ಮಂಗಳೂರು: ನಗರದಲ್ಲಿ ಕೋಮುಗಲಭೆ (Communal Riots) ಸೃಷ್ಠಿಸಲು ಹದಿಮೂರರ ಹರೆಯದ ಬಾಲಕ ಯತ್ನಿಸಿರುವಂತಹ ಘಟನೆ ಜೂನ್ 27 ರಂದು ನಗರದ ಹೊರವಲಯದ ಕಾಟಿಪಳ್ಳದಲ್ಲಿ ನಡೆದಿದೆ. ಮದ್ರಾಸದಿಂದ ಬರುವಾಗ ಬೈಕ್ನಲ್ಲಿಬಂದ ಕೇಸರಿ ಶಾಲು ಧರಿಸಿದ ಇಬ್ಬರು ಹಲ್ಲೆ ಮಾಡಿದರು ಅಂತಾ ಬಾಲಕ ಕಥೆ ಕಟ್ಟಿದ್ದಾನೆ. ಜೊತೆಗೆ ಹಲ್ಲೆ ಮಾಡಿದರು ಅಂತಾ ಮಸೀದಿ ಉಸ್ತಾದ್ಗಳಿಗೆ ಬಾಲಕ ದೂರು ನೀಡಿದ. ಈ ವಿಚಾರವನ್ನು ಮುಂದಿಟ್ಟು ಎಲ್ಲರ ಗಮನ ಸೆಳೆಯಲು ಮುಂದಾಗಿದ್ದ. ಬಾಲಕನಿಗೆ ಹಲ್ಲೆ ವಿಚಾರ ಸೂಕ್ಷ್ಮ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು. ಆದರೆ ಪೊಲೀಸ್ ತನಿಖೆ ವೇಳೆ ಬಾಲಕನ ಕಟ್ಟು ಕಥೆ ಬಯಲಾಗಿದ್ದು, ದೂರು ನೀಡುವ ಮುನ್ನ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಬಾಲಕ ಬಂದಿದ್ದ. ಮದ್ರಾಸ್ದಿಂದ ಬರುತ್ತಿದ್ದ ಬಾಲಕನಿಗೆ ಹಲ್ಲೆ ಎಂಬುವುದನ್ನು ಮುಂದಿಟ್ಟು ಗಲಭೆಗೆ ಸಂಚು ರೂಪಿಸಿದ್ದ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ವಿರೋಧಿಸಿ ಟಿಆರ್ಎಸ್ ಬೆಂಬಲಿಗರಿಂದ ವಿನೂತನ ಪ್ರತಿಭಟನೆ
ತನ್ನ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಶಾಲೆಯಲ್ಲಿ, ಮನೆಯಲ್ಲಿ ಯಾರೂ ನನ್ನ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ಶಾಲೆಯಲ್ಲಿ ಕಲಿತ ಪಾಠ ತಲೆಗೆ ಹತ್ತುತ್ತಿಲ್ಲ. ಹೀಗಾಗಿ ಎಲ್ಲರ ಗಮನ ಸೆಳೆಯಲು ಕಟ್ಟು ಕಥೆ ಕಟ್ಟಿದೆ ಎಂದು ಪೊಲೀಸ್ ತನಿಖೆಯಲ್ಲಿ ಬಾಲಕ ಬಾಯಿ ಬಿಟ್ಟಿದ್ದಾನೆ. ವೈದ್ಯರು ಮತ್ತು ಚೈಲ್ಡ್ ವೆಲ್ ಫೇರ್ ಅಧಿಕಾರಿಗಳ ಮುಂದೆ ಪೊಲೀಸರು ಬಾಲಕನ ತನಿಖೆ ನಡೆಸಿದ್ದಾಗ ಸತ್ಯಾಂಶ ಬಯಲಾಗಿದೆ. ಬಾಲಕ ಮದ್ರಸಾದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗುತ್ತಿದೆ.