ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್​: ಕೈಗೆ ಸಿಗದ ರಾಜೀವ್​​ ಗೌಡನನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದೇಗೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ

ಮಹಿಳಾ ಅಧಿಕಾರಿಗೆ ಬೆದರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಓಡಾಡಯತ್ತಿದ್ದ ಆರೋಪಿ ರಾಜೀವ್​​ ಗೌಡನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಖಾಕಿ ಖೆಡ್ಡಾಕ್ಕೆ ಬೀಳಿಸಿದ ರೀತಿಯೇ ರೋಚಕವಾಗಿದ್ದು, ಆತನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿಯನ್ನೂ ಈ ವೇಳೆ ಅರೆಸ್ಟ್​ ಮಾಡಲಾಗಿದೆ. ಅಷ್ಟಕ್ಕೂ ಪೊಲೀಸರ ಕಾರ್ಯಾಚರಣೆ ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್​: ಕೈಗೆ ಸಿಗದ ರಾಜೀವ್​​ ಗೌಡನನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದೇಗೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ
ಬೆದರಿಕೆ ಕೇಸ್​​ನಲ್ಲಿ ರಾಜೀವ್​​ ಗೌಡ ಬಂಧನ
Edited By:

Updated on: Jan 27, 2026 | 1:02 PM

ಮಂಗಳೂರು, ಜನವರಿ 27: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದಿಸಿ ಧಮ್ಕಿ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡ ಕೊನೆಗೂ ಲಾಕ್​​ ಆಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡು ಊರೂರು ಅಲೆಯತ್ತಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಅಷ್ಟಕ್ಕೂ ರಾಜೀವ್​​ ಗೌಡ ಎಲ್ಲಿದ್ದಾನೆ ಎಂಬ ಬಗ್ಗೆ ಖಾಕಿ ಮಾಹಿತಿ ಕಲೆ ಹಾಕಿರೋದೇ ಬಹಳ ಇಂಟರೆಸ್ಟಿಂಗ್​​ ಆಗಿದೆ.

ಆರೋಪಿ ರಾಜೀವ್​​ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಎಂಬ ವಿಚಾರ ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಲಾಗಿತ್ತು. ಮಂಗಳೂರಲ್ಲಿ ಇದ್ದ ರಾಜೀವ್​​ ಗೌಡ ಬೇರೆ ರಾಜ್ಯಕ್ಕೆ ಎಸ್ಕೇಪ್​​ ಆಗಿದ್ದಾನೆ ಎಂಬ ಬಗ್ಗೆ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು. ಆ ವೇಳೆ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಜೊತೆ ಆರೋಪಿ ಇರೋದು ಕನ್ಫರ್ಮ್​​ ಆಗಿದೆ. ಆದರೆ ಮೈಕಲ್ ಜೋಸೇಫ್ ರೇಗೊ ಫೋನ್ ನಂಬರ್ ಪೊಲೀಸರ ಬಳಿ ಇರಲಿಲ್ಲ. ಎಷ್ಟು ಹುಡುಕಾಡಿದ್ರು ಫೋನ್ ನಂಬರ್ ಸಿಗದ ಕಾರಣ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಅಂತಿಮವಾಗಿ ಪೊಲೀಸರು ಮಾಡಿದ್ದ ಮಾಸ್ಟರ್​​ ಪ್ಲ್ಯಾನ್​​ ಸಕ್ಸಸ್​​ ಆಗಿದೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್; ಆರೋಪಿ ರಾಜೀವ್ ಗೌಡ ಕೊನೆಗೂ ಅರೆಸ್ಟ್!

ರಾಜೀವ್​​ಗೆ ಆಶ್ರಯ ಕೊಟ್ಟ ಉದ್ಯಮಿಯೂ ಅರೆಸ್ಟ್​​


ಮೈಕಲ್​​ ನಂಬರ್​​ ಸಿಗದ ಕಾರಣ ಉದ್ಯಮಿಯ ಹಿನ್ನೆಲೆಯನ್ನು ಪೊಲೀಸರು ಕೆದಕಿದ್ದಾರೆ. ಮೈಕಲ್ ಮಗ ಬಹಳ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ USAನಿಂದ ಬೆಂಗಳೂರು ಏರ್ಪೋರ್ಟ್​​ಗೆ ಬಂದಿದ್ದ ಮೈಕಲ್ ಮಗ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಮಂಗಳೂರಿನ ಪಬ್ ಒಂದರ ಮಾಲಕರಾಗಿರುವ ಮೈಕಲ್ ಸೋದರ ಸಂಬಂಧಿಯೊಬ್ಬರಿಗೆ ತಾವು ಚಿಕ್ಕಜಾಲ ಪೊಲೀಸರು ಅಂತಾ ದೂರವಾಣಿ ಕರೆ ಮಾಡಲಾಗಿದೆ. ಮೈಕಲ್ ಮಗನ ಸಾವಿನ ವಿಚಾರದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಹೇಳಿ ಪೊಲೀಸರು ನಂಬರ್​​ ಪಡೆದಿದ್ದಾರೆ. ಬಳಿಕ ಆ ನಂಬರ್​ ಟ್ರೇಸ್​​ ಮಾಡಿ ಮೈಕಲ್ ಹಾಗೂ ಜೊತೆ ಇದ್ದ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.