Mangalore News: ರೈಲ್ವೆ ನಿಲ್ದಾಣದ ಸೂಚನಾ ಫಲಕದಕಲ್ಲಿ ಕನ್ನಡ ಮಾಯ: ಸಾರ್ವಜನಿಕರಿಂದ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Oct 16, 2023 | 1:16 PM

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ದಕ್ಷಿಣ ಅಳವಡಿಸಿರುವ ಸೂಚನಾ ಫಲಕದಲ್ಲಿ ಕನ್ನಡ ಭಾಷೆಯೇ ಮಾಯವಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇದನ್ನು ನೋಡಿದ ರೈಲ್ವೆ ಯೂನಿಯನ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಪಾಲಕ್ಕಾಡ್ ರೈಲ್ವೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

Mangalore News: ರೈಲ್ವೆ ನಿಲ್ದಾಣದ ಸೂಚನಾ ಫಲಕದಕಲ್ಲಿ ಕನ್ನಡ ಮಾಯ: ಸಾರ್ವಜನಿಕರಿಂದ ಆಕ್ರೋಶ
ಕನ್ನಡ ಭಾಷೆ ಇಲ್ಲದ ಸೂಚನಾ ಫಲಕ
Follow us on

ಮಂಗಳೂರು ಅ.15: ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ (Railway Station) ಮತ್ತು ಗಡಿಯಲ್ಲಿನ ಸರ್ಕಾರಿ ಕಚೇರಿಗಳಲ್ಲಿನ ಸೂಚನಾ ಫಲಕಗಳಲ್ಲಿ ಕನ್ನಡ ಮಾಯವಾಗಿರುವ ಸುದ್ದಿಗಳು ಆಗಾಗ ವರದಿಯಾಗುತ್ತವೆ. ಇದೀಗ ಮಂಗಳೂರು ಜಂಕ್ಷನ್ (Mangalore Junction) ರೈಲು ನಿಲ್ದಾಣದಲ್ಲಿ ದಕ್ಷಿಣ ಅಳವಡಿಸಿರುವ ಸೂಚನಾ ಫಲಕದಲ್ಲಿ ಕನ್ನಡ ಭಾಷೆಯೇ ಮಾಯವಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ನಿಲ್ದಾಣದಲ್ಲಿ ಅವಡಿಸಿರುವ ಒಂದು ಫಲಕದಲ್ಲಿ “ಮಂಗಳೂರು ಜಂಕ್ಷನ್ ರನ್ನಿಂಗ್ ರೂಮ್” ಎಂದು ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂನಲ್ಲಿ ಭಾಷೆಯಲ್ಲಿ ಮಾತ್ರ ಬರೆಯಲಾಗಿದೆ.

ಇದನ್ನು ನೋಡಿದ ರೈಲ್ವೆ ಯೂನಿಯನ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಪಾಲಕ್ಕಾಡ್ ರೈಲ್ವೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ಹೆಚ್ಚುವರಿಯಾಗಿ, ಅವರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಲಭ್ಯ; ಉಚಿತ ಬಳಕೆಗೆ ಎಷ್ಟು ವೈಫೈ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಸಾರ್ವಜನಿಕರು ಮತ್ತು ರೈಲ್ವೆ ನೌಕರರ ಸಂಘದ ಒತ್ತಡಕ್ಕೆ ಮಣಿದ ಅಧಿಕಾರಿಗಳು ಶನಿವಾರ ಫಲಕವನ್ನು ತೆಗೆದರು. ರೈಲ್ವೆ ಪ್ರಯಾಣಿಕರು ಹೊಸ ಸೂಚನಾ ಫಲಕದಲ್ಲಿ ಮಲಯಾಳಂ ಬದಲಿಗೆ ಕನ್ನಡವನ್ನು ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