ಮೋದಿ ಚೀತಾ ಟೀಮ್ ಡಾಕ್ಟರ್, ಹುಲಿ ಪ್ರಾಣ ಉಳಿಸಿದ್ದ ಕತೆ..!
ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಹುಟ್ಟಿದ ಹಬ್ಬದ ಅಂಗವಾಗಿ ಎಂಟು ಚೀತಾಗಳನ್ನು ಭಾರತಕ್ಕೆ ತರಿಸುವ ಕಾರ್ಯದಲ್ಲಿ ಇದ್ದ ಕರ್ನಾಟಕದ ಕನ್ನಡಿಗ ವೈದ್ಯ ಡಾ.ಸನತ್ ಕೃಷ್ಣ ಮುಳಿಯ.
2013 ರಲ್ಲಿ ಹುಲಿಯೊಂದು ಮೂವರನ್ನು ಕೊಂದಿತ್ತು. ಹೀಗಾಗಿ ಹುಲಿಯ ದಾಳಿಗೆ ಬೇಸತ್ತು ಸರ್ಕಾರ ಶೂಟ್ ಅಂಡ್ ಸೈಟ್ ಆರ್ಡರ್ ಹೊರಡಸಿತ್ತು. ಅಂದು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ತಂಡ ಸ್ಥಳೀಯರು ಎಲ್ಲರೂ ಸೇರಿ ಹುಲಿಯನ್ನು ಕೊಂಡುಹಿಡಿಯಲು ಹೊರಟಿದ್ದರು. ಆಗ ಆ ಹುಲಿಯನ್ನು ಜೀವಂತವಾಗಿ ಹಿಡಿದಿದ್ದು ಡಾ. ಸನತ್ ಕೃಷ್ಣ ಮುಳಿಯ.
2013 ರಲ್ಲಿ ನಿದ್ದೆಗಡಿಸಿದ್ದ ನರಹಂತಕ ಹುಲಿ..! ಹುಲಿ ಹಿಡಿಯಲು ಶೂಟ್ ಅಂಡ್ ಸೈಟ್ ಆರ್ಡರ್..!
2013ರಲ್ಲಿ ಮೈಸೂರು ಮತ್ತು ಚಾಮಾರಾಜನಗರ ಜಿಲ್ಲೆಗಳ ವ್ಯಾಪ್ತಿಗೆ ಬರೋ ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಕಾಡಂಚಿನ ಗ್ರಾಮದಲ್ಲಿ ಅದೊಂದು ಭಾರೀ ಭಯ ಹುಟ್ಟಿಕೊಂಡಿತ್ತು. ಅದೊಂದು ನರಹಂತಕ ವ್ಯಾಘ್ರ ಹುಲಿ ಸುತ್ತಮುತ್ತಲಿನ ಗ್ರಾಮಗಳ ಜನರ ನಿದ್ದೆಗೆಡಿಸಿತ್ತು. ಮನುಷ್ಯರ ಮೇಲೆ ದಾಳಿ ಮಾಡಿ ಒಟ್ಟು ಮೂವರನ್ನು ಕೊಂದು ಹಾಕಿತ್ತು. ಹುಲಿ ಉಪಟಳದಿಂದಾಗಿ ಜನರು ಅರಣ್ಯ ಇಲಾಖೆ ಕಚೇರಿಗಳ ಮೇಲೆ ದಾಳಿಯನ್ನು ಮಾಡಲು ಆರಂಭ ಮಾಡಿದರು.
