Uroos in Ullal: ಉಳ್ಳಾಲ ಉರೂಸ್ ನಲ್ಲಿ ಜೈಂಟ್ ವ್ಹೀಲ್ ತುಂಡಾಗಿ ಮಕ್ಕಳಿಗೆ ಗಾಯ
ಉರೂಸ್ ಪ್ರಯುಕ್ತ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ ಜಾಯಿಂಟ್ ವ್ಹೀಲ್ ನಲ್ಲಿ ಆಟವಾಡುತ್ತಿದ್ದರು. ಏಕಾಏಕಿ ವ್ಹೀಲ್ ಜಾಯಿಂಟ್ ತಪ್ಪಿದ ಪರಿಣಾಮ ನಾಲ್ವರು ಮಕ್ಕಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.
ಮಂಗಳೂರು: ಉಳ್ಳಾಲದಲ್ಲಿ (Ullal) ನಡೆಯುತ್ತಿರುವ ಪಂಚ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ (Annual Uroos Festival) ಜಾಯಿಂಟ್ ವ್ಹೀಲ್ ತುಂಡಾಗಿ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಉರೂಸ್ ಪ್ರಯುಕ್ತ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ ಜಯಿಂಟ್ ವ್ಹೀಲ್ ನಲ್ಲಿ ಆಟವಾಡುತ್ತಿದ್ದರು. ಏಕಾಏಕಿ ವ್ಹೀಲ್ ಜಾಯಿಂಟ್ ತಪ್ಪಿದ ಪರಿಣಾಮ ನಾಲ್ವರು ಮಕ್ಕಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.
ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಜನ ಜಮಾಯಿಸಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳು ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೋಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಐದು ವರ್ಷಕ್ಕೊಮ್ಮೆ ನಡೆಯುವ ಉಳ್ಳಾಲ ದರ್ಗಾ ಉರೂಸ್ 2020ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ನಡೆದಿರಲಿಲ್ಲ. ಈ ಬಾರಿ ಹೆಚ್ಚು ಜನ ಸೇರಿದ್ದರು. ಅಂತಹ ಸಂದರ್ಭದಲ್ಲಿ ಈ ಅವಘಢ ನಡೆದಿದೆ ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲೀಬಾ ತಿಳಿಸಿದ್ದಾರೆ.
ಐತಿಹಾಸಿಕ ಪುಣ್ಯ ಸ್ಥಳವಾದ ಉಳ್ಳಾಲದ ಸಂತ ಋತುಬುಜ್ಜಮಾನ್ ಹಝ್ರತ್ ಅಸ್ಸಯದ್ ಮುಹಮ್ಮದ್ ಷರೀಫುಲ್ ಮದನಿ ಅವರ 492ನೇ ವಾರ್ಷಿನ ಮತ್ತು 21ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮ ಡಿಸೆಂಬರ್ 22 ರಿಂದ ಜನವರಿ 16 ರವರೆಗೂ ಆಯೋಜಿಸಲಾಗಿದೆ.
ಉಳ್ಳಾಲದಲ್ಲಿ ಪಂಚ ವಾರ್ಷಿಕ ಉರೂಸ್ ವೇಳೆ ಜಾಯಿಂಟ್ ವ್ಹೀಲ್ ತುಂಡಾಗಿ ಮಕ್ಕಳಿಗೆ ಗಾಯ
Also Read: Aa Dinagalu Chetan kumar: ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
Also Read: God Shani Dev: ಲಕ್ಷ್ಮಿ ಬರುವಾಗ ಚಂದ, ಶನಿ ಹೋಗುವಾಗ ಚಂದ! ಇದು ಕೇಳಕ್ಕೆ ಇನ್ನೂ ಚೆನ್ನಾಗಿದೆ! ಏನು ಹಾಗೆಂದರೆ?
Published On - 7:18 am, Wed, 23 February 22