದಾನದ ದಿನ ಅರ್ಥವಾಗಲಿದೆ.

Also Read: ಅವ ಮುರುಗೇಶ್‌ ನಿರಾಣಿ ಯಾರ ಯಾರ ಸಿಡಿ ಇಟ್ಟಾನ ಎಲ್ಲಾ ಹೇಳ್ತೀನಿ: ಬಸನಗೌಡ ಪಾಟೀಲ ಯತ್ನಾಳ್

ByElection: ನಾಳೆಯಿಂದ ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಶುರು |Tv9kannada

(Hangal assembly by election minister murugesh nirani absent from campaign what is the message to voters)

Published On - 9:53 am, Wed, 27 October 21

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು