Industry: ಜೂನ್​ನಲ್ಲಿ ಒಟ್ಟು ಸಗಟು ಮಾರಾಟದಲ್ಲಿ 5.7 ಶೇಕಡಾ ಹೆಚ್ಚಳ: ಮಾರುತಿ ಸುಜುಕಿ ಇಂಡಿಯಾ

ಮಾರುತಿ ಸುಜುಕಿ ಇಂಡಿಯಾ ಶುಕ್ರವಾರದಂದು ಜೂನ್‌ನಲ್ಲಿ ಒಟ್ಟು ಸಗಟು ಮಾರಾಟದಲ್ಲಿ 5.7 ಶೇಕಡಾ ಹೆಚ್ಚಳವಾಗಿದ್ದಾಗಿ ವರದಿ ಮಾಡಿದೆ. ಜೂನ್ 2021ರಲ್ಲಿ 1,47,368 ಯುನಿಟ್‌ ಮಾರಾಟವಾಗಿತ್ತು ಎಂದು ಕಂಪನಿ ಹೇಳಿದೆ.

Industry: ಜೂನ್​ನಲ್ಲಿ ಒಟ್ಟು ಸಗಟು ಮಾರಾಟದಲ್ಲಿ 5.7 ಶೇಕಡಾ ಹೆಚ್ಚಳ: ಮಾರುತಿ ಸುಜುಕಿ ಇಂಡಿಯಾ
ಮಾರುತಿ ಸುಜುಕಿ
Follow us
TV9 Web
| Updated By: Rakesh Nayak Manchi

Updated on:Jul 02, 2022 | 11:37 AM

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಶುಕ್ರವಾರದಂದು ಜೂನ್‌ನಲ್ಲಿ ಒಟ್ಟು ಸಗಟು ಮಾರಾಟದಲ್ಲಿ 5.7 ಶೇಕಡಾ ಹೆಚ್ಚಳವಾಗಿದ್ದಾಗಿ ವರದಿ ಮಾಡಿದೆ. ಕಂಪನಿಯು ಜೂನ್ 2021 ರಲ್ಲಿ 1,47,368 ಯುನಿಟ್‌ಗಳನ್ನು ಡೀಲರ್‌ಗಳಿಗೆ ರವಾನಿಸಿದ್ದು, ಇದು 2022ರಲ್ಲಿ 1,55,857 ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Automobile: ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಅನಾವರಣ, ಇಲ್ಲಿದೆ ನೋಡಿ ಫೀಚರ್ಸ್

ಕಳೆದ ತಿಂಗಳು ಕಂಪನಿಯ ದೇಶೀಯ ಮಾರಾಟವು ಹೆಚ್ಚಳವಾಗಿದ್ದು, ಜೂನ್ 2021ರಲ್ಲಿನ 1,30,348 ಯುನಿಟ್‌ಗಳಿಗೆ ಹೋಲಿಸಿದರೆ ಈ ವರ್ಷದ ಜೂನ್​ನಲ್ಲಿ 1,32,024 ಯುನಿಟ್‌ಗಳಿಗೆ ಏರುವ ಮೂಲಕ ಶೇಕಡಾ 1.28 ರಷ್ಟು ಹೆಚ್ಚಾಗಿದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡಿರುವ ಮಿನಿ ಕಾರುಗಳ ಮಾರಾಟವು 14,442 ಯುನಿಟ್‌ಗಳಿಗೆ ಇಳಿಕೆಯಾಗಿದ್ದು, ಕಳೆದ ವರ್ಷದ ಇದೇ ತಿಂಗಳಿನಲ್ಲಿ 17,439 ಯುನಿಟ್‌ ಮಾರಾಟವಾಗಿತ್ತು ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: Automobile: ಟೆಸ್ಲಾ ಮಾಡೆಲ್-​3ಗೆ ಎದುರಾಳಿಯಾಗಿ ಬರುತ್ತಿರುವ Hyundai Ioniq 6EV

ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ ಮತ್ತು ಡಿಜೈರ್‌ನಂತಹ ಮಾದರಿಗಳು ಸೇರಿದಂತೆ ಕಾಂಪ್ಯಾಕ್ಟ್ ವಿಭಾಗದಲ್ಲಿ ಮಾರಾಟವು 77,746 ಯುನಿಟ್‌ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ 68,849 ಯುನಿಟ್​ಗಳು ಮಾರಾಟವಾಗಿದ್ದವು. ಈ ವರ್ಷದ ಜೂನ್ ತಿಂಗಳಲ್ಲಿ ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಮಾರಾಟವು ಜೂನ್ 2021ಕ್ಕೆ ಹೋಲಿಸಿದರೆ 602 ಯುನಿಟ್‌ಗಳಿಂದ 1,507 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಆದಾಗ್ಯೂ, ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎರ್ಟಿಗಾ ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು 18,860 ಯುನಿಟ್‌ಗಳಿಗೆ ಕುಸಿದಿದೆ, ಹಿಂದಿನ ವರ್ಷದ ತಿಂಗಳಿಗೆ ಹೋಲಿಸಿದರೆ 28,172 ವಾಹನಗಳು ಮಾರಾಟವಾಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ. ಕಳೆದ ತಿಂಗಳು ರಫ್ತು 23,833 ಯುನಿಟ್‌ಗಳಿಗೆ ಜಿಗಿದಿದ್ದು, ಕಳೆದ ವರ್ಷ ಇದೇ ತಿಂಗಳಿಗೆ 17,020 ವಾಹನಗಳು ರಫ್ತು ಆಗಿದ್ದವು ಎಂದು ಕಂಪನಿ ತಿಳಿಸಿದೆ. 

ಇದನ್ನೂ ಓದಿ: OnePlus Nord: ಭಾರತದಲ್ಲಿ ಬಿಡುಗಡೆಯಾಯ್ತು OnePlus Nord 2T 5G, ಬಿಡುಗಡೆಯ ವಿಶೇಷ ಕೊಡುಗೆಗಳು ಇಲ್ಲಿವೆ ನೋಡಿ

Published On - 11:37 am, Sat, 2 July 22