ಇದರಿಂದ ಬೇಸತ್ತ ಅರಣ್ಯ ಇಲಾಖೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಪತ್ರ ಬರೆಯಿತು. ಹುಲಿಯು ನಿರಂತರವಾಗಿ ಮನುಷ್ಯರನ್ನು ಬೇಟೆ ಆಡುತ್ತಿರುವುದರಿಂದ ಹುಲಿಯನ್ನು ಕೊಲ್ಲಲು ಅನುಮತಿಯನ್ನು ಕೇಳಲಾಯಿತು. ಅಂದಿನ ಅರಣ್ಯ ಸಚಿವ ರಮಾನಾಥ ರೈ ನೇತೃತ್ವದ ಅರಣ್ಯ ಇಲಾಖೆ ಹುಲಿಯನ್ನು ಕೊಲ್ಲಲು ಶೂಟ್ ಅಂಡ್ ಸೈಟ್ ಆರ್ಡರ್ ಹೊರಡಿಸಿತು. ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದ ನಿರ್ದೇಶಕ ಕಾಂತರಾಜು ಸೇರಿದಂತೆ ಹಿರಿಯ ಅಧಿಕಾರಿಗಳ ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಅದರಂತೆ ಆ ಹುಲಿಯನ್ನು ಕೊಲ್ಲಲು ತಂಡಗಳನ್ನು ರಚಿಸಲಾಯಿತು.
ಹುಲಿಯನ್ನು ಕೊಲ್ಲಲು ಅರಣ್ಯ ಅಧಿಕಾರಿಗಳು ಪೊಲೀಸರು ಸ್ಥಳೀಯರು ಎದುರು ನೋಡುತ್ತಿದ್ದರೆ ಅಲ್ಲೊಬ್ಬ ವೈದ್ಯ ಮಾತ್ರ ಅದನ್ನು ಜೀವಂತವಾಗಿ ಹಿಡಿಯಲು ಏಕಾಂಗಿಯಾಗಿ ಪಣತೊಟ್ಟಿದ್ದ. ಅವರೇ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಮುಳಿಯ ಗ್ರಾಮದ ನಿವಾಸಿ ಡಾ.ಸನತ್ ಕೃಷ್ಣ ಮುಳಿಯ. ಡಾ.ಸನತ್ ಕೃಷ್ಣ ಮುಳಿಯ ಅವರು ಬೇರೆ ಯಾರು ಅಲ್ಲ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಹುಟ್ಟಿದ ಹಬ್ಬದ ಅಂಗವಾಗಿ ಎಂಟು ಚೀತಾಗಳನ್ನು ಭಾರತಕ್ಕೆ ತರಿಸುವ ಕಾರ್ಯದಲ್ಲಿ ಇದ್ದ ಕರ್ನಾಟಕದ ಕನ್ನಡಿಗ ವೈದ್ಯ ಡಾ.ಸನತ್ ಕೃಷ್ಣ ಮುಳಿಯ
ಯಾರು ಡಾ.ಸನತ್ ಕೃಷ್ಣ ಮುಳಿಯ..!
ಅಂದು ನರಭಕ್ಷಕನನ್ನು ಜೀವಂತವಾಗಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಡಾ.