Video: ವಿಮಾನದಲ್ಲಿ ಕೇಳಿಬಂತು ತುಳು ಭಾಷೆಯ ಅನೌನ್ಸ್​ಮೆಂಟ್! ವೈರಲ್ ಆಯ್ತು ವಿಡಿಯೋ

| Updated By: ganapathi bhat

Updated on: Dec 25, 2021 | 9:27 PM

ಡಿಸೆಂಬರ್ 24 ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ಇಂಡಿಗೋ ಏರ್​ಲೈನ್ಸ್ ವಿಮಾನದಲ್ಲಿ ಹೀಗೆ ತುಳು ಭಾಷೆಯ ಘೋಷಣೆ ಕೇಳಿ ಸಿಕ್ಕಿದೆ. ಉಡುಪಿ ಮೂಲದ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬ ಪೈಲೆಟ್ ತುಳು ಭಾಷೆಯಲ್ಲಿ ಜರ್ನಿಗೆ ಶುಭಾಶಯ ಕೋರಿದ್ದಾರೆ.

Video: ವಿಮಾನದಲ್ಲಿ ಕೇಳಿಬಂತು ತುಳು ಭಾಷೆಯ ಅನೌನ್ಸ್​ಮೆಂಟ್! ವೈರಲ್ ಆಯ್ತು ವಿಡಿಯೋ
ವಿಮಾನದಲ್ಲಿ ತುಳು ಭಾಷೆಯಲ್ಲಿ ಸೂಚನೆ
Follow us on

ಮಂಗಳೂರು: ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸಿದ್ರೆ ಅಲ್ಲಿ ನೀಡುವ ಸೂಚನೆಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಅಲ್ಲಿ ಒಂದಷ್ಟು ಸಮಾನ್ಯ ವಿಚಾರ ಇರುತ್ತೆ. ವಿಮಾನದಲ್ಲಿನ ಪ್ರಯಾಣ, ನಡವಳಿಕೆಗಳ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ಅಲ್ಲಿ ಹೇಳುತ್ತಾರೆ. ಆದರೆ ಈಗ ಈ ಸೂಚನೆಗಳ ಅನೌನ್ಸ್​ಮೆಂಟ್ ತುಳು ಭಾಷಿಕರಲ್ಲಿ ಹೊಸ ಆಸಕ್ತಿ ಮೂಡಿಸಿದೆ. ಅದಕ್ಕೆ ಕಾರಣ ವಿಮಾನದಲ್ಲಿ ಮಾಡಲಾದ ತುಳು ಭಾಷೆಯ ಅನೌನ್ಸ್​ಮೆಂಟ್.

ಹೌದು, ಮಹಾರಾಷ್ಟ್ರದ ಮುಂಬೈ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ತುಳು ಭಾಷೆಯಲ್ಲಿ ಕೂಡ ಸೂಚನೆ ಕೊಡಲಾಗಿದೆ. ಡಿಸೆಂಬರ್ 24 ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ಇಂಡಿಗೋ ಏರ್​ಲೈನ್ಸ್ ವಿಮಾನದಲ್ಲಿ ಹೀಗೆ ತುಳು ಭಾಷೆಯ ಘೋಷಣೆ ಕೇಳಿ ಸಿಕ್ಕಿದೆ. ಉಡುಪಿ ಮೂಲದ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬ ಪೈಲೆಟ್ ತುಳು ಭಾಷೆಯಲ್ಲಿ ಜರ್ನಿಗೆ ಶುಭಾಶಯ ಕೋರಿದ್ದಾರೆ.

ವಿಮಾನಗಳಲ್ಲಿ ಇಂತಹ ಸೂಚನೆ ಅಥವಾ ಅನೌನ್ಸ್​ಮೆಂಟ್​ಗಳನ್ನು ಮಾಡುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸಲಾಗುತ್ತದೆ. ಇನ್ನು ಅಂತರಾಷ್ಟ್ರೀಯ ವಿಮಾನಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿದರೆ, ಡೊಮೆಸ್ಟಿಕ್ ವಿಮಾನಗಳಲ್ಲಿ ಇಂಗ್ಲೀಷ್ ಜೊತೆ ಹಿಂದಿ ಭಾಷೆಯನ್ನು ಬಳಸುತ್ತಾರೆ. ಆದರೆ ಪ್ರಾದೇಶಿಕ ಭಾಷೆಯನ್ನು ಬಳಸೋದು ವಿರಳವಾಗಿದ್ದು ತುಳು ಭಾಷೆಯನ್ನು ಬಳಸಿದ್ದು ಈಗ ತುಳುವರಿಗೆ ಹೆಮ್ಮ ಪಡುವ ವಿಚಾರವಾಗಿದೆ. ಇನ್ನು ಪೈಲಟ್ ತುಳು ಜೊತೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಅನೌನ್ಸ್​ಮೆಂಟ್ ಮಾಡಿದ್ದಾರೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

ಇದನ್ನೂ ಓದಿ: ಒಮಿಕ್ರಾನ್ ಭೀತಿ ಹೆಚ್ಚಳ; ಭಾರತದ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ಇದನ್ನೂ ಓದಿ: ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ : ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