ಸನತ್ ಕೃಷ್ಣ ಮಳಿಯರ ಪಾತ್ರ ಏನೆಂಬುದು ಯಾರಿಗೂ ತಿಳಿದಿಲ್ಲ. ಅದಕ್ಕು ಮೊದಲು ಈ ಸನತ್ ಕೃಷ್ಣ ಬಗ್ಗೆ ತಿಳಿಯೋದಾದ್ರೆ. ದಕ್ಷಿಣ ಕನ್ನಡ ಜಿಲ್ಲೆಯ ಬಟ್ಕಳ ತಾಲೂಕಿನ ವಿಟ್ಲದ ಮುಳಿಯದವರಾದ ಡಾ ಸನತ್ ಕೃಷ್ಣ ಅವರು ಮುಳಿಯ, ಕೇಶವ ಭಟ್ ಮತ್ತು ಎಲ್ಐಸಿ ಏಜೆಂಟ್ ಉಷಾ ಮೂಲ್ಯ ದಂಪತಿಯ ಪುತ್ರ. ಪಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದಿರುವ ಅವರು ಅದೇ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅಮೇರಿಕಾದಲ್ಲಿ ಒಂದೆರಡು ತಿಂಗಳು ಸಂಶೋಧನೆ ಮುಗಿಸಿ, ಭಾರತಕ್ಕೆ ಹಿಂತಿರುಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪಶುವೈದ್ಯಕೀಯ ವೈದ್ಯನಾಗಿ ಕೆಲಸ ಮಾಡಿದ್ದರು. ಆನೆಗಳನ್ನು ಸೆರೆಹಿಡಿಯಲು ಹಿರಿಯ ವೈದ್ಯರೊಂದಿಗೆ ವಿವಿಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರೂ, 2013 ರ ಡಿಸೆಂಬರ್ನಲ್ಲಿ ನಡೆದ ಹುಲಿ ಹಿಡಿಯೊ ಕಾರ್ಯಾಚರಣೆ ಮೊದಲನೆಯದಾಗಿತ್ತು. 33 ವರ್ಷದ ಡಾ ಸನತ್ ಕೃಷ್ಣ ಅವರು ದೊಡ್ಡ ಕಾರ್ಯಾಚರಣೆಯ ಸಮಯದಲ್ಲಿ ಪ್ರಾಣಿಯನ್ನು ಶಾಂತಗೊಳಿಸುವ ಜವಾಬ್ದಾರಿಯನ್ನು ಮಾತ್ರ ಹೊರುತ್ತಿದ್ದರು.
ಹುಲಿ ಕೊಲ್ಲೊ ಉತ್ಸಾಹದಲ್ಲಿದ್ದ ಅರಣ್ಯಾಧಿಕಾರಿಗಳು..!
ಅಂದು ಹುಲಿಯನ್ನು ಕಂಡರೆ ಗುಂಡಿಕ್ಕಿ ಕೊಲ್ಲುವಂತೆ ಸರಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು 2013 ಡಿಸೆಂಬರ್ 05 ನಾಲ್ಕು ತಂಡಗಳಾಗಿ ಮಾನವಶಕ್ತಿಯನ್ನು ವಿಂಗಡಿಸಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಒಂದು ಬಾರಿ ಹುಲಿ ಜನರ ಮೇಲೆ ದಾಳಿ ಮಾಡಿದ ಸ್ಥಳಗಳಲ್ಲಿ ಕಾಯುತ್ತಿದ್ದಾಗ, ಆನೆಗಳ ಮೇಲೆ ಮೂರು ತಂಡಗಳು ಹುಲಿಯನ್ನು ಹುಡುಕಲು ಕಾಡಿಗೆ ಹೋದವು. ಡಾ.ಸನತ್ ಕೃಷ್ಣ ಅವರು ಮಾವುತ್ ಪರ್ವೇಜ್, ಸಹಾಯಕ ಕರಂಬಯ್ಯ ಮತ್ತು ಶೂಟರ್ ಜೊತೆಗೆ 80 ವರ್ಷದ ‘ಕಾಂತಿ’ ಎಂಬ ಆನೆಗಳ ಮೇಲೆ ಇದ್ದರು. ಡಾ ಸನತ್ ಕೃಷ್ಣ ಅವರು ಅರಿವಳಿಕೆ ತಜ್ಞರಾಗಿರುವುದರಿಂದ ಹುಲಿಯನ್ನು ಶಾಂತಗೊಳಿಸುವ ನಿರ್ಣಾಯಕ ಜವಾಬ್ದಾರಿಯನ್ನು ಹೊಂದಿದ್ದರು.
ಡಿಸೆಂಬರ್ 05, 2013 ರಂದು ಹುಲಿ ಜೀವಂತ ಸೆರೆ..! ಆನೆಯ ವರ್ತನೆಯಲ್ಲಿ ಹಠಾತ್ ಬದಲಾವಣೆಯಿಂದಾಗಿ ಹುಲಿ ಇರುವ ಸ್ಥಳವನ್ನು ತಂಡವು ತಿಳಿದುಕೊಂಡಿತು. ಶಿಥಿಲಗೊಂಡ ಆನೆಯು ಸುರಕ್ಷಿತ ಸ್ಥಳಗಳಿಗೆ ಓಡಲು ಬಯಸಿದಾಗ, ಮಾವುತ ಆನೆಯನ್ನು ಅಲ್ಲೇ ಇರಲು ಪ್ರೋತ್ಸಾಹಿಸಿದನು. ಡಾ.ಸನತ್ ಕೃಷ್ಣ ಅವರು ಅಂದು ಮಧ್ಯಾಹ್ನ 12.05 ಗಂಟೆಗೆ ಟ್ರ್ಯಾಂಕ್ವಿಲೈಸರ್ ಅನ್ನು ಹುಲಿ ಮೇಲೆ ಹೊಡೆದರು ಮತ್ತು ಮಧ್ಯಾಹ್ನ 12.10 ರ ಸುಮಾರಿಗೆ ಹುಲಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿತು. ನಂತರ ಅರಣ್ಯಾಧಿಕಾರಿಗಳು ಹುಲಿಯನ್ನು ಮೈಸೂರು ಮೃಗಾಲಯಕ್ಕೆ ಕೊಂಡೊಯ್ದರು. ನಿರಾಳವಾದ್ರು ಚಾಮಾರಾಜನಗರ ಮೈಸೂರು ಕಾಡಂಚಿನ ಜನರು..!
ನರಹಂತಕ ಹುಲಿಯನ್ನು ಜೀವಂತವಾಗಿ ಹಿಡಿದಿದ್ದಾರೆ ಅಂತ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಮೈಸೂರು ಮತ್ತು ಚಾಮಾರಾಜನಗರ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದರು. ಹುಲಿಯನ್ನು ಕೊಲ್ಲಲಿಲ್ಲವಲ್ಲ ಅಂತ ಕೆಲವರು ಕೈ ಕೈ ಹಿಸಿಕೊಂಡಿದ್ದರು. ಆದರೆ ವನ್ಯಜೀವಿಗಳ ಮೇಲೆ ಪ್ರೀತಿ ಇಟ್ಟವರು ಈ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದರು. ಅಂದು ಏಕಾಂಗಿಯಾಗಿ ಈ ಹುಲಿಯನ್ನು ಜೀವಂತವಾಗಿ ಹಿಡಿಯಬೇಕು ಅಂತ ಪಣ ತೊಟ್ಟಿದ್ದು ಇದೇ ಸನತ್ ಕೃಷ್ಣ.
ಹುಲಿ ನರಹಂತಕ ಆಗಲು ಕಾರಣ ಹುಡುಕಿದ್ದ ಡಾ.ಸನತ್ ಕೃಷ್ಣ..!
ಅಂದು ಹುಲಿ ಹಿಡಿದ ಡಾ ಸನತ್ ಕೃಷ್ಣ ಹುಲಿಯನ್ನು ಪರೀಕ್ಷಿಸಿದಾಗ ಬೆನ್ನುಮೂಳೆ ಅಥವಾ ಮುಳ್ಳುಹಂದಿಯ ಪೊಕುಪೈನ್ಸ್ ಕ್ವಿಲ್ನ್ನು ಕಂಡು ಗಾಬರಿಯಾಗಿದ್ದರು. ಹುಲಿ ಮನುಷ್ಯರನ್ನು ಬೇಟೆಯಾಡಲು ಇದು ಕಾರಣವಾಗಿರಬಹುದು ಮತ್ತು ಪ್ರಾಣಿಗಳಲ್ಲ ಎಂದು ಅವರು ಭಾವಿಸಿದ್ದರು. ಇಂತಹ ಪಶುವೈಧ್ಯ ಡಾ.ಸನತ್ ಕೃಷ್ಣ ಮುಳಿಯ ಮೋದಿ ಚೀತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದಾರೆ.
ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
Published On - 9:34 pm, Sun, 18 September 22